Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup: ಭಾರತ-ಪಾಕ್‌ ತಂಡಕ್ಕೆ ಅಂಪೈರ್ ಘೋಷಣೆ

ಪುರುಷರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ಭಾರತ ತಂಡದ ಆಟದ ಪ್ರೇರಣೆಯಿಂದ ಮಹಿಳಾ ತಂಡ ಸಹ ಇದೇ ಸಾಧನೆ ಮಾಡಲು ಉತ್ಸುಕವಾಗಿದೆ. ಅಕ್ಟೋಬರ್‌ನಲ್ಲಿ ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಬಲಿಷ್ಠವಾಗಿದೆ. ಈ ಟೂರ್ನಿಯಲ್ಲಿ ಎಲ್ಲರ ಚಿತ್ತ ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳ ನಡುವಿನ ಹೈವೋಲ್ಟೇಜ್‌ ಪಂದ್ಯದ ಮೇಲೆ ನೆಟ್ಟಿರಲಿದೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಂದಾಗಿ ಅಲ್ಲಿ ನಡೆಯಬೇಕಿದ್ದ ಮಹಿಳಾ ಟಿ20 ವಿಶ್ವಕಪ್‌ ಯುಎಇಗೆ ಸ್ಥಳಾಂತರವಾಗಿದೆ. ಈ ದೊಡ್ಡ ಕ್ರಿಕೆಟ್‌ ಟೂರ್ನಿಯಲ್ಲಿ ಭಾಗವಹಿಸಲು ತಂಡಗಳು ಸಹ ಸಜ್ಜಾಗಿವೆ. ಭಾರತ ತಂಡವು A ಗುಂಪಿನಲ್ಲಿ ಸ್ಥಾನ ಪಡೆದಿದೆ.

Umpire Announcement for India-Pakistan Clash in Women s T20 World Cup 2024

ಎ ಗುಂಪಿನಲ್ಲಿ ಭಾರತ

ಟೂರ್ನಿಯಲ್ಲಿ ಭಾರತ ಮಹಿಳಾ ತಂಡವು ತನ್ನ ಅಭಿಯಾನವನ್ನು ಅಕ್ಟೋಬರ್ 4 ರಂದು ಆರಂಭಿಸಲಿದ್ದು, ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. ಉಳಿದಂತೆ ಪಾಕಿಸ್ತಾನ, ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳ ವಿರುದ್ಧವೂ ಭಾರತ ಸೆಣಸಾಡಲಿದೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಬಿಗ್ ಮ್ಯಾಚ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಹೈವೋಲ್ಟೇಜ್‌ ಪಂದ್ಯದ ಬಗ್ಗೆ ಈಗ ದೊಡ್ಡ ಅಪ್ಡೇಟ್ ಹೊರಬಿದ್ದಿದೆ.

ಅಧಿಕಾರಿಗಳ ಪಟ್ಟಿ ಬಿಡುಗಡೆ

ಅಕ್ಟೋಬರ್ 6 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕ್ ಪಂದ್ಯಕ್ಕೆ ಅಂಪೈರ್‌ಗಳನ್ನು ಘೋಷಿಸಲಾಗಿದೆ. ಆಸ್ಟ್ರೇಲಿಯಾದ ಎಲೋಯಿಸ್ ಶೆರಿಡನ್ ಮತ್ತು ದಕ್ಷಿಣ ಆಫ್ರಿಕಾದ ಲಾರೆನ್ ಅಜೆನ್‌ಬಾಗ್ ಅವರನ್ನು ಆನ್ ಫೀಲ್ಡ್ ಅಂಪೈರ್‌ಗಳಾಗಿ ನೇಮಿಸಲಾಗಿದೆ. ಉಳಿದಂತೆ ವೆಸ್ಟ್ ಇಂಡೀಸ್ ನ ಜಾಕ್ವೆಲಿನ್ ವಿಲಿಯಮ್ಸ್ ಟಿವಿ ಅಂಪೈರ್ ಆಗಲಿದ್ದಾರೆ.

Umpire Announcement for India-Pakistan Clash in Women s T20 World Cup 2024

ಅಕ್ಟೋಬರ್ 3 ರಂದು ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭವಾಗಲಿದೆ. ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿರುವ ಪಂದ್ಯಾವಳಿಯ ಪಂದ್ಯದ ಅಧಿಕಾರಿಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಈ ವಿಶ್ವಕಪ್‌ಗೆ ಎಲ್ಲಾ ಪಂದ್ಯದ ಅಧಿಕಾರಿಗಳು ಮಹಿಳೆಯರೇ ಆಗಿದ್ದಾರೆ. ಭಾರತದ ಪರ ಜಿಎಸ್ ಲಕ್ಷ್ಮಿ ಮ್ಯಾಚ್ ರೆಫರಿ ಆಗಿದ್ದರೆ, ವೃಂದಾ ರಾಠಿ ಅಂಪೈರಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ನ್ಯೂಜಿಲೆಂಡ್‌ನ ಕಿಮ್ ಕಾಟನ್ ಮತ್ತು ಅಜೆನ್‌ಬಾಗ್ ಅವರು ಫೀಲ್ಡ್ ಅಂಪೈರ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ಇಂಗ್ಲೆಂಡ್‌ನ ಸುಜಾನ್ನೆ ರೆಡ್‌ಫಿಯರ್ನ್ ಟಿವಿ ಅಂಪೈರ್ ಆಗಿರಲಿದ್ದಾರೆ. ಅಕ್ಟೋಬರ್ 13 ರಂದು ಭಾರತ, ಆಸೀಸ್‌ ಪಂದ್ಯಕ್ಕಾಗಿ ರೆಡ್‌ಫರ್ನ್ ಮತ್ತು ಕಾಟನ್ ಮೈದಾನದಲ್ಲಿ ಇರುತ್ತಾರೆ, ಆದರೆ ವಿಲಿಯಮ್ಸ್ ಮೂರನೇ ಅಂಪೈರ್ ಆಗಿರುತ್ತಾರೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಸಜೀವನ್ ಸಜ್ನಾ, ದಯಾಲನ್ ಹೇಮಲತಾ, ಆಶಾ ಶೋಭನಾ

Story first published: Saturday, September 28, 2024, 10:56 [IST]
Other articles published on Sep 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+