Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

U19 WOMEN T20 WORLD CUP: ವೆಸ್ಟ್ ಇಂಡೀಸ್ ವಿರುದ್ಧ ಭಾರತ ವನಿತೆಯರಿಗೆ ಶುಭಾರಂಭ

ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂನಿಯಲ್ಲಿ ಭಾರತ ವನಿತೆಯರ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹಾಲಿ ಚಾಂಪಿಯನ್ ಭಾರತ 9 ವಿಕೆಟ್‌ಗಳಿಂದ ಸೋಲಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಿಕ್ಕಿ ಪ್ರಸಾದ್ ನೇತೃತ್ವದ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ. ವೆಸ್ಟ್ ಇಂಡೀಸ್ ನೀಡಿದ ಗುರಿಯನ್ನು ಕೇವಲ 26 ಎಸೆತಗಳಲ್ಲಿ ಮುಟ್ಟಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‌ ಇಂಡೀಸ್ ತಂಡ ಬಿಗ್ ಸ್ಕೋರ್ ಕಲೆ ಹಾಕುವ ವೆಸ್ಟ್ ಇಂಡೀಸ್ ನಿರೀಕ್ಷೆಯಲ್ಲಿತ್ತು. ಆದರೆ ಭಾರತದ ಉರಿ ಬೌಲಿಂಗ್ ದಾಳಿಗೆ ವೆಸ್ಟ್‌ ಇಂಡೀಸ್ ತತ್ತರಿಸಿತು. ಇಡೀ ವೆಸ್ಟ್ ಇಂಡೀಸ್ ತಂಡ 13.2 ಓವರ್‌ಗಳಲ್ಲಿ 44 ರನ್‌ಗಳಿಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ನೀಡಿದ್ದ 45 ರನ್‌ಗಳ ಗುರಿಯನ್ನು ಭಾರತ 4.2 ಓವರ್‌ಗಳಲ್ಲಿ 1 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು.

U19 WOMEN T20 WORLD CUP India Women win against West Indies

45 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ 9 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ಅನ್ನು ಸೋಲಿಸಿತು. ಭಾರತದ ಬ್ಯಾಟರ್‌ಗಳು ವೆಸ್ಟ್‌ಇಂಡೀಸ್‌ಗೆ ವಿಕೆಟ್‌ ಪಡೆಯುವ ಎರಡನೇ ಅವಕಾಶವನ್ನು ನೀಡಲಿಲ್ಲ. ಕಮಲಿನಿ ಮತ್ತು ಸಾನಿಕಾ ಚಲ್ಕೆ ಎರಡನೇ ವಿಕೆಟ್‌ಗೆ 43 ರನ್‌ಗಳ ಅಜೇಯ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು.

ಕೌಲಾಲಂಪುರದಲ್ಲಿ ಪಂದ್ಯದ ನಂತರ ತಕ್ಷಣವೇ ಮಳೆ ಪ್ರಾರಂಭವಾಯಿತು. ಈ ವೇಳೆ ಭಾರತ ನಾಯಕ ನಿಕ್ಕಿ ಪ್ರಸಾದ್ ಮಾತನಾಡಿದರು. 'ಆದಷ್ಟು ಬೇಗ ಪಂದ್ಯ ಮುಗಿಸಬೇಕು ಎಂದು ಟೀಮ್ ಮ್ಯಾನೇಜ್ಮೆಂಟ್ ನಿಂದ ಸ್ಪಷ್ಟ ಸೂಚನೆಗಳಿದ್ದವು. ಹೀಗಾಗಿ ನಾವೂ ಅದನ್ನೇ ಮಾಡಿದೆವು ಎಂದರು. ಕುತೂಹಲಕಾರಿ ಸಂಗತಿಯೆಂದರೆ, ಭಾರತ ಪಂದ್ಯ ಗೆದ್ದ ತಕ್ಷಣ ಮೈದಾನದಲ್ಲಿ ಮಳೆ ಸುರಿಯಲಾರಂಭಿಸಿತು. ಭಾರತದ ಗೆಲುವಿನಲ್ಲಿ 2 ಓವರ್‌ಗಳಲ್ಲಿ 5 ರನ್ ನೀಡಿ 2 ವಿಕೆಟ್ ಕಬಳಿಸಿದ ಜೋಶಿತಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಅಂಡರ್-19 ಮಹಿಳೆಯರ ಟಿ20 ವಿಶ್ವಕಪ್ 2025ರ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 8:00 ಮತ್ತು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿವೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಈ ಮೆಗಾ ಟೂರ್ನಿಯ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ 2 (HD+SD) ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ (HD+SD) ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಭಾರತ ತಂಡ ಸೆಮಿ-ಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಅರ್ಹತೆ ಪಡೆದರೆ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ (HD+SD) ಮಾತ್ರ ಪ್ರಸಾರ ಮಾಡಲಾಗುತ್ತದೆ.

Story first published: Sunday, January 19, 2025, 19:32 [IST]
Other articles published on Jan 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+