ಕ್ಲಾರ್ಕ್‌ರ ಶ್ರೇಷ್ಠ 7 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

ಸಿಡ್ನಿ, ಏಪ್ರಿಲ್ 7: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ವಿಶ್ವ ಕಂಡ ಅತ್ಯುತ್ತಮ ಆಟಗಾರರಲ್ಲೊಬ್ಬರು. ತಾನು ಜೊತೆಯಲ್ಲಿ ಆಡಿದ ಅಥವಾ ಎದುರಾಗಿ ಆಡಿದ ವಿಶ್ವದ ಶ್ರೇಷ್ಠ ಏಳು ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಕ್ಲಾರ್ಕ್ ತಯಾರಿಸಿದ್ದಾರೆ. ಉತ್ತಮ ನಾಯಕನಾಗಿ ಮುನ್ನಡೆಸಿದ್ದು, ಅತ್ಯುತ್ತಮ ರನ್ ದಾಖಲೆ ಹೊಂದಿದ್ದು, ವಿಶ್ವಕಪ್ ಗೆಲುವಿಗೆ ಕಾರಣವಾಗಿದ್ದನ್ನೆಲ್ಲ ಗಮನಿಸಿ ವಿಶ್ವದ ಶ್ರೇಷ್ಠ 7 ಕ್ರಿಕೆಟಿಗರನ್ನು ಹೆಕ್ಕಿ ತೆಗೆಯೋದು ಸುಲಭವಿಲ್ಲ.
ಶ್ರೇಷ್ಠ ಆಟಗಾರನಾಗಿದ್ದಕ್ಕೇ ಮೈಕಲ್ ಕ್ಲಾರ್ಕ್, ಜೊತೆಯಲ್ಲಿ ಅಥವಾ ವಿರುದ್ಧವಾಗಿ ಆಡಿದ 7 ಮಂದಿ ವಿಶ್ವಶ್ರೇಷ್ಠ ಕ್ರಿಕೆಟಿಗರನ್ನು ಆರಿಸಿತೆಗೆದಿದ್ದಾರೆ. ಕ್ಲಾರ್ಕ್ ಪಟ್ಟಿಯಲ್ಲಿ ಇಬ್ಬರು ಭಾರತೀಯರಿದ್ದಾರೆ.
ಕ್ಲಾರ್ಕ್ ನೆಚ್ಚಿನ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳ (7 ಮಂದಿಯ) ಪಟ್ಟಿ ಕೆಳಗಿನಂತಿದೆ.

1. ಸಚಿನ್ ತೆಂಡೂಲ್ಕರ್
ಕ್ಲಾರ್ಕ್ ಜೊತೆಯಲ್ಲಿ ಆಡಿದ ಅಥವಾ ಎದುರಾಗಿ ಆಡಿದ ಏಳು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದ್ದಾರೆ. 'ಔಟ್ ಮಾಡಲು ಬಲು ಕಷ್ಟವಾದ ಬ್ಯಾಟ್ಸ್‌ಮನ್. ನನ್ನ ಪ್ರಕಾರ ಸಚಿನ್ ತಂತ್ರಗಾರಿಕೆಯಲ್ಲಿ ಯಾವುದೇ ಲೋಪವಿರಲಿಲ್ಲ,' ಎಂದು ಕ್ಲಾರ್ಕ್ ತೆಂಡೂಲ್ಕರ್ ಬಗ್ಗೆ ಹೇಳಿಕೊಂಡಿದ್ದಾರೆ.

2. ಬ್ರಿಯಾನ್ ಲಾರಾ
ವೆಸ್ಟ್ ಇಂಡೀಸ್‌ನ ದಂತಕತೆ ಬ್ರಿಯಾನ್ ಲಾರಾ ಯಾರೇ ಪ್ರಕಟಿಸುವ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಸಾಮಾನ್ಯವಾಗಿ ಕಾಣಸಿಗುವ ಹೆಸರು. ಬೇರೆ ಅಂಕಿ ಅಂಶಿಗಳನ್ನು ಗಮನಿಸಿದರೆ ಲಾರಾ ದೊಡ್ಡ ಬ್ಯಾಟ್ಸ್‌ಮನ್ ಅನ್ನಿಸಲಾರೋ ಏನೋ. ಆದರೆ ಅವರು ಸ್ಪಿನ್ನರ್ ಅಥವಾ ಫಾಸ್ಟ್ ಬೌಲರ್‌ಗಳ ಎದುರು ಆಡುತ್ತಿದ್ದ ರೀತಿ ನಿಜಕ್ಕೂ ಮೆಚ್ಚಿಕೊಳ್ಳುವಂತದ್ದು ಎಂದು ಕ್ಲಾರ್ಕ್ ವಿವರಿಸಿದ್ದಾರೆ.

3 ವಿರಾಟ್ ಕೊಹ್ಲಿ
'ನನ್ನ ಪ್ರಕಾರ, ವಿರಾಟ್ ಕೊಹ್ಲಿ ವಿಶ್ವದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್. ಕೊಹ್ಲಿ ಒಂದು ದಿನ ಟಿ20 ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆಯುತ್ತಾರೆ,' ಎಂದು ಟೀಮ್ ಇಂಡಿಯಾದ ಈಗಿನ ನಾಯಕ ಕೊಹ್ಲಿ ಬಗ್ಗೆ ಕ್ಲಾರ್ಕ್ ನುಡಿಸಿದ್ದಾರೆ.

4. ಎಬಿ ಡಿವಿಲಿಯರ್ಸ್
ಕ್ಲಾರ್ಕ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ, ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿವಿಲಿಯರ್ಸ್ ಇದ್ದಾರೆ. ಎಬಿಡಿ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳುತ್ತಾರೆ, ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ,' ಎಂದು ಕ್ಲಾರ್ಕ್ ಭರವಸೆ ವ್ಯಕ್ತಪಡಿಸಿದ್ದಾರೆ. ಎಬಿಡಿ ಇತ್ತೀಚೆಗೆ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಆದರೆ ಎಬಿಡಿ ಮತ್ತೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

5. ಜಾಕ್ ಕ್ಯಾಲೀಸ್
ದಕ್ಷಿಣ ಆಫ್ರಿಕಾದ ಮತ್ತೊಬ್ಬ ಆಟಗಾರ, ಮಾಜಿ ಆಲ್ ರೌಂಡರ್ ಜಾಕ್ ಕ್ಯಾಲೀಸ್ ಕೂಡ ಕ್ಲಾರ್ಕ್ ಪಟ್ಟಿಯಲ್ಲಿದ್ದಾರೆ. 'ನಾನು ಆಡಿದವರಲ್ಲಿ ಶ್ರೇಷ್ಠ ಆಲ್ ರೌಂಡರ್. ಆಸ್ಟ್ರೇಲಿಯಾ ವಿರುದ್ಧ ಆಡುವಾಗೆಲ್ಲ ಇದರ ಪರಿಣಾಮ ನಮಗೆ ಕಾಣುತ್ತಿತ್ತು,' ಎಂದು ಕ್ಲಾರ್ಕ್, ಕ್ಯಾಲೀಸ್ ಬಗ್ಗೆ ಅಭಿಪ್ರಾಯಿಸಿದ್ದಾರೆ.

6. ರಿಕಿ ಪಾಂಟಿಂಗ್
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಕ್ಲಾರ್ಕ್ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿದ್ದಾರೆ. ಜೊತೆಗೆ ತಾನು ಮ್ಯಾಥ್ಯೂ ಹೇಡನ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಆ್ಯಡಂ ಗಿಲ್‌ಕ್ರಿಸ್ಟ್, ಡೇಮಿಯನ್ ಮಾರ್ಟಿನ್ ಅವರಂತ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಜೊತೆಗೂ ಆಡುವ ಅವಕಾಶ ಲಭಿಸಿದ್ದು ಖುಷಿಯಿದೆ ಎಂದೂ ಹೇಳಿಕೊಂಡಿದ್ದಾರೆ.

7. ಕುಮಾರ ಸಂಗಕ್ಕಾರ
ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಅವರು ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದವರಲ್ಲಿ ಅತೀ ಬಲಿಷ್ಠ ಬ್ಯಾಟ್ಸ್‌ಮನ್ ಎಂದು ಕ್ಲಾರ್ಕ್ ಹೇಳಿದ್ದಾರೆ. ಸಂಗಕ್ಕಾರ 115 ಟೆಸ್ಟ್ ಪಂದ್ಯಗಳಲ್ಲಿ 48.83ರ ಸರಾಸರಿಯಲ್ಲಿ 8643 ರನ್, 28 ಶತಕಗಳನ್ನು ಬಾರಿಸಿದ್ದಾರೆ. ಇನ್ನು 245 ಏಕದಿನದಲ್ಲಿ 44.59.ರ ಸರಾಸರಿಯಂತೆ 7981 ರನ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications