ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಪಾಕ್ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ಗಾಗಿ ಬುಕ್ಕಿಗಳು ಸಂಪರ್ಕಿಸಿದ್ದಾಗ ಆ ವಿಚಾರವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್(ಪಿಸಿಬಿ)ನ ಗಮನಕ್ಕೆ ತಾರದಿದ್ದ ಕಾರಣಕ್ಕಾಗಿ ಅಕ್ಮಲ್ ಈಗ ನಿಷೇಧ ಶಿಕ್ಷೆಗೆ ಗುರಿಯಾಗುವ ಭೀತಿಯಲ್ಲಿದ್ದಾರೆ.
ಮ್ಯಾಚ್ ಫಿಕ್ಸಿಂಗ್‌ಗಾಗಿ ತನ್ನನ್ನು ಸಂಪರ್ಕಿಸಿದ್ದಾಗ ಅದನ್ನು ಬೋರ್ಡ್‌ನ ಗಮನಕ್ಕೆ ತಾರದಿದ್ದ ಕಾರಣಕ್ಕೆ ಉಮರ್ ಅಕ್ಮಲ್ ಮೂರು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗುವ ಭೀತಿ ಎದುರಿಸುತ್ತಿದ್ದಾರೆ. ಬೇರೆ ಬೇರೆ ತಪ್ಪುಗಳಿಗಾಗಿ ಅಕ್ಮಲ್‌ಗೆ ಪಾಕ್ ಶಿಸ್ತು ಸಮಿತಿಯ ಅಧ್ಯಕ್ಷರು ಏಪ್ರಿಲ್ 2020ರಿಂದ ಮೂರು ವರ್ಷಗಳ ನಿಷೇಧ ಹೇರಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ಅಕ್ಮಲ್ ತನ್ನ ತಪ್ಪನ್ನು ಒಪ್ಪಿಕೊಂಡು, ತಪ್ಪಿಗಾಗಿ ಕ್ಷಮೆ ಯಾಚಿಸಿದ್ದಾರೆ. ಫಿಕ್ಸಿಂಗ್ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ನಡೆದಾಗ ಅದನ್ನು ಕೂಡಲೇ ಬೋರ್ಡ್ ಗಮನಕ್ಕೆ ತರುವಂತೆ ಅಕ್ಮಲ್ ತನ್ನ ಸಹ ಆಟಗಾರರಿಗೆ ಮತ್ತು ಕ್ರೀಡಾಪಟುಗಳಿಗೆ ಕೋರಿಕೊಂಡಿದ್ದಾರೆ.
"ಈ ಘಟನೆಯು ಪಾಕಿಸ್ತಾನದ ಘನತೆಗೆ ಹಾನಿಯನ್ನುಂಟುಮಾಡಿದೆ ಎಂದು ನಾನು ಇಂದು ಎಲ್ಲರ ಮುಂದೆ ಒಪ್ಪಿಕೊಳ್ಳುತ್ತೇನೆ. ನನ್ನ ಕುಟುಂಬ, ಪಿಸಿಬಿ ಮತ್ತು ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ನಾನು ಕ್ಷಮೆಯಾಚಿಸುತ್ತೇನೆ. ಉಮರ್ ಅಕ್ಮಲ್ ಆದ ನಾನು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳಿಂದ ದೂರವಿರಲು ಕ್ರೀಡೆಯ ರಾಯಭಾರಿಯಾಗಿ ನಿಮ್ಮೆಲ್ಲರನ್ನೂ ವಿನಂತಿಸಲು ಬಯಸುತ್ತೇನೆ," ಎಂದು ಅಕ್ಮಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications