U-19 Women's World Cup 2023: ಶಫಾಲಿ, ಶ್ವೇತಾ ಭರ್ಜರಿ ಬ್ಯಾಟಿಂಗ್; ಯುಎಇ ಮಣಿಸಿದ ಭಾರತ

ಸೋಮವಾರ, ಜನವರಿ 15ರಂದು ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ವಿಲೋಮೋರ್ ಪಾರ್ಕ್‌ನಲ್ಲಿ ನಡೆದ 19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಯುಎಇ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ 122 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಭಾರತ ತಂಡದ ನಾಯಕಿ ಶಫಾಲಿ ವರ್ಮಾ 78 ರನ್ ಬಾರಿಸಿದರೆ, ಇನ್ನೊಬ್ಬ ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್ ಅಜೇಯ 74 ರನ್ ಸಿಡಿಸುವುದರೊಂದಿಗೆ ಭಾರತ ತಂಡ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು.
ಶಫಾಲಿ ವರ್ಮಾ 34 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ ಸ್ಫೋಟಕ 78 ರನ್ ಮತ್ತು ಶ್ವೇತಾ ಸೆಹ್ರಾವತ್ 49 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಅಜೇಯ 74 ರನ್ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲಿ 111 ರನ್ ಜೊತೆಯಾಟವಾಡಿತು.
ಶಫಾಲಿ ವರ್ಮಾ ಔಟಾದ ನಂತರ ಬಂದ ರಿಚಾ ಘೋಷ್ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 49 ರನ್ ಚಚ್ಚಿದರು. ಇದರಿಂದಾಗಿ ಅಂಡರ್-19 ಭಾರತ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 219 ರನ್ ಗಳಿಸಲು ನೆರವಾಯಿತು.
ಬೃಹತ್ ಮೊತ್ತ ಚೇಸ್ ಮಾಡಿದ ಯುಎಇ ಮಹಿಳಾ ತಂಡವನ್ನು ಭಾರತೀಯ ಬೌಲರ್‌ಗಳು 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 97 ರನ್‌ಗಳಿಗೆ ನಿಯಂತ್ರಿಸಿದರು. ಈ ಗೆಲುವಿನೊಂದಿಗೆ ಭಾರತ ತಂಡ 19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ನ ಡಿ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಭಾರತ ಅಂಡರ್-19 ಮಹಿಳಾ ತಂಡದ ನಾಯಕಿ ಶಫಾಲಿ ವರ್ಮಾ ಈಗಾಗಲೇ 51 ಟಿ20 ಪಂದ್ಯಗಳು ಸೇರಿದಂತೆ ಹಿರಿಯ ತಂಡಕ್ಕಾಗಿ 70ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇದೆ ವೇಳೆ ಸ್ಫೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆದಿರುವ ಶ್ವೇತಾ ಸೆಹ್ರಾವತ್ ಹಿರಿಯರ ತಂಡದ ಬಾಗಿಲು ತಟ್ಟುತ್ತಿದ್ದಾರೆ.
ಹಿಂದಿನ ಪಂದ್ಯದಲ್ಲಿ 92 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಶ್ವೇತಾ ಸೆಹ್ರಾವತ್, ಈ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿ ಅಜೇಯರಾಗುಳಿದರು.
ಕಳಪೆ ಫೀಲ್ಡಿಂಗ್ ಮತ್ತು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಯುಎಇ ತಮಡಕ್ಕೆ ದುಬಾರಿಯಾಯಿತು. ನಂತರ ಬ್ಯಾಟಿಂಗ್‌ನಲ್ಲಿಯೂ ಯಾರೊಬ್ಬರು ಭಾರತೀಯ ಬೌಲರ್‌ಗಳ ಎದುರು ಹೋರಾಟ ನಡೆಸಲು ವಿಫಲರಾದರು.
ಬಿಗಿ ಬೌಲಿಂಗ್ ದಾಳಿ ನಡೆಸಿದ ಭಾರತದ ಬೌಲರ್‌ಗಳ ಪೈಕಿ, ಶಬನಮ್ ಎಂಡಿ, ತಿತಾಸ್ ಸಾಧು, ಮನ್ನತ್ ಕಶ್ಯಪ್, ಪಾರ್ಶವಿ ಚೋಪ್ರಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
2023ರ ಟಿ20 ಅಂಡರ್-19 ಮಹಿಳಾ ವಿಶ್ವಕಪ್‌ನ ಪಂದ್ಯಾವಳಿಯಲ್ಲಿ ಭಾರತದ ಮುಂದಿನ ಪಂದ್ಯ ಬುಧವಾರ, ಜನವರಿ 18ರಂದು ಇದೇ ಮೈದಾನದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೆಣಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications