For Quick Alerts
ALLOW NOTIFICATIONS  
For Daily Alerts
 

ಭಾರತ ತಂಡದ ಬೆನ್ನೆಲುಬಾಗಿದ್ದ ಈ ಇಬ್ಬರು ಆಟಗಾರರಿಗೆ ಸಿಗದ ಅವಕಾಶ; ನಿವೃತ್ತಿ ಘೋಷಣೆ ಮಾಡ್ತಾರಾ?

ಜುಲೈ 15 ಮಂಗವಾರ, ಇತ್ತೀಚೆಗೆ ಭಾರತ ಕ್ರಿಕೆಟ್ ತಂಡಕ್ಕೆ ಒಂದಲ್ಲ ಒಂದು ಆಟಗಾರ ಪಾದಾರ್ಪಣೆ ಮಾಡುತ್ತಿದ್ದಾರೆ. ಯುವ ಆಟಗಾರರ ಚೊಚ್ಚಲ ಮತ್ತು ಅತ್ಯುತ್ತಮ ಪ್ರದರ್ಶನವು ಹಿರಿಯರಿಗೆ ತಂಡದಿಂದ ಕೈಬಿಡಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಈ ಸಾಲಿನಲ್ಲಿ ಒಂದು ಕಾಲದಲ್ಲಿ ಟೀಮ್‌ ಇಂಡಿಯಾದ ಬೆನ್ನೆಲುಬಾಗಿದ್ದ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ. ಆದರೆ ಈಗ ಅವಕಾಶ ಸಿಗದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಹಂತದಲ್ಲಿದ್ದಾರೆ.

Two players who were the backbone of the team India are not getting chance now

ಶಿಖರ್‌ ಧವನ್‌

ಟೀಮ್‌ ಇಂಡಿಯಾದ ಮ್ಯಾಚ್ ವಿನ್ನರ್ ಪಾತ್ರವನ್ನು ನಿರ್ವಹಿಸಿದ್ದ ಈ ಪವರ್ ಫುಲ್ ಓಪನರ್ ಇಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ. 38 ವರ್ಷದ ಶಿಖರ್ ಧವನ್ 2022ರಿಂದ ಯಾವುದೇ ಮಾದರಿಯಲ್ಲಿ ಟೀಮ್‌ ಇಂಡಿಯಾದ ಜೆರ್ಸಿ ಧರಿಸುವ ಅವಕಾಶ ಪಡೆದಿಲ್ಲ.

ಧವನ್‌ ಅವರು 2011ರಲ್ಲಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾರ್ದಪಣೆ ಮಾಡಿದರು. ಈ ಎಲ್ಲಾ ಸಂದಭದಲ್ಲಿ ಏಕಾಂಗಿಯಾಗಿ ಅನೇಕ ಪಂದ್ಯಗಳನ್ನು ಭಾರತ ಗೆಲ್ಲಲು ಧವನ್‌ ನೆರವಾಗಿದ್ದರು. ಏಕದಿನಗಳಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾದಾಗ, ಧವನ್‌ ಅನೇಕ ದಾಖಲೆಯ ಜೊತೆಯಾಟಗಳನ್ನು ಆಡಿದ್ದರು.

ಆದರೆ ಈಗ ಧವನ್‌ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಷ್ಟೇನೂ ಅವಕಾಶ ಸಿಗುತ್ತಿಲ್ಲ. ಟೆಸ್ಟ್‌ನಲ್ಲಿ ಧವನ್ 7 ಶತಕ ಮತ್ತು 5 ಅರ್ಧ ಶತಕಗಳೊಂದಿಗೆ 2315 ರನ್ ಗಳಿಸಿದ್ದಾರೆ. ಏಕದಿನದಲ್ಲಿ 17 ಶತಕ ಮತ್ತು 39 ಅರ್ಧ ಶತಕಗಳೊಂದಿಗೆ 6793 ರನ್ ಹೊಡೆದಿದ್ದಾರೆ.

