ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ. ಇತ್ತೀಚಿಗೆ ಏಷ್ಯಾ ಕಪ್ ಟಿ20 ಟೂರ್ನಿಯ ಸಮಾರೋಪ ಸಮಾರಂಭವನ್ನು ಬಹಿಷ್ಕರಿಸಿ ಪಿಸಿಬಿ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಭಾರತೀಯ ಆಟಗಾರರು ಮುಜುಗರಕ್ಕೆ ಈಡು ಮಾಡಿದ್ದರು. ಈ ವೇಳೆ ಮೊಹ್ಸಿನ್ ನಖ್ವಿ ಏಷ್ಯಾ ಕಪ್ ಟಿ20 ಟ್ರೋಫಿಯನ್ನು ತಮ್ಮೊಂದಿಗೆ ಕೊಂಡೊಯ್ದರು. ಈ ಕ್ರಮವನ್ನು ಹಲವು ಆಟಗಾರರು ಖಂಡಿಸಿದ್ದರು. ಈಗ ಈ ಟ್ರೋಫಿ ಭಾರತದ ಕೈ ಸೇರುವುದ ಸನಿಹವಾಗಿದೆ. ಹಾಗಿದ್ದರೆ ಆಗಿದ್ದೇನು? ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಇತ್ತೀಚಿಗೆ ಪಾಕಿಸ್ತಾನ ತಾನು ಕೊಂಡೊಯ್ದಿದ್ದ ಏಷ್ಯಾ ಕಪ್ ಟಿ20 ಟ್ರೋಫಿಯನ್ನು ಮತ್ತೆ ಯುಎಇಗೆ ಮರಳಿ ನೀಡಿದೆ ಎಂದು ತಿಳಿದು ಬಂದಿದೆ. ಈ ಟ್ರೋಫಿ ಶೀಘ್ರದಲ್ಲಿ ಬಿಸಿಸಿಐ ಕೈ ಸೇರಲಿದೆ. ಈ ಮೂಲಕ ಟೀಮ್ ಇಂಡಿಯಾದಿಂದ ದೂರ ಹೋಗಿದ್ದ ಟ್ರೋಫಿ ಮತ್ತೆ ಹತ್ತಿರ ವಾಗುತ್ತಿದೆ. ಕಳೆದ ಭಾನುವಾರ ಭಾರತ ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋಲದೇ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.

ಸೂರ್ಯ ಪಡೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೂ ಸಹ ಟ್ರೋಫಿ ಕ ಹತ್ತಿರಲಿಲ್ಲ. ಸೂರ್ಯಕುಮಾರ್ ಪಡೆ ಪಿಸಿಬಿ, ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಹಿಂದೇಟು ಹಾಕಿದರು. ಅಲ್ಲದೆ ಅವರಿದ್ದ ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ನಖ್ವಿ ತಾವೇ ಪ್ರಶಸ್ತಿಯನ್ನು ನೀಡಲು ಬಂದಿದ್ದರು. ಆದರೆ ಟೀಮ್ ಇಂಡಿಯಾ ಪೋಡಿಯಂ ಹತ್ತದ ಅವರಿಗೆ ಮುಖಭಂಗ ಮಾಡಿತು. ನಖ್ವಿ ನಾಚಿಕೆ ಇಲ್ಲದೆ ಹಲವು ಗಂಟೆಗಳ ಕಾಲ ವೇದಿಕೆಯಲ್ಲಿ ಚಾಂಪಿಯನ್ ತಂಡಕ್ಕಾಗಿ ಕಾದರು. ಕೊನೆಗೆ ಟ್ರೋಫಿ ಎತ್ತಿಕೊಂಡು ಹೋದ್ರು.ಇದು ಕೋಲಾಹಲಕ್ಕೆ ಕಾರಣವಾಯಿತು.
ಮಂಗಳವಾರ ಎಸಿಸಿ ದುಬೈನಲ್ಲಿ ಸಭೆ ಸೇರಿತ್ತು. ಈ ವೇಳೆ ಬಿಸಿಸಿಐ ಪರ ರಾಜೀವ್ ಶುಕ್ಲಾ ಮತ್ತು ಆಶಿಶ್ ಶೆಲಾರ್ ಹಾಜರಿದ್ದರು. ಈ ವೇಳೆ ಇವರು ಮೊಹ್ಸಿನ್ ನಖ್ವಿ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದರು. ಭಾರತ ತನ್ನ ಕ್ಷಮತೆಯಿಂದ ಏಷ್ಯಾ ಕಪ್ ಗೆದ್ದಿದೆ. ಮತ್ತು ಈ ಪ್ರಶಸ್ತಿಗೆ ಅರ್ಹವಾಗಿದೆ. ಆದಷ್ಟು ಬೇಗ ಭಾರತಕ್ಕೆ ಟ್ರೋಫಿ ಹಸ್ತಾಂತರಿಸಬೇಕು ಎಂದು ಈ ವೇಳೆ ತಿಳಿಸಿದರು. ಇದೇ ವೇಳೆ ಈ ವಿಷಯ ಇಲ್ಲಿಗೆ ಬಗೆ ಹರಿಯದೇ ಇದ್ದರೆ ಐಸಿಸಿಯಲ್ಲಿ ಪಿಸಿಬಿ ವಿರುದ್ಧ ದೂರು ನೀಡುವುದಾಗಿಯೂ ಸ್ಪಷ್ಟ ಪಡಿಸಿದರು. ಇನ್ನು ಎಸಿಸಿ ಟ್ರೋಫಿಯನ್ನು ಯುಎಇಗೆ ನೀಡಿದ್ದು, ಇನ್ನು ಕೆಲವೇ ಸಮಯದಲ್ಲಿ ಟ್ರೋಫಿ ಭಾರತಕ್ಕೆ ಹಸ್ತಾಂತರವಾಗಲಿದೆ ಎಂದು ತಿಳಿದು ಬಂದಿದೆ.