Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ಟೂರ್ನಿಯ ವೇಳೆ ಮೈದಾನದಲ್ಲೇ ಕುಸಿದು ಅಸುನೀಗಿದ ಅಂಪೈರ್

Umpire dies in Pakistan after suffering heart attack on ground

ಕರಾಚಿ, ಅಕ್ಟೋಬರ್ 9: ಕ್ಲಬ್ ಟೂರ್ನಿಯೊಂದರ ವೇಳೆ ಅಂಪೈರ್ ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ (ಅಕ್ಟೋಬರ್ 7) ಪಾಕಿಸ್ತಾನದಲ್ಲಿ ನಡೆದಿದೆ. ನಸೀಮ್ ಶೈಕ್ ಎಂಬ ಅಂಪೈರ್ ಹೃದಯಾಘಾತದಿಂದ ಮೃತರಾಗಿದ್ದಾರೆ.

ಕರಾಚಿಯ ಟಿಎಂಸಿ ಗ್ರೌಂಡ್‌ನಲ್ಲಿ ಲಾಯರ್‌ಗಳಿಗಾಗಿ ಟೂರ್ನಿ ನಡೆಯುತ್ತಿತ್ತು. ಆಗ ಮೇಲ್ವಿಚಾರಣೆಯಲ್ಲಿದ್ದ ಸ್ಥಳೀಯ ಕ್ರಿಕೆಟ್ ನಲ್ಲಿ ಖ್ಯಾತರಾಗಿದ್ದ ಅಂಪೈರ್ ನಸೀಮ್ ಶೈಕ್ ಇದ್ದಕ್ಕಿದ್ದಂತೇ ಮೈದಾನದಲ್ಲೇ ಕುಸಿದರು. ಅವರನ್ನು ಆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ನಸೀಮ್ ಕೊನೆಯುಸಿರೆಳೆದಿದ್ದರು.

'ಪಂದ್ಯದ ಮೇಲ್ವಿಚಾರಣೆ ವೇಳೆ ಶೈಕ್ ಕುಸಿದುಬಿದ್ದರು. ಅವರನ್ನು ಕೂಡಲೇ ಆ್ಯಂಬುಲೆನ್ಸ್‌ ಮೂಲಕ ಸ್ಥಳೀಯ ಕರೆದೊಯ್ಯಲಾಯಿತಾದರೂ ಅವರು ದಾರಿಯಲ್ಲೇ ಸಾವನ್ನಪ್ಪಿದ್ದರು,' ಎಂದು ಆಯೋಜಕರು ತಿಳಿಸಿದ್ದಾರೆ. ನಸೀಮ್ ಅವರಿಗೆ 56 ವರ್ಷ ವಯಸ್ಸಾಗಿತ್ತು.

Story first published: Wednesday, October 9, 2019, 13:12 [IST]
Other articles published on Oct 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+