13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!

ಬೆಂಗಳೂರು: 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಸಲು ಆಸಕ್ತಿಯಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕ್ರಿಕೆಟ್ ಬೋರ್ಡ್ ಖಾತರಿಪರಿಸಿದೆ. ಕೋವಿಡ್ 19 ಪಿಡುಗಿನ ಕಾರಣ ನಗದು ಶ್ರೀಮಂತ ಟೂರ್ನಿ ಐಪಿಎಲ್ ಅನ್ನು ಒಂದು ವೇಳೆ ವಿದೇಶದಲ್ಲಿ ನಡೆಸಬೇಕಾಗಿ ಬಂದರೆ ಯುಎಇಯಲ್ಲಿ ನಡೆಸಬಹುದು ಎಂದು ಅಲ್ಲಿನ ಕ್ರಿಕೆಟ್ ಬೋರ್ಡ್ ಹೇಳಿದೆ. ಮಾರ್ಚ್ 29ರಂದೇ ಮುಂಬೈನಲ್ಲಿ ಐಪಿಎಲ್ ಆರಂಭಗೊಳ್ಳುವುದರಲ್ಲಿತ್ತು. ಆದರೆ ಮಾರ್ಚ್ ತಿಂಗಳಲ್ಲೇ ಕೊರೊನಾವೈರಸ್ ಆತಂಕ ಹೆಚ್ಚಾದ ಕಾರಣ ಐಪಿಎಲ್ ಅನ್ನು ಸದ್ಯ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇರುವುದರಿಂದ ಮುಂದೆಯೂ ಭಾರತದಲ್ಲಿ ಐಪಿಎಲ್ ನಡೆಸಲು ಸಮಸ್ಯೆ ಎದುರಾಗಿದೆ. ಭಾರತದಲ್ಲಿ ಸದ್ಯ (ಜೂನ್ 8ರ ವೇಳೆಗೆ) ಸೋಂಕಿತರ ಸಂಖ್ಯೆ 256,611 ಇದ್ದು, 7135 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಭಾರತದಲ್ಲಿ ಐಪಿಎಲ್ ನಡೆಸುವುದು ಕಷ್ಟ ಎಂಬಂತ ಸ್ಥಿತಿ ಎದುರಾಗಿದೆ.
ಹಾಗಾದರೆ ಈ ಬಾರಿಯ ಐಪಿಎಲ್ ನಡೆಯೋದು ಯುಎಇನಲ್ಲ? ಈ ಮೊದಲು ಅಲ್ಲಿ ಐಪಿಎಲ್ ಪಂದ್ಯಗಳು ನಡೆದಿವೆಯಾ? ಯುಎಇ ಕ್ರಿಕೆಟ್‌ನ ಮುಖ್ಯ ಕಾರ್ಯದರ್ಶಿ ಮುಬಾಶ್ಶೀರ್ ಉಸ್ಮಾನಿ ಐಪಿಎಲ್ ಕುರಿತಾಗಿ ಹೇಳಿರುವ ಮಾತುಗಳು ಇಲ್ಲಿವೆ.

ಗಾಲ್ಫ್ ನ್ಯೂಸ್ ವರದಿ
'ಗಾಲ್ಫ್ ನ್ಯೂಸ್' ವರದಿಯಲ್ಲಿ, ಐಪಿಎಲ್‌ಗೆ ಆತಿಥ್ಯ ವಹಿಸಲು ಯುಎಇ ಕ್ರಿಕೆಟ್ ಬೋರ್ಡ್, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ಗೆ ಆಫರ್ ನೀಡಿದೆ ಎಂದು ಹೇಳಲಾಗಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕೂಡ 2020ರ ಐಪಿಎಲ್ ಆಯೋಜಿಸಲು ಆಸಕ್ತಿ ಇರುವುದಾಗಿ ಹೇಳಿಕೊಂಡಿತ್ತು.

ಯಶಸ್ವಿಯಾಗಿ ಐಪಿಎಲ್ ನಡೆಸಿದ್ದೇವೆ
'ಈ ಮೊದಲು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಯುಎಇಯಲ್ಲಿ ಯಶಸ್ವಿಯಾಗಿ ಐಪಿಎಲ್ ಅನ್ನು ಆಯೋಜಿಸಿದೆ. ಅನೇಕ ದ್ವಿಪಕ್ಷೀಯ ಮತ್ತು ಬಹು ರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳಿಗೆ ಆತಿಥ್ಯ ವಹಿಸಿದ ತಟಸ್ಥ ಸ್ಥಳವೆಂಬ ದಾಖಲೆಯೂ ನಮಗಿದೆ,' ಎಂದು ಮುಖ್ಯ ಕಾರ್ಯದರ್ಶಿ ಮುಬಾಶ್ಶೀರ್ ಉಸ್ಮಾನಿ ಹೇಳಿರುವುದಾಗಿ ಗಾಲ್ಫ್ ನ್ಯೂಸ್ ವರದಿಯಲ್ಲಿ ಬರೆಯಲಾಗಿದೆ.

ಇಂಗ್ಲೆಂಡ್‌ಗೂ ಆಫರ್ ನೀಡಿದ್ದೆವು
'ನಮ್ಮ ಅತ್ಯಾಧುನಿಕ ಸ್ಥಳಗಳು ಮತ್ತು ಸೌಲಭ್ಯಗಳು ಎಮಿರೇಟ್ಸ್ ಅನ್ನು ಎಲ್ಲಾ ರೀತಿಯ ಕ್ರಿಕೆಟ್‌ಗೆ ಆತಿಥ್ಯ ವಹಿಸಲು ಬಯಸುವ ಸ್ಥಳವನ್ನಾಗಿ ಮಾಡಿದೆ,' ಎಂದು ಉಸ್ಮಾನಿ ಹೇಳಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್‌ಗೂ ಇಂಗ್ಲೀಷ್ ಸೀಸನ್ ಪೂರ್ಣಗೊಳಿಸಲು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಆಫರ್ ನೀಡಿತ್ತು ಎಂದೂ ಉಸ್ಮಾನಿ ತಿಳಿಸಿದ್ದಾರೆ.

ದುಬೈನಲ್ಲಿ ಐಪಿಎಲ್ ಪಂದ್ಯಗಳು
ಈ ಮೊದಲೂ ಒಂದಿಷ್ಟು ಐಪಿಎಲ್ ಪಂದ್ಯಗಳು ದುಬೈನಲ್ಲಿ ನಡೆದ ನಿದರ್ಶನಗಳಿವೆ. 2014ರ ಸೀಸನ್ 7 ಪಂದ್ಯಗಳು ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ, 6 ಪಂದ್ಯಗಳು ಶಾರ್ಜಾ ಕ್ರಿಕೆಟ್ ಸ್ಟೋಡಿಯಂನಲ್ಲಿ ಮತ್ತು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ 7 ಪಂದ್ಯಗಳು ನಡೆದಿವೆ. ಇನ್ನು ದಕ್ಷಿಣ ಆಫ್ರಿಕಾದ ವಿವಿಧ ತಾಣಗಳಲ್ಲಿ 2009ರ ಸೀಸನ್‌ನ 57 ಐಪಿಎಲ್ ಪಂದ್ಯಗಳು ನಡೆದ ಉದಾಹರಣೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications