For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧ ಯುಎಇಗೆ ಐತಿಹಾಸಿಕ ಗೆಲುವು; ಟೆಸ್ಟ್ ಮಾನ್ಯತೆ ಪಡೆಯದ ತಂಡದ ವಿರುದ್ಧ ಕಿವೀಸ್‌ಗೆ ಮೊದಲ ಸೋಲು

ಶನಿವಾರ, ಆಗಸ್ಟ್ 19ರಂದು ದುಬೈನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಯುಎಇ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‌ಗಳ ಐತಿಹಾಸಿಕ ಗೆಲುವು ಸಾಧಿಸಿತು.

ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಲ್ಲಿ ಸಮಬಲ ಸಾಧಿಸಿವೆ. ಎರಡನೇ ಪಂದ್ಯದಲ್ಲಿ ಯುಎಇ ತಂಡದ ನಾಯಕ ಮುಹಮ್ಮದ್ ವಸೀಮ್ ಅವರು ಅಸಾಧಾರಣ ನಾಯಕತ್ವದ ಕೌಶಲ್ಯವನ್ನು ಪ್ರದರ್ಶಿಸಿದರು.

UAE vs NZ: United Arab Amirates Beat New Zealand By 7 Wickets In 2nd T20 Match

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವು ಯಾವುದೇ ಸ್ವರೂಪದಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಗೆಲುವು ಸಾಧಿಸಿತು. ಇನ್ನು ಟೆಸ್ಟ್ ಮಾನ್ಯತೆ ಪಡೆಯದ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡಕ್ಕೆ ಚೊಚ್ಚಲ ಸೋಲು ಎದುರಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್‌ಗಳನ್ನು ಕಲೆಹಾಕಿತು. ಇದಕ್ಕುತ್ತರವಾಗಿ ಯುಎಇ ತಂಡ 15.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 144 ರನ್ ಗಳಿಸುವ ಮೂಲಕ ಜಯಭೇರಿ ಬಾರಿಸಿತು.

ನ್ಯೂಜಿಲೆಂಡ್ ತಂಡದ ಪರ ಆರಂಭಿಕರಾದ ಚಾಡ್ ಬೌವ್ಸ್ 21 ರನ್ ಮತ್ತು ಟಿಮ್ ಸೈಫರ್ಟ್ 7 ರನ್ ಗಳಿಸಿದರು. ನಂತರ ಬಂದ ಮಿಚಲ್ ಸ್ಯಾಂಟ್ನರ್ 1 ರನ್, ಮಾರ್ಕ್ ಚಾಪ್‌ಮನ್ 46 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 63 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.

UAE vs NZ: United Arab Amirates Beat New Zealand By 7 Wickets In 2nd T20 Match

ಕೋಲ್ ಮೆಕಾಂಚಿ 9 ರನ್, ಜಿಮ್ಮಿ ನೀಶಾಮ್ 21 ರನ್, ರಚಿನ್ ರವೀಂದ್ರ 2 ರನ್, ಕೈಲ್ ಜೆಮಿಸನ್ 8 ರನ್ ಮತ್ತು ನಾಯಕ ಟಿಮ್ ಸೌಥಿ 4 ರನ್ ಗಳಿಸಿ ತಂಡದ ಮೊತ್ತ 140ರ ಗಡಿ ದಾಟಿಸಿದರು.

ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಪರ ಬೌಲಿಂಗ್‌ನಲ್ಲಿ ಆಯಾನ್ ಖಾನ್ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಮುಹಮ್ಮದ್ ಜವಾದುಲ್ಲಾ 4 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಅಲಿ ನಸೀರ್, ಝಹೂರ್ ಖಾನ್ ಮತ್ತು ಮೊಹಮ್ಮದ್ ಫರಾಜುದ್ದೀನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

ನ್ಯೂಜಿಲೆಂಡ್‌ನ 143 ರನ್‌ಗಳ ಗುರಿ ಬೆನ್ನಟ್ಟಿದ ಯುಎಇ ತಂಡದ ಆರಂಭಿಕರಾದ ನಾಯಕ ಮುಹಮ್ಮದ್ ವಸೀಮ್ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 55 ರನ್ ಬಾರಿಸಿದರು.

ಇನ್ನು ವೃತ್ಯ ಅರವಿಂದ್ 25 ರನ್, ಆಸಿಫ್ ಖಾನ್ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 48 ರನ್ ಗಳಿಸಿದರೆ, ಬಾಸಿಲ್ ಹಮೀದ್ 12 ರನ್ ಗಳಿಸುವ ಮೂಲಕ ತಮ್ಮ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ನ್ಯೂಜಿಲೆಂಡ್ ತಂಡದ ಪರ ನಾಯಕ ಟಿಮ್ ಸೌಥಿ, ಮಿಚೆಲ್ ಸ್ಯಾಂಟ್ನರ್ ಮತ್ತು ಕೈಲ್ ಜೆಮಿಸನ್ ತಲಾ ಒಂದೊಂದು ವಿಕೆಟ್ ಪಡೆದರು.

ಗುರುವಾರ ನಡೆದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 19 ರನ್‌ಗಳ ಗೆಲುವು ಸಾಧಿಸಿತ್ತು. ಭಾನುವಾರ, ಆಗಸ್ಟ್ 20ರಂದು ದುಬೈನಲ್ಲಿ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ. ಗೆದ್ದ ತಂಡ ಸರಣಿ ವಶಪಡಿಸಿಕೊಳ್ಳಲಿದೆ.

Story first published: Sunday, August 20, 2023, 11:27 [IST]
Other articles published on Aug 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+