ಇನ್ನು ಟಿ20 ನಲ್ಲಿ 11 ಅರ್ಧಶತಕಗಳನ್ನು ಒಳಗೊಂಡಂತೆ 1759 ರನ್‌ಗಳನ್ನು ಬಾರಿಸಿದ್ದಾರೆ. 2022ರಲ್ಲಿ ಧವನ್‌ ಕೊನೆಯ ಬಾರಿಗೆ ಭಾರತಕ್ಕಾಗಿ ಏಕದಿನ ಪಂದ್ಯವಾಡಿದ್ದಾರೆ.

ಭುವನೇಶ್ವರ್ ಕುಮಾರ್

2012ರಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದ ಸ್ವಿಂಗ್‌ ಕಿಂಗ್‌ ಖ್ಯಾತಿಯ ಭುವನೇಶ್ವರ್‌ ಕುಮಾರ್‌ ಭಾರತ ಪರ ಹಲವು ಪಂದ್ಯಗಳಲ್ಲಿ ಭರ್ಜರಿ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ. ಇದರ ಪರಿಣಾಮ ಈ ಎಲ್ಲಾ ಪಂದ್ಯಗಳನ್ನು ಭಾರತ ಗೆದ್ದು ಬೀಗಿದೆ.

ಆದರೆ ಈಗ ಈ ಸ್ಟಾರ್ ಬೌಲರ‌ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯುವ ಲಕ್ಷಣ ಕಾಣುತ್ತಿಲ್ಲ. 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ನಂತರ ಅವರು ಇಲ್ಲಿಯವರೆಗೆ ಯಾವುದೇ ಸ್ವರೂಪದಲ್ಲಿ ಸ್ಥಾನ ಪಡೆದಿಲ್ಲ.

ಟೆಸ್ಟ್ ನಲ್ಲಿ ಭುವನೇಶ್ವರ್ 63 ವಿಕೆಟ್ ಕಬಳಿಸಿದರೆ, ಏಕದಿನ ಮಾದರಿಯಲ್ಲಿ 141 ವಿಕೆಟ್‌ಗಳನ್ನು ಹೊಂದಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್‌ 90 ವಿಕೆಟ್‌ ಪಡೆದು ಮಿಂಚಿದ್ದಾರೆ. ಜೊತೆಗೆ ಎಲ್ಲಾ ಮೂರು ಮಾದರಿ ಕ್ರಿಕೆಟ್‌ನಲ್ಲಿಯೂ 5 ವಿಕೆಟ್‌ ಪಡೆದ ಬೌಲರ್‌ ಎಂಬ ದಾಖಲೆಯನ್ನು ಬರೆದಿದ್ದಾರೆ.

ಐಪಿಎಲ್‌ನಲ್ಲಿ ನಿರಂತರವಾಗಿ ಅದ್ಭತ ಪ್ರದರ್ಶನ

ಈ ಇಬ್ಬರೂ ಅನುಭವಿ ಕ್ರಿಕೆಟಿಗರು ಐಪಿಎಲ್‌ನಲ್ಲಿ ನಿರಂತರವಾಗಿ ಆಡುತ್ತಿದ್ದಾರೆ. ಐಪಿಎಲ್ 2024ರಲ್ಲಿ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಭುವನೇಶ್ವರ್ ಕುಮಾರ್ ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡುತ್ತಿದ್ದು, ಈ ಫೈನಲ್‌ಗೆ ತಲುಪುವಲ್ಲಿ ಯಶಸ್ವಿಯಾಗಿತ್ತು.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಧವನ್ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ (8004 ರನ್) ನಂತರ 6769 ರನ್ ಗಳಿಸಿದ್ದಾರೆ. ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭುವಿ ಹೆಸರಿನಲ್ಲಿ 181 ವಿಕೆಟ್‌ಗಳಿವೆ.

Story first published: Tuesday, July 16, 2024, 16:24 [IST]
Other articles published on Jul 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+