For Quick Alerts
ALLOW NOTIFICATIONS  
For Daily Alerts
 

U-19 ವಿಶ್ವಕಪ್, ಸೆಮಿ ಫೈನಲ್: ಭಾರತ vs ಆಸ್ಟ್ರೇಲಿಯಾ: ಟಾಸ್ ಗೆದ್ದ ಭಾರತ ಬ್ಯಾಟಿಂಗ್: ಆಡುವ ಬಳಗ

Under-19 World Cup Semifinal: India vs Australia: India won the Toss, Playing XI details

ಅಂಡರ್ 19 ವಿಶ್ವಕಪ್‌ನಲ್ಲಿ ಇಂದು ಎರಡನೇ ಸೆಮಿ ಫೈನಲ್ ಸೆಣೆಸಾಟ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾದ ಕಿರಿಯರ ತಂಡಗಳು ಮುಖಾಮುಖಿಯಾಗಿದ್ದು ಫೈನಲ್ ಹಂತಕ್ಕೇರಲು ಪೈಪೋಟಿ ನಡೆಸುತ್ತಿವೆ. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಭಾರತ ಆರಂಭಿಕ ಆಘಾತವನ್ನು ಅನುಭವಿಸಿದ್ದು ಸಣ್ಣ ಹಿನ್ನಡೆ ಅನುಭವಿಸಿದೆ.

ಅಂಡರ್ 19 ವಿಶ್ವಕಪ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಭಾರತ ಐದನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದೆ. ಕಳೆದ ಅಂಡರ್ 19 ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಎಡವಿದ್ದ ಟ್ರೋಫಿಯಿಂದ ವಂಚಿತವಾಗಿತ್ತು. ಆದರೆ ಈ ಬಾರಿ ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಇನ್ನು ಸೆಮಿಫೈನಲ್ ಹಂತಕ್ಕೇರಲು ಭಾರತ ಹಾಗೂ ಆಸ್ಟ್ರೇಲಿಯಾ ಕಿರಿಯರ ತಂಡಗಳು ಅದ್ಭುತ ಆಟವನ್ನು ಪ್ರದರ್ಶಿಸುತ್ತಾ ಬಂದಿದೆ. ಎರಡು ತಂಡಗಳು ಕೂಡ ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ.

ಹಾಗೆ ನೋಡಿದರೆ ಭಾರತದ ಈ ವಿಶ್ವಕಪ್ ಹಾದಿ ಸುಗಮವಾಗಿರಲಿಲ್ಲ. ಗಾಯದ ಸಮಸ್ಯೆ ಹಾಗೂ ಕೊರೊನಾವೈರಸ್ ತಂಡಕ್ಕೆ ಭಾರೀ ಆಘಾತವನ್ನು ನೀಡಿದ್ದು. ಕೆಲ ಪಂದ್ಯಗಳಲ್ಲಿ ಮೀಸಲು ಆಟಗಾರರನ್ನು ಕೂಡ ಬಳಸಿಕೊಳ್ಳಬೇಕಾದ ಅನಿವಾರ್ಯತೆಗೆ ಭಾರತ ಸಿಲುಕಿತ್ತು. ಆದರೆ ಈ ಎಲ್ಲಾ ಸವಾಲುಗಳನ್ನು ಭಾರತದ ಕಿರಿಯರ ತಂಡ ದಿಟ್ಟವಾಗಿ ಎದುರಿಸಿದ್ದು ಈಗ ಸೆಮಿಫೈನಲ್ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ಆದರೆ ಸೆಮಿಫೈನಲ್ ಹಂತದ ವೇಳೆಗೆ ಭಾರತದ ಕಿರಿಯರ ತಂಡದ ಎಲ್ಲಾ ಆಟಗಾರರು ಕೂಡ ಆಡಲು ಸಮರ್ಥರಾಗಿದ್ದಾರೆ

ಭಾರತ ಅಂಡರ್ 19 ತಂಡ: ಅಂಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್ (ನಾಯಕ), ನಿಶಾಂತ್ ಸಿಂಧು, ರಾಜ್ ಬಾವಾ, ಕೌಶಲ್ ತಾಂಬೆ, ದಿನೇಶ್ ಬನಾ (ವಿಕೆಟ್ ಕೀಪರ್), ರಾಜವರ್ಧನ್ ಹಂಗರ್‌ಗೇಕರ್, ವಿಕ್ಕಿ ಓಸ್ತ್ವಾಲ್, ರವಿ ಕುಮಾರ್
ಬೆಂಚ್: ಸಿದ್ದಾರ್ಥ್ ಯಾದವ್, ಮಾನವ್ ಪರಾಖ್, ಅನೀಶ್ವರ್ ಗೌತಮ್, ಆರಾಧ್ಯ ಯಾದವ್, ಗರ್ವ್ ಸಾಂಗ್ವಾನ್

ಆಸ್ಟ್ರೇಲಿಯಾ ಅಂಡರ್ 19 ತಂಡ: ಕ್ಯಾಂಪ್‌ಬೆಲ್ ಕೆಲ್ಲವೇ, ಟೀಗ್ ವೈಲ್ಲಿ, ಕೋರಿ ಮಿಲ್ಲರ್, ಕೂಪರ್ ಕೊನೊಲಿ (ನಾಯಕ), ಲಾಚ್ಲಾನ್ ಶಾ, ನಿವೇತನ್ ರಾಧಾಕೃಷ್ಣನ್, ವಿಲಿಯಂ ಸಾಲ್ಜ್‌ಮನ್, ಟೋಬಿಯಾಸ್ ಸ್ನೆಲ್ (ವಾಕ್), ಜ್ಯಾಕ್ ಸಿನ್‌ಫೀಲ್ಡ್, ಟಾಮ್ ವಿಟ್ನಿ, ಜ್ಯಾಕ್ ನಿಸ್ಬೆಟ್
ಬೆಂಚ್: ಏಡನ್ ಕಾಹಿಲ್, ಹರ್ಕಿರತ್ ಬಾಜ್ವಾ, ಜೋಶುವಾ ಗಾರ್ನರ್, ಐಸಾಕ್ ಹಿಗ್ಗಿನ್ಸ್

Story first published: Wednesday, February 2, 2022, 20:15 [IST]
Other articles published on Feb 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+