U-19 Women's World Cup 2023: ಭಾರತ vs ಯುಎಇ ಸಂಭಾವ್ಯ ಆಡುವ ಬಳಗ, ಪಂದ್ಯದ ವಿವರ

2023ರ ಟಿ20 ಅಂಡರ್-19 ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ಮಹಿಳಾ ಅಂಡರ್-19 ತಂಡವು ಯುಎಇ ಮಹಿಳಾ ಅಂಡರ್-19 ತಂಡದ ವಿರುದ್ಧ ಬೆನೋನಿಯ ವಿಲೋಮೋರ್ ಪಾರ್ಕ್‌ನಲ್ಲಿ ಸೆಣಸಾಟ ನಡೆಸಲಿದೆ.
ಶನಿವಾರ, ಜನವರಿ 14ರಂದು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಏಳು ವಿಕೆಟ್‌ಗಳ ಜಯದೊಂದಿಗೆ ಭಾರತ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಿತು. ಇದೀಗ ಯುಎಇ ವಿರುದ್ಧವೂ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಲು ಎದುರು ನೋಡುತ್ತಿದೆ.
18 ವರ್ಷ ವಯಸ್ಸಿನ ಶಫಾಲಿ ವರ್ಮಾ ನಾಯಕತ್ವದ ಜೊತೆಗೆ ಭಾರತದ ಬ್ಯಾಟಿಂಗ್ ಆರಂಭಿಸಲಿದ್ದಾರೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಅನುಭವದ ಜೊತೆಗೆ ದೊಡ್ಡ ರನ್ ಗಳಿಸುವ ತವಕದಲ್ಲಿದ್ದಾರೆ.
ಶಫಾಲಿ ವರ್ಮಾ ಮತ್ತು ಆರಂಭಿಕ ಜೊತೆಗಾರ್ತಿ ಶ್ವೇತಾ ಸೆಹ್ರಾವತ್ ಅವರು ಪವರ್‌ಪ್ಲೇನಲ್ಲಿ 70 ರನ್‌ಗಳನ್ನು ಜೊತೆಯಾಟವಾಡಿದರು. ದಕ್ಷಿಣ ಆಫ್ರಿಕಾದ 166 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ನೆರವಾದರು.

U-19 ಮಹಿಳಾ ವಿಶ್ವಕಪ್ ಭಾರತ vs ಯುಎಇ ಪಂದ್ಯದ ವಿವರ
ಸ್ಥಳ: ವಿಲೋಮೋರ್ ಪಾರ್ಕ್, ಬೆನೋನಿ
ದಿನಾಂಕ ಮತ್ತು ಸಮಯ: ಜನವರಿ 16, ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭ
ಲೈವ್ ಸ್ಟ್ರೀಮಿಂಗ್ ಮತ್ತು ಟಿವಿ ವಿವರಗಳು: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ವೀಕ್ಷಣೆ ಮಾಡಬಹುದು.
ಭಾರತ vs ಯುಎಇ U-19 ಮಹಿಳಾ ತಂಡಗಳ ಸಂಭಾವ್ಯ 11ರ ಬಳಗ
ಭಾರತ: ಹೃಷಿತಾ ಬಸು, ಶಫಾಲಿ ವರ್ಮಾ (ನಾಯಕಿ), ಸೌಮ್ಯ ತಿವಾರಿ, ಗೊಂಗಡಿ ತ್ರಿಶಾ, ಶ್ವೇತಾ ಸೆಹ್ರಾವತ್, ಅರ್ಚನಾ ದೇವಿ, ಸೋನಿಯಾ ಮೆಂಧಿಯಾ, ಸೋನಮ್ ಯಾದವ್, ಶಬನಮ್ ಎಂಡಿ, ಪಾರ್ಶವಿ ಚೋಪ್ರಾ, ರಿಚಾ ಘೋಷ್
ಯುಎಇ: ತೀರ್ಥ ಸತೀಶ್ (ನಾಯಕಿ), ಲಾವಣ್ಯ ಕೇನಿ, ಎಸ್ ಧರ್ಣಿಧರಕ, ಗೀತಿಕಾ ಜ್ಯೋತಿಸ್, ಸಿಯಾ ಗೋಖಲೆ, ರಿನಿತಾ ರಜಿತ್, ಇಂಧುಜಾ ನಂದಕುಮಾರ್, ವೈಷ್ಣವಿ ಮಹೇಶ್, ಎಂ ಗೌರ್, ಅರ್ಚರ ಸುಪ್ರಿಯಾ, ಅವನೀ ಪಾಟೀಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications