Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

U-19 Women's T20 World Cup: ಭಾರತ vs ಇಂಗ್ಲೆಂಡ್ ಫೈನಲ್ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ

U-19 Womens T20 World Cup: India vs England Final Match Toss Report, Playing 11 And Live Score

ಭಾನುವಾರ, ಜನವರಿ 29ರಂದು 2023ರ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ ಅಂತಿಮ ಘಟಕ್ಕೆ ತಲುಪಿದ್ದು, ಪ್ರಶಸ್ತಿ ಹಣಾಹಣಿ ಪಂದ್ಯವು ಭಾರತ ಮಹಿಳಾ ತಂಡ ಮತ್ತು ಇಂಗ್ಲೆಂಡ್ ಮಹಿಳಾ ತಂಡದ ನಡುವೆ ಪೊಟ್ಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆಯಲಿದೆ.

ಟಾಸ್ ಗೆದ್ದ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ಮಹಿಳಾ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ಭಾರತ ತಂಡ ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಫೈನಲ್‌ಗೆ ತಲುಪಿದೆ. ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡಿ, ಭಾರತವು ಪಂದ್ಯವನ್ನು 8 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

ನ್ಯೂಜಿಲೆಂಡ್ ನೀಡಿದ್ದ ಸಾಧಾರಣ 108 ರನ್‌ಗಳ ಮೊತ್ತವನ್ನು ಭಾರತ 14.2 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ಗುರಿಯನ್ನು ಬೆನ್ನಟ್ಟಿತು. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಪಂದ್ಯಾವಳಿಯಲ್ಲಿ ಇನ್ನೂ ಅಜೇಯವಾಗಿದ್ದು, ಫೈನಲ್‌ ಪಂದ್ಯದಲ್ಲಿ ಭಾರತಕ್ಕೆ ಕಠಿಣ ಸ್ಪರ್ಧೆ ನೀಡಬಹುದು.

ಭಾರತ vs ಇಂಗ್ಲೆಂಡ್ ಫೈನಲ್ ಪಂದ್ಯದ ವಿವರ
ಸ್ಥಳ ಮತ್ತು ದಿನಾಂಕ: ಭಾರತ vs ಇಂಗ್ಲೆಂಡ್ 19 ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾನುವಾರ, ಜನವರಿ 29ರಂದು ಪಾಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆಯಲಿದೆ.

ಪಂದ್ಯದ ಸಮಯ: ಭಾರತ vs ಇಂಗ್ಲೆಂಡ್ 19 ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಸಂಜೆ 5:15ಕ್ಕೆ ಪ್ರಾರಂಭವಾಗುತ್ತದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್: ಭಾರತ vs ಇಂಗ್ಲೆಂಡ್ 19 ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಮತ್ತು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ಭಾರತ vs ಇಂಗ್ಲೆಂಡ್ ಫೈನಲ್ ಪಂದ್ಯದ ಫ್ಯಾಂಟಸಿ ಡ್ರೀಮ್ ಟೀಂ
ವಿಕೆಟ್‌ಕೀಪರ್‌ಗಳು: ರಿಚಾ ಘೋಷ್, ಸೆರೆನ್ ಸ್ಮೇಲ್

ಬ್ಯಾಟರ್‌ಗಳು: ಲಿಬರ್ಟಿ ಹೀಪ್, ಶ್ವೇತಾ ಸೆಹ್ರಾವತ್

ಆಲ್‌ರೌಂಡರ್‌ಗಳು: ಶಫಾಲಿ ವರ್ಮಾ, ಗ್ರೇಸ್ ಸ್ಕ್ರಿವೆನ್ಸ್, ರಿಯಾನಾ ಮ್ಯಾಕ್ಡೊನಾಲ್ಡ್-ಗೇ

ಬೌಲರ್‌ಗಳು: ತಿಥಾಸ್ ಸಾಧು, ಅರ್ಚನಾ ದೇವಿ, ಸೋಫಿಯಾ ಸ್ಮೇಲ್, ಪಾರ್ಶವಿ ಚೋಪ್ರಾ

ನಾಯಕಿ ಮತ್ತು ಉಪನಾಯಕಿ: ಶಫಾಲಿ ವರ್ಮಾ, ಶ್ವೇತಾ ಸೆಹ್ರಾವತ್

ಭಾರತ vs ಇಂಗ್ಲೆಂಡ್ ಫೈನಲ್ ಪಂದ್ಯದ ಸಂಭಾವ್ಯ ತಂಡಗಳು

ಭಾರತ: ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್, ಸೌಮ್ಯ ತಿವಾರಿ, ಗೊಂಗಡಿ ತ್ರಿಶಾ, ರಿಚಾ ಘೋಷ್ (ವಿಕೆಟ್ ಕೀಪರ್), ಹೃಷಿತಾ ಬಸು, ಟಿಟಾಸ್ ಸಾಧು, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಸೋನಮ್ ಯಾದವ್.

ಇಂಗ್ಲೆಂಡ್: ಗ್ರೇಸ್ ಸ್ಕ್ರಿವೆನ್ಸ್ (ನಾಯಕಿ), ಲಿಬರ್ಟಿ ಹೀಪ್, ನಿಯಾಮ್ ಹಾಲೆಂಡ್, ಸೆರೆನ್ ಸ್ಮೇಲ್ (ವಿಕೆಟ್ ಕೀಪರ್), ಚಾರಿಸ್ ಪಾವೆಲಿ, ರಿಯಾನಾ ಮ್ಯಾಕ್ಡೊನಾಲ್ಡ್-ಗೇ, ಅಲೆಕ್ಸಾ ಸ್ಟೋನ್‌ಹೌಸ್, ಜೋಸಿ ಗ್ರೋವ್ಸ್, ಎಲ್ಲೀ ಆಂಡರ್ಸನ್, ಸೋಫಿಯಾ ಸ್ಮೇಲ್, ಹನ್ನಾ ಎಲ್ ಬೇಕರ್.

Story first published: Sunday, January 29, 2023, 17:17 [IST]
Other articles published on Jan 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+