U-19 ವಿಶ್ವಕಪ್, ಸೆಮಿ ಫೈನಲ್: ಆಸ್ಟ್ರೇಲಿಯಾಗೆ 291 ರನ್‌ಗಳ ಗುರಿ ನೀಡಿದ ಭಾರತ

ಅಂಡರ್ 19 ವಿಶ್ವಕಪ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದು ಫೈನಲ್ ಹಂತಕ್ಕೇರಲು ಎರಡು ತಂಡಗಳು ಕೂಡ ಭಾರೀ ಪೈಪೋಟಿ ನಡೆಸಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ಕಿರಿಯರ ಬಳಗ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು 291 ರನ್‌ಗಳ ಗುರಿ ನಿಗದಿಪಡಿಸಿದೆ. ಭಾರತ ತಂಡದ ಪರವಾಗಿ ನಾಯಕ ಯಶ್ ಧುಲ್ ಹಾಗೂ ಶೈಕ್ ರಶೀದ್ ನೀಡಿದ ಅಮೋಘ ಆಟದಿಂದಾಗಿ ಭಾರತ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ತಂಡದ ಮೊತ್ತ 37 ರನ್‌ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರು ಕೂಡ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿಕೊಂಡಿದ್ದರು. ಅಂಕ್ರಿಶ್ ರಘುವಂಶಿ 6 ರನ್‌ಗಳಿಸಿ ಔಟಾದರೆ ಹರ್ನೂರ್ ಸಿಂಗ್ 16 ರನ್‌ಗಳ ಕೊಡುಗೆಯನ್ನು ಮಾತ್ರವೇ ನೀಡಿದರು. ಈ ಮೂಲಕ ಆಸ್ಟ್ರೇಲಿಯಾದ ಬೌಲಿಂಗ್ ಪಡೆ ಭಾರತದ ವಿರುದ್ಧ ಉತ್ತಮ ಮೇಲುಗೈ ಸಾಧಿಸುವ ವಿಶ್ವಾಸ ಮೂಡಿಸಿತ್ತು.
ಆದರೆ ಅದಾದ ಬಳಿಕ ಭಾರತದ ಇಬ್ಬರು ಬ್ಯಾಟರ್‌ಗಳಾದ ನಾಯಕ ಯಶ್ ಧುಲ್ ಹಾಗೂ ಶೇಕ್ ರಶೀದ್ ನೀಡಿದ ಅಮೋಘ ಆಟ ಆಸಿಸ್ ಬೌಲರ್‌ಗಳನ್ನು ಕಂಗೆಡುವಂತೆ ಮಾಡಿದರು. ಇಬ್ಬರು ಕೂಡ ನಿಧಾನವಾಗಿ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದರು. ತಂಡಕ್ಕೆ ಎಲ್ಲೂ ಆಘಾತವಾಗದಂತೆ ನೋಡಿಕೊಳ್ಳುವಲ್ಲಿ ಈ ಆಟಗಾರರು ಯಶಸ್ವಿಯಾದರು. ಈ ಜೋಡಿಯಿಂದ ಭರ್ಜರಿ ದ್ವಿಶತಕದ ಜೊತೆಯಾಟ ದಾಖಲಾಗಿತ್ತು. ನಾಯಕ ಯಶ್ ಧುಲ್ ಭರ್ಜರಿ ಶತಕ ದಾಖಲಿಸಿದರೆ ರಶೀದ್ 94 ರನ್‌ಗಳಿಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಶತಕ ವಂಚಿತವಾದರು. ತಂಡದ ಮೊತ್ತ 241 ರನ್‌ಗಳಾಗುವಷ್ಟರಲ್ಲಿ ಈ ಜೋಡಿ ಬೇರ್ಪಟ್ಟಿತು. ಇದಾದ ಬಳಿಕ ಅಂತಿಮ ಓವರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಬಾನಾ ನಾಲ್ಕು ಎಸೆತಗಳನ್ನು ಎದುರಿಸಿ 20 ರನ್ ದೋಚುವ ಮೂಲಕ ತಂಡದ ಮೊತ್ತ 290 ತಲುಪಲು ಕಾರಣವಾದರು.
ಅಂಡರ್ 19 ವಿಶ್ವಕಪ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಭಾರತ ಐದನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದೆ. ಕಳೆದ ಅಂಡರ್ 19 ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಎಡವಿದ್ದ ಟ್ರೋಫಿಯಿಂದ ವಂಚಿತವಾಗಿತ್ತು. ಆದರೆ ಈ ಬಾರಿ ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಇನ್ನು ಸೆಮಿಫೈನಲ್ ಹಂತಕ್ಕೇರಲು ಭಾರತ ಹಾಗೂ ಆಸ್ಟ್ರೇಲಿಯಾ ಕಿರಿಯರ ತಂಡಗಳು ಅದ್ಭುತ ಆಟವನ್ನು ಪ್ರದರ್ಶಿಸುತ್ತಾ ಬಂದಿದೆ. ಎರಡು ತಂಡಗಳು ಕೂಡ ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ.
ಭಾರತ ಅಂಡರ್ 19 ತಂಡ: ಅಂಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್ (ನಾಯಕ), ನಿಶಾಂತ್ ಸಿಂಧು, ರಾಜ್ ಬಾವಾ, ಕೌಶಲ್ ತಾಂಬೆ, ದಿನೇಶ್ ಬನಾ (ವಿಕೆಟ್ ಕೀಪರ್), ರಾಜವರ್ಧನ್ ಹಂಗರ್‌ಗೇಕರ್, ವಿಕ್ಕಿ ಓಸ್ತ್ವಾಲ್, ರವಿ ಕುಮಾರ್
ಬೆಂಚ್: ಸಿದ್ದಾರ್ಥ್ ಯಾದವ್, ಮಾನವ್ ಪರಾಖ್, ಅನೀಶ್ವರ್ ಗೌತಮ್, ಆರಾಧ್ಯ ಯಾದವ್, ಗರ್ವ್ ಸಾಂಗ್ವಾನ್
ಆಸ್ಟ್ರೇಲಿಯಾ ಅಂಡರ್ 19 ತಂಡ: ಕ್ಯಾಂಪ್‌ಬೆಲ್ ಕೆಲ್ಲವೇ, ಟೀಗ್ ವೈಲ್ಲಿ, ಕೋರಿ ಮಿಲ್ಲರ್, ಕೂಪರ್ ಕೊನೊಲಿ (ನಾಯಕ), ಲಾಚ್ಲಾನ್ ಶಾ, ನಿವೇತನ್ ರಾಧಾಕೃಷ್ಣನ್, ವಿಲಿಯಂ ಸಾಲ್ಜ್‌ಮನ್, ಟೋಬಿಯಾಸ್ ಸ್ನೆಲ್ (ವಾಕ್), ಜ್ಯಾಕ್ ಸಿನ್‌ಫೀಲ್ಡ್, ಟಾಮ್ ವಿಟ್ನಿ, ಜ್ಯಾಕ್ ನಿಸ್ಬೆಟ್
ಬೆಂಚ್: ಏಡನ್ ಕಾಹಿಲ್, ಹರ್ಕಿರತ್ ಬಾಜ್ವಾ, ಜೋಶುವಾ ಗಾರ್ನರ್, ಐಸಾಕ್ ಹಿಗ್ಗಿನ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications