ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಉಮೇಶ್ ಆಯ್ಕೆ

ನವದೆಹಲಿ, ಅಕ್ಟೋಬರ್ 17: ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದ ವೇಗಿ ಉಮೇಶ್ ಯಾದವ್ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಅಕ್ಟೋಬರ್ 21ರಿಂದ ಪ್ರಾರಂಭವಾಗುತ್ತಿರುವ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಯ್ಕೆಯಾಗಿದ್ದ ಶಾರ್ದೂಲ್ ಠಾಕೂರ್ ಅವರು ಗಾಯಗೊಂಡಿರುವ ಕಾರಣ, ಅವರ ಬದಲು ವೇಗದ ಬೌಲರ್ ಉಮೇಶ್ಯಾದವ್ಗೆ ಸ್ಥಾನ ಲಭಿಸಿದೆ.
ಉಮೇಶ್ ಯಾದವ್ ಇತ್ತೀಚೆಗೆ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೈದರಾಬಾದ್ ಟೆಸ್ಟ್ ನಲ್ಲಿ 6/88 ಹಾಗೂ 4/45 ಒಟ್ಟು 10 ವಿಕೆಟ್ಗಳನ್ನು ಪಡೆದು ಭಾರತ ಸರಣಿ ಗೆಲುವು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಉಮೇಶ್ ಯಾದವ್ ಅವರು ಇಲ್ಲಿ ತನಕ 73 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಕಳೆದ ಜುಲೈನಲ್ಲಿ ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆ ಪಂದ್ಯವಾಡಿದ್ದರು.
ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಹಾಗೂ ಎರಡನೇ ಏಕದಿನ ಪಂದ್ಯಗಳಿಗೆ ಭಾರತ ತಂಡ ಹೀಗಿದೆ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಎಂ.ಎಸ್ಧೋನಿ(ವಿಕೆಟ್ ಕೀಪರ್), ರಿಷಬ್ ಪಂತ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ಶಮಿ, ಖಲೀಲ್ ಅಹ್ಮದ್ ಹಾಗೂ ಉಮೇಶ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications