ಭಾರತ-ಪಾಕಿಸ್ತಾನ ಕದನಕ್ಕೂ ಮುನ್ನ ಟ್ವಿಟ್ಟರಲ್ಲಿ ಮಳೆ, ಗುಡುಗಿನ ಸದ್ದು

ಬೆಂಗಳೂರು, ಜೂನ್ 16: ವಿಶ್ವಕಪ್ ಸಮರದಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ತೀವ್ರ ಹಣಾಹಣಿಯ ನಿರೀಕ್ಷೆ ಹುಟ್ಟುಕೊಂಡಿದೆ.
ಮ್ಯಾಂಚೆಸ್ಟರ್ ನಲ್ಲಿ ಮ್ಯಾಚಿಗೆ ಮಳೆ ಅಡ್ಡಿಯಾಗುವ ಲಕ್ಷಣಗಳಿದ್ದರೂ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಮುಂಜಾನೆಯಿಂದಲೆ ಸಿದ್ಧರಾಗಿದ್ದಾರೆ. ಪಂದ್ಯಕ್ಕೂ ಮುನ್ನ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪರಸ್ಪರ ಕಾಲೆಳೆಯುವುದು, ಅಣಕಿಸುವುದು, ಗೇಲಿ ಮಾಡುವುದು ನಡೆದಿವೆ. ಟ್ರಾಲ್ ಪೇಜ್ ಗಳಿಗಂತೂ ಇಂದು ಬಿಡುವೇ ಇಲ್ಲ.
ಇಂಡೋ-ಪಾಕ್ ಕ್ರಿಕೆಟ್ಕದನದಲ್ಲಿ ಆಟಗಾರರಷ್ಟೇ ಪ್ರಾಮುಖ್ಯತೆ ಈ ಬಾರಿ ಮಳೆರಾಯನಿಗೂ ಸಿಕ್ಕಿದೆ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ ನಲ್ಲಿ ನೇರ ಪ್ರಸಾರವಿದೆ.
ಈಗಾಗಲೇ ನಾಲ್ಕು ಪಂದ್ಯಗಳು ರದ್ದಾಗಿದ್ದು, ಸ್ಟಾರ್ ಸ್ಪೋರ್ಟ್ ಗೆ 200 ಕೋಟಿ ರು ಗೂ ಅಧಿಕ ನಷ್ಟವಾಗಿದೆ. 1992 ಹಾಗೂ 2003ರ ವಿಶ್ವಕಪ್ ನಲ್ಲಿ ತಲಾ 2 ಪಂದ್ಯಗಳು ಮಾತ್ರ ರದ್ದಾಗಿದ್ದವು, ಆದರೆ, ಈ ಬಾರಿ ಹೆಚ್ಚು ಪಂದ್ಯಗಳು ರದ್ದಾಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಟ್ವಿಟ್ಟರಲ್ಲಿ ಸದ್ಯಕ್ಕೆ ಹಾಸ್ಯಮಯವಾಗಿ ಸಾಗಿರುವ ಇಂಡೋ-ಪಾಕ್ ಟ್ವೀಟ್ ವಾರ್, ಪಂದ್ಯ ಮುಗಿಯುವ ವೇಳೆಗೆ ಯಾವ ಹಂತ ತಲುಪುವುದೋ ಕಾದು ನೋಡಬೇಕಿದೆ.

ಪ್ರಿಯಾಂಕಾ ಮಾತ್ರ ಪಂದ್ಯ ಉಳಿಸಬಲ್ಲರು
ನಟಿ ಪ್ರಿಯಾಂಕಾ ಛೋಪ್ರಾ ಅವರ ಉದ್ದದ ಗೌನ್ ಮಾತ್ರ ಮಳೆಯಿಂದ ಪಂದ್ಯವನ್ನು ರಕ್ಷಿಸಬಲ್ಲದು. ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇಂದು ಮಳೆ ಭೀತಿ ಎದುರಾಗಿದೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದೇ ಅನುಮಾನ ಎಂಬ ಸುದ್ದಿ ಇರುವುದರಿಂದ ಈ ರೀತಿ ಟ್ರಾಲ್ ಗಳು, ಟ್ವೀಟ್ಸ್ ಹೆಚ್ಚಾಗಿದೆ.

ಅಪ್ಪಂದಿರ ದಿನದ ಶುಭಾಶಯಗಳು
ಭಾನುವಾರ(ಜೂನ್ 16) ದಂದು ಅಪ್ಪಂದಿರ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಅಪ್ಪಂದಿರ ದಿನದಂದು ಭಾರತಕ್ಕೆ ಪಾಕಿಸ್ತಾನ ಈ ರೀತಿ ಶುಭ ಕೋರಿರಬಹುದಲ್ಲವೆ ಎಂದು ಚಿತ್ರದ ಮೂಲಕದ ಟ್ವೀಟ್ ಮಾಡಲಾಗಿದೆ. ಈ ಹಿಂದೆ ಜಾಹೀರಾತುಗಳಲ್ಲೂ ಅಪ್ಪಂದಿರ ದಿನಾಚರಣೆಯನ್ನು ಆಧಾರವಾಗಿಟ್ಟುಕೊಂಡು ಭಾರತ ಹಾಗೂ ಪಾಕಿಸ್ತಾನ ನಡುವೆ ಆಡ್ ಮಾಡಲಾಗಿತ್ತು.

ಮ್ಯಾಂಚೆಸ್ಟರ್ ನಲ್ಲಿ ಹವಾಮಾನ ಹೇಗಿದೆ
ಮ್ಯಾಂಚೆಸ್ಟರ್ ನಲ್ಲಿ ಹವಾಮಾನ ಹೇಗಿದೆ ಎಂಬುದು ಎಲ್ಲರ ಪ್ರಶ್ನೆ. ಕೆಲವರು ಹವಾಮಾನ ವರದಿ ನೀಡಿದ್ದಾರೆ.

ಗಂಡನ ಕೈಗೆ ರಿಮೋಟ್ ಸಿಗುವುದೆ?
ಇವತ್ತು ಭಾನುವಾರವಾದ್ದರಿಂದ ಕ್ರಿಕೆಟ್ ಪ್ರೇಮಿ ಗಂಡಂದಿರು ಸ್ವಲ್ಪ ಬಚಾವ್. ಕಾರಣ, ಇವತ್ತು ಸೀರಿಯಲ್ಸ್ ಇರಲ್ಲ, ಆದರೂ ರಿಮೋಟ್ ಮೇಲೆ ನಿಯಂತ್ರಣ ಹೊಂದಿರುವ ಪತ್ನಿಗೆ ಗಂಡಂದಿರು ಹಾಕಬಹುದಾದ ಕಂಡಿಷನ್ಸ್ ಬಗ್ಗೆ ಹಾಸ್ಯಮಯ ಟ್ವೀಟ್ ಇಲ್ಲಿದೆ.

ಪಂದ್ಯ ಎಷ್ಟು ತಂಡಗಳ ನಡುವೆ
ಪಂದ್ಯ ಎಷ್ಟು ತಂಡಗಳ ನಡುವೆ ನಡೆಯಲಿದೆ? ಭಾರತ ಹಾಗೂ ಪಾಕಿಸ್ತಾನ ಮಾತ್ರವಲ್ಲದೆ ಇಲ್ಲಿ ಮಳೆರಾಯನ ತಂಡವು ಸೆಣಸುತ್ತಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications