ಟಿ20 ವಿಶ್ವಕಪ್: ಜಸ್ಪ್ರೀತ್ ಬುಮ್ರಾಗೆ ಉಮ್ರಾನ್ ಮಲಿಕ್ ಜೊತೆಗಾರನಾಗಬೇಕು: ಭಜ್ಜಿ

ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಸನ್‌ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ಅವರನ್ನು ಟಿ20 ವಿಶ್ವಕಪ್‌ಗಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಮತ್ತು ಐಸಿಸಿ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಆಡಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ.
ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ 22 ವರ್ಷದ ಉಮ್ರಾನ್ ಮಲಿಕ್, ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಈವರೆಗೆ 15 ವಿಕೆಟ್‌ಗಳನ್ನು ಪಡೆದಿರುವ ಮಲಿಕ್, ಪ್ರಸಕ್ತ ಐಪಿಎಲ್‌ನಲ್ಲಿ ದಾಖಲೆಯ 157 kmph ವೇಗದ ಬೌಲ್ ಮಾಡಿದ್ದಾರೆ.
"ಉಮ್ರಾನ್ ಮಲಿಕ್ ನನ್ನ ಅಚ್ಚುಮೆಚ್ಚಿನ ಬೌಲರ್ ಆಗಿದ್ದು, ನಾನು ಅವರನ್ನು ಭಾರತ ತಂಡದಲ್ಲಿ ನೋಡಲು ಬಯಸುತ್ತೇನೆ. ಏಕೆಂದರೆ ಅವರು ಅದ್ಭುತ ಬೌಲರ್,'' ಎಂದು ಹರ್ಭಜನ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್‌ನ 'ಡ್ರೀಮ್‌ಸೆಟ್‌ಗೊ' ಅಧಿಕೃತ ಟ್ರಾವೆಲ್ ಏಜೆಂಟ್ ಆದ ನಂತರ ಹರ್ಭಜನ್ ಮಾತನಾಡಿದರು.

ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿದ್ದಿದ್ದರೆ ಭಾರತ ತಂಡಕ್ಕೆ ಸೇರಿಸುತ್ತಿದ್ದೆ
"150 (kmph) ಗಿಂತ ಹೆಚ್ಚು ಬೌಲಿಂಗ್ ಮಾಡುವ ಮತ್ತು ದೇಶಕ್ಕಾಗಿ ಆಡದ ಯಾವುದೇ ಬೌಲರ್ ಇದ್ದರೆ ನನಗೆ ಹೇಳಿ. ಇದು ಒಂದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ಉಮ್ರಾನ್ ಕ್ರಿಕೆಟ್ ಅನ್ನು ತೆಗೆದುಕೊಳ್ಳಲು ಅನೇಕ ಯುವಕರನ್ನು ಪ್ರೇರೇಪಿಸುತ್ತಾರೆ," ಎಂದು ಹೇಳಿದ ಹರ್ಭಜನ್ ಸಿಂಗ್, ನಾನು ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿದ್ದಿದ್ದರೆ, ಜಮ್ಮುವಿನ ಈ ವೇಗಿಯನ್ನು ಭಾರತ ತಂಡಕ್ಕೆ ಸೇರಿಸುತ್ತಿದ್ದೆ ಎಂದರು.
ಭಾರತವು ಆಸ್ಟ್ರೇಲಿಯಾದಂತಹ ಪಿಚ್‌ಗಳಲ್ಲಿ (ಟಿ20 ವಿಶ್ವಕಪ್‌ಗಾಗಿ) ಆಡುವಾಗ ಉಮ್ರಾನ್ ಮಲಿಕ್‌ನಂತಹ ವೇಗಿ ಜಸ್ಪ್ರೀತ್ ಬುಮ್ರಾ ಜೊತೆಗಾರನಾಗಬೇಕು," ಎಂದು ಮಾಜಿ ಆಫ್ ಸ್ಪಿನ್ನರ್ ಅಭಿಪ್ರಾಯಪಟ್ಟರು.

