Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇರ್ಫಾನ್ ಪಠಾಣ್ ಕ್ರಿಕೆಟ್‌ ಬದುಕಿನ ಟಾಪ್-5 ಅವಿಸ್ಮರಣೀಯ ಕ್ಷಣಗಳು

Uncountable achievements by irfan pathan

ಇರ್ಫಾನ್ ಪಠಾಣ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿನ್ನೆ ವಿದಾಯವನ್ನು ಹೇಳಿದ್ದಾರೆ. ಕಿರಿಯ ವಯಸ್ಸಿನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಇರ್ಫಾನ್ ಪಠಾಣ್ ಬೇಗನೆ ಖ್ಯಾತಿಯನ್ನು ಗಳಿಸಿದರು ಆದರೆ ಅಷ್ಟೇ ಬೇಗನೆ ತಂಡದಿಂದ ದೂರವಾದರು ಕೂಡ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿ ಹಲವು ವರ್ಷವಾದರೂ ಇರ್ಫಾನ್ ಪಠಾಣ್ ನಿನ್ನೆ ಅಧಿಕೃತವಾಗಿ ತಮ್ಮ ವಿದಾಯವನ್ನು ಘೋಷಿಸಿದ್ದಾರೆ.

35 ವರ್ಷದ ಇರ್ಫಾನ್ ಪಠಾಣ್ 2017ರ ಐಪಿಎಲ್ ಬಳಿಕ ಐಪಿಎಲ್‌ನಲ್ಲಿ ಹರಾಜಾಗದೇ ಉಳಿದುಕೊಂಡಿದ್ದರು, ಈ ಬಾರಿಯ ಹರಾಜು ಪ್ರಕ್ರಿಯೆಗೆ ಪಠಾಣ್ ತಮ್ಮ ಹೆಸರನ್ನು ನೊಂದಾಯಿಸಿರಲೇ ಇಲ್ಲ. ಆಗಲೇ ಇರ್ಫಾನ್ ನಿವೃತ್ತಿಯ ಸುಳಿವು ಸಿಕ್ಕಿತ್ತು ಇದೀಗ ಅಧೀಕೃತವಾಗಿದೆ.

ಹೆಚ್ಚಿನ ಆಟಗಾರರು 27ನೇ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಾರೆ ಆದರೆ ನನ್ನ ಬದುಕಿನಲ್ಲಿ ಅದು ವಿಭಿನ್ನವಾಗಿದೆ. 27 ವಯಸ್ಸಿಗೆ ನನ್ನ ಅಂತರಾಷ್ಟ್ರೀಯ ಕ್ರಿಕೆಟ್‌ ಜೀವನ ಅಂತ್ಯವಾಗಿಬಿಟ್ಟಿತು ಎಂದು ಇರ್ಫಾನ್ ಪಠಾಣ್ ನೋವಿನಿಂದ ಹೇಳಿಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ಇನ್ನಿಂಗ್ಸ್‌ಗಳನ್ನು ಆಡಿರುವ ಪಠಾಣ್ ಅವರ ಐದು ಮಹತ್ವದ ಕ್ಷಣಗಳು ನಿಮ್ಮ ಮುಂದೆ:

ಅಣ್ಣನ ಜೊತೆ ಸೇರಿ ಫಲಿತಾಂಶವನ್ನೇ ಬದಲಿಸಿದ ಇರ್ಫಾನ್

ಅಣ್ಣನ ಜೊತೆ ಸೇರಿ ಫಲಿತಾಂಶವನ್ನೇ ಬದಲಿಸಿದ ಇರ್ಫಾನ್

ಅದು ಶ್ರೀಲಂಕಾ ವಿರುದ್ಧದ ಟಿ20 ಪಂದ್ಯ. ಈ ಪಂದ್ಯದಲ್ಲಿ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 172 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಆದರೆ 7 ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಅಕ್ಷರಶಃ ಸೋಲಿನತ್ತ ಮುಖ ಮಾಡಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ಗಿಳಿದಿದ್ದು ಇರ್ಫಾನ್ ಪಠಾಣ್. ಗೆಲುವಿಗೆ ಇನ್ನೂ 57 ರನ್‌ಗಳ ಅವಶ್ಯಕತೆಯಿತ್ತು. ಮತ್ತೊಂದು ತುದಿಯಲ್ಲಿದ್ದ ಸಹೋದರ ಯುಸುಫ್ ಪಠಾಣ್ ಜೊತೆ ಸೇರಿ ನಿರೀಕ್ಷೆಯೇ ಮಾಡದಂತೆ ಪಂದ್ಯವನ್ನು ಭಾರತದತ್ತ ತಿರುಗಿಸಿದರು. ಇರ್ಫಾನ್ ಪಠಾಣ್ ಮತ್ತು ಯುಸೂಫ್ ಪಠಾಣ್ ಮುರಿಯದ 8ನೇ ವಿಕೆಟ್‌ಗೆ ಭರ್ಜರಿಯಾಗಿ ಜಯವನ್ನು ತಂದಿತ್ತರು.

ಐಸಿಸಿ ಎಮರ್ಜಿಂಗ್ ಪ್ಲೇಯರ್

ಐಸಿಸಿ ಎಮರ್ಜಿಂಗ್ ಪ್ಲೇಯರ್

2003ರಲ್ಲಿ ಇರ್ಫಾನ್ ಪಠಾಣ್ ಟೀಮ್ ಇಂಡಯಾದ ಕದ ತಟ್ಟಿದರು. ತನ್ನ ತನ್ನ 19ನೇ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಠಾಣ್ ಆರಂಭದಲ್ಲೇ ಉತ್ತಮ ಪ್ರದರ್ಶನ ತೋರಿ ಗಮನ ಸೆಳೆದರು. 2004ರಲ್ಲಿ ಐಸಿಸಿಯ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಗೆ ಭಾಜನರಾದರು.

ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!

ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್

ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್

2006ರಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಕರಾಚಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಇರ್ಫಾನ್ ಪಠಾಣ್ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ವಿಕೆಟ್‌ ಕಿತ್ತು ಆಘಾತ ನೀಡಿದರು. ಇದು ಅಂತರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲಿ ಮೊದಲ ಓವರ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಏಕೈಕ ನಿದರ್ಶನವಾಗಿದೆ.

ಮ್ಯಾನ್ ಆಫ್ ದಿ ಮ್ಯಾಚ್ ಟಿ20 ಫೈನಲ್

ಮ್ಯಾನ್ ಆಫ್ ದಿ ಮ್ಯಾಚ್ ಟಿ20 ಫೈನಲ್

2007ರಲ್ಲಿ ಮೊದಲ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶ ಮಾಡಿತು. ಫೈನಲ್‌ನಲ್ಲಿ ಪಾಕಿಸ್ತಾನ ಟೀಮ್ ಇಂಡಿಯಾಗೆ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್‌ ಮಾಡಿದ ಟೀಮ್ ಇಂಡಿಯಾ 158ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ಪರವಾಗಿ ಇರ್ಫಾನ್ ಪಠಾಣ್ ನಾಲ್ಕು ಓವರ್‌ಗಳಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್‌ ಪಡೆದು ಗೆಲುವಿಗೆ ಪ್ರಮುಖ ಕಾರಣವಾದರು. ಈ ಅದ್ಭುತ ಪ್ರದರ್ಶನಕ್ಕೆ ಇರ್ಫಾನ್ ಪಠಾಣ್ ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರು.

ಒಡಿಐನಲ್ಲಿ ವೇಗವಾಗಿ 100 ವಿಕೆಟ್‌ ಗಳಿಸಿದ ಮೂರನೇ ಬೌಲರ್

ಒಡಿಐನಲ್ಲಿ ವೇಗವಾಗಿ 100 ವಿಕೆಟ್‌ ಗಳಿಸಿದ ಮೂರನೇ ಬೌಲರ್

ಇರ್ಫಾನ್ ಪಠಾಣ್ ಮೂರೂ ಫಾರ್ಮೆಟ್‌ನಲ್ಲೂ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್‌ ಪಡೆದ 3ನೇ ಭಾರತೀಯ ಬೌಲರ್‌ ಎಂಬ ಖ್ಯಾತಿಗೂ ಇರ್ಫಾನ್ ಪಠಾಣ್ ಪಾತ್ರರಾಗಿದ್ದರು.

Story first published: Sunday, January 5, 2020, 16:53 [IST]
Other articles published on Jan 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+