For Quick Alerts
ALLOW NOTIFICATIONS  
For Daily Alerts
 

ಯು 19 ವಿಶ್ವಕಪ್: ಪಾಕಿಸ್ತಾನ ಸದೆಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ!

Under 19 world cup 2020 : India enters the finals after defeating Pakistan | Ind vs Pak | U19 |
U-19 WC: Yashasvi hits ton as India crush Pak by 10 wickets to enter final

ಪೊಚೆಫ್‌ಸ್ಟ್ರೂಮ್, ಫೆಬ್ರವರಿ 4: ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಸ್ಟೇಡಿಯಂನಲ್ಲಿ ಮಂಗಳವಾರ (ಫೆಬ್ರವರಿ 4) ಮುಕ್ತಾಯಗೊಂಡ ಅಂಡರ್ 19 ವಿಶ್ವಕಪ್ ಮೊದಲ ಸೂಪರ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಯುವ ತಂಡ ಪಾಕಿಸ್ತಾನ ತಂಡವನ್ನು ಭರ್ಜರಿ 10 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ.

ಭಾರತ ಅಂಡರ್ 19 ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್‌ ಅಜೇಯ ಶತಕ ಮತ್ತು ದಿವ್ಯಾಂಶ್ ಸಕ್ಸೇನ ಅವರ ಅಜೇಯ ಅರ್ಧ ಶತಕದೊಂದಿಗೆ ತಂಡ ಇದು ಸತತ ಮೂರನೇ ಬಾರಿಗೆ 19ರ ವಯೋಮಾನದವರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಒಟ್ಟಾರೆ, ಇಲ್ಲಿಗೆ 7ನೇ ಬಾರಿಗೆ ಭಾರತ ಫೈನಲ್ ಪ್ರವೇಶಿಸಿದಂತಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಹೈದರ್ ಅಲಿ 56, ರೋಹೈಲ್ ನಜೀರ್ 62, ಮೊಹಮ್ಮದ್ ಹ್ಯಾರಿಸ್ 21 ರನ್ ಸೇರ್ಪಡೆಯೊಂದಿಗೆ 43.1 ಓವರ್‌ಗೆ ಸರ್ವ ಪತನ ಕಂಡು 172 ರನ್ ಮಾಡಿತು. ಪಾಕ್‌ ಇನ್ನಿಂಗ್ಸ್‌ನಲ್ಲಿ ಭಾರತದ ಕಾರ್ತಿಕ್ ತ್ಯಾಗಿ 2, ಶುಶಾಂತ್ ಮಿಶ್ರಾ 3, ರವಿ ಬಿಷ್ಣೋಯ್ 2, ಅಥರ್ವ ಅಂಕೋಲೆಕರ್, ಯಶಸ್ವಿ ಜೈಸ್ವಾಲ್ ತಲಾ 1 ವಿಕೆಟ್ ಪಡೆದು ಪಾರಮ್ಯ ಮೆರೆದರು.

ಗುರಿ ಬೆನ್ನಟ್ಟಿದ ಭಾರತ, ಯಶಸ್ವಿ ಜೈಸ್ವಾಲ್ 105 (113 ಎಸೆತ), ದಿವ್ಯಾಂಶ್ ಸಕ್ಸೇನಾ 59 ರನ್‌ನೊಂದಿಗೆ 35.2 ಓವರ್‌ಗೆ ವಿಕೆಟ್‌ ನಷ್ಟವಿಲ್ಲದೆ 176 ರನ್ ಗಳಿಸಿ ಗೆಲುವನ್ನಾಚರಿಸಿತು. ಸೂಪರ್ ಲೀಗ್ 2ನೇ ಸೆಮಿಫೈನಲ್ ಪಂದ್ಯ ಫೆಬ್ರವರಿ 6ರಂದು ನಡೆಯಲಿದೆ. ಇದರಲ್ಲಿ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಪ್ರಶಸ್ತಿ ಸುತ್ತಿಗಾಗಿ ಸೆಣಸಾಡಲಿವೆ.

Story first published: Tuesday, February 4, 2020, 20:12 [IST]
Other articles published on Feb 4, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+