ಭರವಸೆಯ ಕ್ರಿಕೆಟಿಗರಾಗಿದ್ದಾರೆ ಮತ್ತು ಆಯ್ಕೆಯಾಗುತ್ತಾರೆ
"ಉಮ್ರಾನ್ ಸಹ ಕಲಿಯುತ್ತಿದ್ದಾರೆ ಎಂದು ನನಗೆ ಖಾತ್ರಿಯಿದ್ದು, ಅವರು ಭರವಸೆಯ ಕ್ರಿಕೆಟಿಗರಾಗಿದ್ದಾರೆ ಮತ್ತು ಅವರು ಆಯ್ಕೆಯಾಗುತ್ತಾರೆ, ಭಾರತಕ್ಕಾಗಿ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ರಾಷ್ಟ್ರೀಯ ತಂಡಕ್ಕೆ ಅವರನ್ನು ಪರಿಗಣಿಸುವಾಗ 22 ವರ್ಷದ ಮಲಿಕ್ ಅವರ ವಯಸ್ಸು ಒಂದು ಅಂಶವಾಗಿರಬಾರದು ಎಂದು ಹರ್ಭಜನ್ ಹೇಳಿದರು.
"ಸಚಿನ್ ಭಾರತಕ್ಕಾಗಿ ಆಡಿದಾಗ, ಅವರು ತುಂಬಾ ಚಿಕ್ಕವರಾಗಿದ್ದರು. ಸಹಜವಾಗಿ ಅವರು ಮುಂದೊಂದು ದಿನ ಸಚಿನ್ ತೆಂಡೂಲ್ಕರ್ ಆದರು. 'ಐಸೆ ಹೈ ಪ್ಲೇಯರ್ ಬಂತೆ ಹೈ' (ಆಟಗಾರರನ್ನು ಹೀಗೆ ತಯಾರಿಸಲಾಗುತ್ತದೆ)." ಎಂದು ಭಜ್ಜಿ ನುಡಿದರು.
"ನಾನು ನನ್ನ ಮೊದಲ ಟೆಸ್ಟ್ ಆಡಿದಾಗ ನನಗೆ 17 ಮತ್ತು ಅರ್ಧ ವರ್ಷ. ಆದರೆ ಅವನು (ಉಮ್ರಾನ್) ಮಗು ಎಂದು ನೀವು ಯೋಚಿಸುತ್ತಿದ್ದರೆ, ಸಮಯ ಮೀರಿ ಹೋಗುತ್ತದೆ. ಅವನು ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿರುವಾಗಲೇ ಅವನು ಆಡುತ್ತಿರಬೇಕು. ಅವರ ವಯಸ್ಸು ಏನೆಂಬುದನ್ನು ಮರೆತುಬಿಡಿ, ಯಾರಾದರೂ ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಮತ್ತು ಸಾಕಷ್ಟು ಫಿಟ್ ಆಗಿದ್ದರೆ ಅವರನ್ನು ಅಯ್ಕೆಗೆ ಪರಗಣಿಸಬೇಕು,'' ಎಂದು ಹರ್ಭಜನ್ ಹೇಳಿದರು.

ಟಿ20 ವಿಶ್ವಕಪ್‌ಗೂ ಮುನ್ನ ಕೊಹ್ಲಿ, ರೋಹಿತ್ ಫಾರ್ಮ್‌ಗೆ ಮರಳುತ್ತಾರೆ
ಲೀನ್ ಪ್ಯಾಚ್ (ಫಾರ್ಮ್ ಕೊರತೆ) ಮೂಲಕ ಹೋಗುವುದು ಪ್ರತಿಯೊಬ್ಬ ಆಟಗಾರನ ವೃತ್ತಿಜೀವನದ ಭಾಗ ಎಂದು ಹೇಳುವ ಹರ್ಭಜನ್, ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮೊದಲು ಫಾರ್ಮ್‌ಗೆ ಮರಳಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿದರು.
"ಖಂಡಿತ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಶ್ವ ದರ್ಜೆಯ ಚಾಂಪಿಯನ್ ಆಟಗಾರರು, ಅವರು ಟಿ20 ವಿಶ್ವಕಪ್‌ಗೆ ಮೊದಲು ಫಾರ್ಮ್‌ಗೆ ಮರಳುತ್ತಾರೆ ಎಂದು ನಾನು ಭರವಸೆ ಹೊಂದಿದ್ದೇನೆ,'' ಎಂದರು.

ಟಿ20 ವಿಶ್ವಕಪ್ ತಂಡದ ಭಾಗವಾಗಲು 'ಕುಲ್ಚಾ' ಜೋಡಿಗೆ ಭಜ್ಜಿ ಬೆಂಬಲ
ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲು ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ (ಕುಲ್ಚಾ) ಅವರ ಸ್ಪಿನ್ ಜೋಡಿಯನ್ನು ಮಾಜಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಬೆಂಬಲಿಸಿದರು.
"ಕುಲ್ಚಾ ಜೋಡಿಯನ್ನು ಮರಳಿ ತರಬೇಕು ಎಂದು ನಾನು ಖಂಡಿತವಾಗಿಯೂ ಬೆಂಬಲಿಸುತ್ತೇನೆ. ಕುಲದೀಪ್ ಮತ್ತು ಯುಜ್ವೇಂದ್ರ ಅವರು ಟೀಮ್ ಇಂಡಿಯಾಗೆ ಅದ್ಭುತ ಪ್ರದರ್ಶನ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಒಟ್ಟಿಗೆ ಆಡಿದಾಗ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುತ್ತಾರೆ, ಅದು ಟಿ20, ಏಕದಿನ ಅಥವಾ ಯಾವುದೇ ಸ್ವರೂಪವಾಗಿರಲಿ," ಎಂದು ಬಣ್ಣಿಸಿದರು.
"ಆಯ್ಕೆದಾರರು ಭಾರತಕ್ಕಿದ್ದ ಉತ್ತಮವಾದ ಜೋಡಿಯನ್ನು ಏಕೆ ಮುರಿದರು ಎಂದು ನನಗೆ ತಿಳಿದಿಲ್ಲ. ಅವರು ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಮಾಡುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ, ಅಲ್ಲಿ ಮೈದಾನಗಳು ದೊಡ್ಡದಾಗಿದೆ ಮತ್ತು ಈ ಇಬ್ಬರೂ ಗುಣಮಟ್ಟದ ಬೌಲರ್‌ಗಳು,'' ಎಂದು ಕುಲ್ಚಾ ಜೋಡಿಗಡ ಬೆಂಬಲ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications