U19 World Cup: ಸೆಮಿಫೈನಲ್‌ನಲ್ಲಿ ಭಾರತ, ಅಫ್ಘಾನಿಸ್ತಾನ ಕಾದಾಟ
ಹರಾರೆ: ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಹಾಗೂ ಶ್ರೀಲಂಕಾದಲ್ಲಿ ಪುರುಷರ ಟಿ20 ವಿಶ್ವಕಪ್ ನಡೆಯಲಿದೆ. ಈ ಬಿಗ್ ಈವೆಂಟ್‌ಗೂ ಮುನ್ನ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬುಧವಾರ ಕಾದಾಟ ನಡೆಸಲಿವೆ. ಸತತ ಆರನೇ ಬಾರಿಗೆ ಟೂರ್ನಿಯ ಸೆಮಿಫೈನಲ್ ಹಂತವನ್ನು ಪ್ರವೇಶಿಸಿರುವ ಭಾರತ ಮತ್ತೊಮ್ಮೆ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ.
ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಈ ಟೂರ್ನಿಯಲ್ಲಿನ ಅತ್ಯಂತ ಯಶಸ್ವಿ ತಂಡಗಳಲ್ಲಿ ಭಾರತವೂ ಒಂದಾಗಿದೆ. ಈ ವರೆಗೆ ಭಾರತ ಐದು ಬಾರಿ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಆಯುಷ್ ಮಾತ್ರೆ ಮುಂದಾಳತ್ವದ ಭಾರತ ತಂಡದಲ್ಲಿ ಹೆಸರಾಂತ ಭರವಸೆಯ ಆಟಗಾರರ ದಂಡೇ ಇದೆ.

ಈ ವಿಶ್ವಕಪ್‌ನಲ್ಲಿ ತನ್ನ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದ ತಂಡ ಎಂದರೆ ಅಫ್ಘಾನಿಸ್ತಾನ. ಈ ತಂಡ ಎರಡು ಬಾರಿ ಸೆಮಿಫೈನಲ್‌ನಲ್ಲಿ ಸೋಲು ಕಂಡಿದೆ. ಆಫ್ಘಾನ್ ಮೊದಲ ಬಾರಿಗೆ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ಕಾಣುತ್ತಿದೆ. ಇನ್ನು ಈ ಸಾಧನೆಯನ್ನು ಮಾಡುವಲ್ಲಿ ಅಫ್ಘಾನಿಸ್ತಾನ ಸಫಲವಾದರೆ ಐಸಿಸಿ ಟೂರ್ನಿಯ ಫೈನಲ್‌ಗೆ ಏರಿದ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲಿದೆ. ಉಭಯ ತಂಡಗಳು ಈಗಾಗಲೇ 12 ಬಾರಿ ಮುಖಾಮುಖಿಯಾಗಿದ್ದು ಭಾರತ 10ರಲ್ಲಿ ಜಯ ಸಾಧಿಸಿದೆ.
ವೈಭವ್ ಸುರ್ಯವಂಶಿ ಆಕರ್ಷಣೆ
ಅಂಡರ್ 19 ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಕಾಣಿಸಿಕೊಳ್ಳುವ ಭಾರತದ ವೈಭವ್ ಸೂರ್ಯವಂಶಿ ಈ ಪಂದ್ಯದ ಪ್ರಮುಖ ಆಕರ್ಷಣೆ. ಇವರು ಈಗಾಗಲೇ ಟೂರ್ನಿಯಲ್ಲಿ 39ರ ಸರಾಸರಿಯಲ್ಲಿ 196 ರನ್ ಸಿಡಿಸಿದ್ದಾರೆ. ತಂಡದ ಪರ ಆರಂಭಿಕರಾಗಿ ಕಾಣಿಸಿಕೊಳ್ಳುವ ಆರನ್ ಜಾರ್ಜ್ ಸ್ಥಿರ ಬ್ಯಾಟಿಂಗ್ ನಡೆಸಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಆಯುಷ್ ಮ್ಹಾತ್ರೆ ಹಾಗೂ ವಿಹಾನ್ ಮಲ್ಹೋತ್ರಾ ಬಿರುಸಿನ ಆಟವನ್ನು ಆಡಬೇಕಿದೆ. ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಿದಲ್ಲಿ ಫೈನಲ್ ಪ್ರವೇಶಿಸು ಆಸೆ ಫಲಿಸುತ್ತದೆ.
ಸಂಭಾವ್ಯ ಭಾರತ ತಂಡ ಹೇಗಿರಲಿದೆ?
ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ಆಯುಷ್ ಮ್ಹಾತ್ರೆ (C), ಅಭಿಜ್ಞಾನ್ ಕುಂದು (WK), ವಿಹಾನ್ ಮಲ್ಹೋತ್ರಾ, ಮೊಹಮ್ಮದ್ ಎನಾನ್, ಹರ್ವಂಶ್ ಸಿಂಗ್, RS ಅಂಬರೀಶ್, ಹೆನಿಲ್ ಪಟೇಲ್, ಸೌಮಿ ಪಾಂಡೆ, ಕಿರಣ್ ಚೋರ್ಮಲೆ;
ಅಫ್ಘಾನಿಸ್ತಾನ ತಂಡದಲ್ಲಿ ಯಾರಿಗೆ ಸಿಗುತ್ತದೆ ಅವಕಾಶ?
ಫೈಸಲ್ ಶಿನೋಜಾದಾ, ಖಾಲಿದ್ ಅಹ್ಮದ್‌ಜಾಯ್, ಮಹಬೂಬ್ ಖಾನ್ (C), ಉಸ್ಮಾನ್ ಸಾದತ್, ಉಜೈರುಲ್ಲಾ ನಿಯಾಜೈ, ಅಜೀಜ್ ಮಿಯಾ ಖಿಲ್ (WK), ನಜೀಫ್ ಅಮಿರಿ, ನೂರಿಸ್ತಾನಿ ಒಮರ್ಜಾಯ್, ವಹಿದುಲ್ಲಾ ಝದ್ರಾನ್, ಖಾತೀರ್ ಸ್ಟಾನಿಕ್‌ಜಾಯ್, ಅಬ್ದುಲ್ ಅಜೀಜ್.
ಪಂದ್ಯವನ್ನು ವೀಕ್ಷಿಸುವುದು ಎಲ್ಲಿ?
ಭಾರತ, ಅಫ್ಘಾನಿಸ್ತಾನ ನಡುವಣ ಅಂಡರ್ 19 ಸೆಮಿಫೈನಲ್ ಪಂದ್ಯವನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ಆನ್‌ಲೈನ್‌ನಲ್ಲಿ ನೋಡಬಹುದು. ಅಲ್ಲದೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪಂದ್ಯದ ನೇರ ಪ್ರಸಾರ ಮಾಡಲಿದೆ.
ಪಂದ್ಯ ಆರಂಭವಾಗುವುದ ಯಾವಾಗ?
ಭಾರತ, ಅಫ್ಘಾನಿಸ್ತಾನ ನಡುವಣ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಅಲ್ಲದೆ ಪಂದ್ಯಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications