Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

U19 WOMENS T20 WORLCUP: ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್‌ ಸೋಲಿಸಿದ ನೈಜೀರಿಯಾ

ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂನಿಯಲ್ಲಿ ನೈಜೀರಿಯಾ ಮಹಿಳಾ ಕ್ರಿಕೆಟ್ ತಂಡ ಸೋಮವಾರ ಇತಿಹಾಸ ಸೃಷ್ಟಿಸಿದೆ. ಸಾರವಾಕ್‌ನ ಬೊರ್ನಿಯೊ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನೈಜೀರಿಯಾ ತಂಡವು ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿದೆ. ಈ ಮೂಲಕ ಬಲಿಷ್ಠ ಕಿವೀಸ್ ಪಡೆಗೆ ದೊಡ್ಡ ಆಘಾತವನ್ನು ನೀಡಿದೆ. ಈ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನೈಜೀರಿಯಾ ತಂಡ 2 ರನ್‌ಗಳಿಂದ ಐತಿಹಾಸಿಕ ಜಯ ದಾಖಲಿಸಿತು.

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ ಮಳೆ ಬಂದ ಕಾರಣ ಪಂದ್ಯವನ್ನು ತಲಾ 13 ಓವರ್‌​​ಗಳಿಗೆ ಸೀಮಿತಗೊಳಿಸಲಾಯಿತು. ನಂತರ ಮೊದಲು ಬ್ಯಾಟ್ ಮಾಡಿದ ನೈಜೀರಿಯಾ ಪರ ನಾಯಕಿ ಲಕ್ಕಿ ಪೈಟಿ 18 ರನ್ ಗಳಿಸಿದರೆ, ಲಿಲಿಯನ್ ಉದೆ 19 ರನ್ ಬಾರಿಸಿದರು. ಅದ್ಭುತ ಬೌಲಿಂಗ್ ಪ್ರದರ್ಶಿಸಿ ಕಿವೀಸ್‌ ಪಡೆ 13 ಓವರ್‌ಗಳಲ್ಲಿ 6 ವಿಕೆಟ್ ಕಬಳಿಸಿ 63 ರನ್‌ಗಳಿಗೆ ನೈಜೀರಿಯಾ ತಂಡವನ್ನು ಕಟ್ಟಿ ಹಾಕಲಾಯಿತು.

U19 WOMENS T20 WORLD CUP Nigeria defeats New Zealand for the first time in history

ನೈಜೀರಿಯಾ ನೀಡಿದ 66 ರನ್‌​ಗಳ ಸುಲಭ ಗೆಲುವಿನ ಗುರಿ ಪಡೆದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ತಂಡ 2.1 ಓವರ್‌ಗಳಲ್ಲಿ ಕೇವಲ 7 ರನ್‌ಗಳಿರುವಾಗ ಇಬ್ಬರೂ ಆರಂಭಿಕರನ್ನು ಕಳೆದುಕೊಂಡಿತ್ತು. ಎಮ್ಮಾ ಮೆಕ್ಲಿಯೋಡ್ 3 ರನ್‌ಗೆ ಔಟಾದರೆ, ಕೇಟ್ ಇರ್ವಿನ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಇನ್ನು ಈವ್ ವೊಲ್ಯಾಂಡ್ 14, ಅನಿಕಾ ಟಾಡ್ 19 ಮತ್ತು ನಾಯಕಿ ತಾಶ್ ವಾಕೆಲಿನ್ 18 ರನ್ ಕಲೆಹಾಕಿದರು. ಆದರೂ ನ್ಯೂಜಿಲೆಂಡ್ ತಂಡವು 12 ಓವರ್‌ಗಳ ಮುಕ್ತಾಯದ ವೇಳೆಗೆ ಕೇವಲ 57 ರನ್ ಗಳಿಸಲು ಸಾಧ್ಯವಾಯಿತು.

ಪಂದ್ಯದ ಅಂತಿಮ ಓವರ್‌ನಲ್ಲಿ ಕಿವೀಸ್ ಪಡೆ ಗೆಲುವಿಗೆ 6 ಎಸೆತಗಳಲ್ಲಿ 9 ರನ್‌ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್ ಎಸೆದ ಲಿಲಿಯನ್ ಉದೆ ಜವಾಬ್ದಾರಿಯುತ ಬೌಲಿಂಗ್ ಪ್ರದರ್ಶನ ಮಾಡಿದರು. ಲಿಲಿಯನ್ ಉದೆ ಕೇವಲ 6 ರನ್ ಮಾತ್ರ ಬಿಟ್ಟು ಕೊಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧ 2 ರನ್‌​ಗಳ ರೋಚಕ ಗೆಲುವಿನೊಂದಿಗೆ ನೈಜೀರಿಯಾ ಅಂಡರ್​-19 ತಂಡವು ಟಿ20 ವಿಶ್ವಕಪ್ ಟೂನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು.

ಉಭಯ ತಂಡಗಳ ಪ್ಲೇಯಿಂಗ್-11

ನ್ಯೂಜಿಲೆಂಡ್: ಎಮ್ಮಾ ಮೆಕ್ಲಿಯೋಡ್, ಕೇಟ್ ಇರ್ವಿನ್, ಈವ್ ವೊಲಂಡ್, ಅನಿಕಾ ಟಾಡ್, ತಾಶ್ ವಾಕೆಲಿನ್ (ನಾಯಕಿ), ಡಾರ್ಸಿ ರೋಸ್ ಪ್ರಸಾದ್, ಅಯಾನ್ ಲ್ಯಾಂಬಾಟ್, ಎಲಿಜಬೆತ್ ಬುಕಾನನ್ (ವಿಕೆಟ್ ಕೀಪರ್), ಹನ್ನಾ ಫ್ರಾನ್ಸಿಸ್, ಅನಿಕಾ ಟೌವಾರೆ, ಹನ್ನಾ ಒಕಾನ್ನರ್.

ನೈಜೀರಿಯಾ: ಪೆಕ್ಯುಲಿಯರ್ ಅಗ್ಬೋಯಾ, ಲಕ್ಕಿ ಪಿಯೆಟಿ (ನಾಯಕಿ), ಅಡೆಶೋಲಾ ಅಡೆಕುನ್ಲೆ, ಕ್ರಿಸ್ಟಾಬೆಲ್ ಚುಕ್ವುಯೋನಿ, ಯುಸೆನ್ ಪೀಸ್, ಲಿಲಿಯನ್ ಉದೆ, ವಿಕ್ಟರಿ ಇಗ್ಬಿನೆಡಿಯನ್, ಡೆಬೊರಾ ಬಸ್ಸಿ (ವಿಕೆಟ್ ಕೀಪರ್), ಅನೋಯಿಂಟೆಡ್ ಅಖಿಗ್ಬೆ, ಮುಹಿಬತ್ ಅಮುಸಾ, ಒಮೊಕುನ್ಸ್.

Story first published: Monday, January 20, 2025, 16:30 [IST]
Other articles published on Jan 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+