BAN vs PAK: ಶಕೀಬ್ ಅಲ್ ಹಸನ್ ನಡೆಗೆ ಮೈದಾನದಲ್ಲೇ ಛೀಮಾರಿ ಹಾಕಿದ ಅಂಪೈರ್
ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಗೆಲುವು ದಾಖಲಿಸಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲು ಪಾಕಿಸ್ತಾನ ಪ್ರವಾಸವನ್ನು ಬಾಂಗ್ಲಾದೇಶ ಕೈಗೊಂಡಿದೆ.
ರಾವಲ್ಪಿಂಡಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 10 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ಟೆಸ್ಟ್ ಗೆಲುವಿನ ಖಾತೆ ತೆರೆದಿದೆ. ಇದೇ ಮೊದಲ ಬಾರಿಗೆ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಸೋಲು ಕಂಡಿದೆ.

ಈ ಪಂದ್ಯದಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ತಮ್ಮ ಅಸಭ್ಯ ವರ್ತನೆ ತೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವ ಅವರು ಭಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅದಲ್ಲದೆ, ಮೈದಾನದಲ್ಲೇ ಅವರಿಗೆ ಆನ್ ಫೀಲ್ಡ್ ಅಂಪೈರ್ ಛೀಮಾರಿ ಹಾಕಿದ್ದಾರೆ.
ನಡೆದಿದ್ದೇನು?
ಪಾಕಿಸ್ತಾನ ವಿರುದ್ಧ ಪಂದ್ಯದ ವೇಳೆ ಶಕೀಬ್ ಅಲ್ ಹಸನ್ ಹಲವು ಬಾರಿ ತಾಳ್ಮೆ ಕಳೆದುಕೊಂಡಿದ್ದಾರೆ. ಐದನೇ ದಿನದಂದು ಪಾಕಿಸ್ತಾನ ಬ್ಯಾಟಿಂಗ್ ಮಾಡುವಾಗ ಇದೇ ರೀತಿಯ ಘಟನೆ ಪುನಃ ಜರುಗಿದೆ.
ಪಂದ್ಯದ ಕೊನೆಯ ದಿನದಂದು ಬಾಂಗ್ಲಾ ಗೆಲುವಿಗೆ ಬೇಗ ವಿಕೆಟ್‌ಗಳನ್ನು ಪಡೆಯುವ ಅಗತ್ಯವಿತ್ತು. ಇತ್ತ ಪಾಕಿಸ್ತಾನ ವಿಕೆಟ್ ಕೀಪರ್-ಬ್ಯಾಟರ್ ರಿಜ್ವಾನ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಮಯ ವ್ಯರ್ಥ ಮಾಡಲು ಪ್ರಾರಂಭಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಇನಿಂಗ್ಸ್ ನ 33ನೇ ಓವರ್ ಬೌಲಿಂಗ್ ಮಾಡಲು ಶಕೀಬ್ ಬಂದರು. ಅತ್ತ ಸ್ಟ್ರೈಕ್‌ನಲ್ಲಿ ರಿಜ್ವಾನ್ ಇದ್ದರು. ಈ ವೇಳೆ ಬ್ಯಾಟರ್ ರೆಡಿ ಇಲ್ಲದದ್ದರೂ ಶಕೀಬ್ ಬೌಲಿಂಗ್ ಮಾಡಲು ಮುಂದಾದರು. ಆದರೆ ರಿಜ್ವಾನ್ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲಿಲ್ಲ.
ಶಜೀಬ್ ಅತೃಪ್ತರಾಗಿ ಬಾಂಗ್ಲಾದೇಶದ ವಿಕೆಟ್ ಕೀಪರ್ ಕಡೆಗೆ ಉದ್ದೇಶಪೂರ್ವಕವಾಗಿ ಚೆಂಡನ್ನು ಎಸೆದಿದ್ದು, ಅದು ರಿಜ್ವಾನ್ ಅವರ ತಲೆಯ ಮೇಲೆ ಹೋಗಿತ್ತು. ರಿಜ್ವಾನ್ ಬ್ಯಾಟಿಂಗ್‌ಗೂ ಸಿದ್ಧರಿರಲಿಲ್ಲ. ಶಕೀಬ್ ಅವರ ಈ ನಡೆಯನ್ನು ನೋಡಿದ ಅಂಪೈರ್ ಮೈದಾನದಲ್ಲಿಯೇ ಛೀಮಾರಿ ಹಾಕಿದರು.
ಕೊಲೆ ಪ್ರಕರಣ
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೀಸಲಾತಿ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಕೊಲೆ ಆರೋಪದ ಮೇಲೆ ಶಕೀಬ್ ಅಲ್ ಹಸನ್ ವಿರುದ್ಧ ಪ್ರಕರಣ ದಾಖಲಾಗಿದೆ. ಗಾರ್ಮೆಂಟ್ಸ್ ಕೆಲಸಗಾರ ಮೃತ ರುಬೆಲ್ ತಂದೆ ರಫೀಕುಲ್ ಇಸ್ಲಾಂ ಅವರು ನೀಡಿರುವ ದೂರಿನ ಮೇರೆಗೆ ಆಗಸ್ಟ್ 22ರ ರಾತ್ರಿ ಢಾಕಾದ ಅಡ್ಬೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಶಕೀಬ್ 28ನೇ ಆರೋಪಿ ಆಗಿದ್ದು, ಇತರ ಆರೋಪಿಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ, ಒಬೈದುಲ್ ಕ್ವಾಡರ್ ಸೇರಿದಂತೆ 154 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications