U-19 Women's World Cup 2023: ಆಸೀಸ್ ವಿರುದ್ಧ ಭಾರತ ವನಿತೆಯರಿಗೆ ಸೋಲು

ಶಫಾಲಿ ವರ್ಮಾ ನಾಯಕತ್ವದ ಭಾರತ ಮಹಿಳಾ ತಂಡ ಅಂಡರ್-19 ಟಿ20 ವಿಶ್ವಕಪ್ 2023ರ ಸೂಪರ್ 6ರ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಸೋಲನುಭವಿಸಿದೆ.
ಶನಿವಾರ, ಜನವರಿ 21ರಂದು ಭಾರತ ತಂಡ ರೈಸ್ ಮೆಕೆನ್ನಾ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ ಪೊಟ್ಚೆಫ್ಸ್ಟ್ರೂಮ್‌ನ ನಾರ್ತ್-ವೆಸ್ಟ್ ಯೂನಿವರ್ಸಿಟಿ ನಂ.1 ಮೈದಾನದಲ್ಲಿ 7 ವಿಕೆಟ್‌ಗಳಿಂದ ಸೋತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕಿ ಶಫಾಲಿ ವರ್ಮಾ ಭಾರತವನ್ನು ಎರಡು ಬೌಂಡರಿಗಳೊಂದಿಗೆ ಉತ್ತಮ ಆರಂಭಕ್ಕೆ ಮುನ್ನುಡಿ ಬರೆದಿದ್ದರು. ಆದರೆ ವೇಗಿ ಮಿಲ್ಲಿ ಇಲ್ಲಿಂಗ್‌ವರ್ತ್ ಅವರ ಎರಡನೇ ಓವರ್‌ನ ಬೌಲಿಂಗ್‌ನಲ್ಲಿ ಭಾರತದ ಬ್ಯಾಟಿಂಗ್ ಕುಸಿತ ಆರಂಭಿಸಿತು.
ಅಂಡರ್-19 ಟಿ20 ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಭಾರತದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಶ್ವೇತಾ ಸೆಹ್ರಾವತ್ ಅವರು ಸಿಯಾನಾ ಜಿಂಜರ್ ಅವರ ಬೌಲಿಂಗ್‌ನಲ್ಲಿ ಔಟಾಗುವ ಮುನ್ನ 29 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಿತ 21 ರನ್ ಗಳಿಸಿದರು. ಶ್ವೇತಾ ಹೊರತುಪಡಿಸಿ ಹೃಷಿತಾ ಬಸು (14) ಮತ್ತು ಟಿಟಾಸ್ ಸಾಧು(14) ಅವರು ಎರಡಂಕಿ ಮೊತ್ತ ದಾಟಿದ ಇಬ್ಬರು ಬ್ಯಾಟರ್‌ಗಳಾಗಿದ್ದಾರೆ.
ಅಂತಿಮವಾಗಿ ಭಾರತ ಮಹಿಳಾ ತಂಡ 18.5 ಓವರ್‌ಗಳಲ್ಲಿ 87 ರನ್‌ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಮಹಿಳಾ ತಂಡದ ಪರ ಜಿಂಜರ್ 4 ಓವರ್‌ಗಳಲ್ಲಿ 13 ರನ್ ನೀಡಿ 3 ವಿಕೆಟ್‌ಗಳೊಂದಿಗೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಉಳಿದಂತೆ ಇಲಿಂಗ್‌ವರ್ತ್ ಮತ್ತು ಮ್ಯಾಗಿ ಕ್ಲಾರ್ಕ್ ತಲಾ ಎರಡು ವಿಕೆಟ್ ಪಡೆದರು.
ಭಾರತದ ಸಾಧಾರಣ 88 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಹಿಳೆಯರು 37 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗಡಿ ದಾಟಿದರು. ಒಂದು ಹಂತದಲ್ಲಿ 5.4 ಓವರ್‌ಗಳಲ್ಲಿ 37 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಕ್ಲೇರ್ ಮೂರ್ ಮತ್ತು ಆಮಿ ಸ್ಮಿತ್ ಜೊತೆಯಾಟ ಆಸ್ಟ್ರೇಲಿಯಾಕ್ಕೆ ಅಪಾಯ ಎದುರಾಗದಂತೆ ಆಡಿದರು.
ಕ್ಲೇರ್ ಮೂರ್ 28 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 25 ರನ್ ಗಳಿಸಿ ಔಟಾಗದೇ ಉಳಿದರು ಮತ್ತು ಆಮಿ ಸ್ಮಿತ್ 25 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 26 ರನ್ ಗಳಿಸಿದರು.
ಭಾರತದ ಪರ ಬೌಲಿಂಗ್‌ನಲ್ಲಿ ಟಿಟಾಸ್ ಸಾಧು, ಅರ್ಚನಾ ದೇವಿ ಮತ್ತು ಸೋನಮ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಇನ್ನು ಅಂಡರ್-19 ಟಿ20 ವಿಶ್ವಕಪ್ 2023ರ ಪಂದ್ಯಾವಳಿಯ ಸೂಪರ್ 6ರಲ್ಲಿ ಭಾರತ ಮಹಿಳಾ ತಂಡದ ಮುಂದಿನ ಪಂದ್ಯವು ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಜನವರಿ 22ರ ಭಾನುವಾರ ಪೊಟ್ಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications