Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿಗಳ ಉಪಸ್ಥಿತಿಯಲ್ಲಿ ಐಪಿಎಲ್ ನಡೆಸುವ ವಿಶ್ವಾಸದಲ್ಲಿದೆ ಯುಎಇ

United Arab Emirates board hopeful of fan presence in IPL matches

ಬೆಂಗಳೂರು: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ ಬೋರ್ಡ್, ಐಪಿಎಲ್ ವೇಳೆ ಸ್ವಲ್ಪವಾದರೂ ಪ್ರೇಕ್ಷಕರಿಗೆ ಅವಕಾಶ ನೀಡುವ ಭರವಸೆಯಲ್ಲಿದೆ ಎಂದು ಪ್ರಮುಖ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಜಗತ್ತಿನ ಅದ್ದೂರಿ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಅನ್ನು ಆಯೋಜಿಸಲು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಅಂತಿಮ ಸಿದ್ಧತೆಗಳನ್ನು ನಡೆಸುತ್ತಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇರುವುದರಿಂದ ಭಾರತದಲ್ಲಿ ನಡೆಯಲಿದ್ದ 13ನೇ ಆವೃತ್ತಿಯ ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು.

ಆಕರ್ಷಕ ಟೂರ್ನಿ ಐಪಿಎಲ್ ವೇಳೆ ಸಾಮಾನ್ಯ ಪ್ರೇಕ್ಷಕರಿದ್ದಂತೆ ವಾತಾವರಣ ನಿರ್ಮಿಸೋದು ಸಾಧ್ಯವಿಲ್ಲ. ಆದರೆ ಸಂಪೂರ್ಣ ಕದ ಮುಚ್ಚಿದ ಮೈದಾನದಲ್ಲಿ ಐಪಿಎಲ್ ನಡೆಸದಿರಲು ಇಸಿಬಿ ಯೋಚಿಸುತ್ತಿದೆ. ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಒಂದಿಷ್ಟು ವೀಕ್ಷಕರಿಗಾದರೂ ಪಂದ್ಯ ವೀಕ್ಷಿಸಲು ಅವಕಾಶ ನೀಡಲು ಇಸಿಬಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

'ಐಪಿಎಲ್‌ ಸಲುವಾಗಿ ಕೊರೊನಾ ಮುನ್ನೆಚ್ಚರಿಕೆಯಾಗಿ ಏನೆಲ್ಲಾ ಅನುಮತಿಗಳು ಬೇಕು ಎಂದು ಎಮಿರೇಟ್ಸ್‌ ಕ್ರಿಕೆಟ್ ಬೋರ್ಡ್ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ಪಂದ್ಯದ ವೇಳೆ ವೀಕ್ಷಕರ ಉಪಸ್ಥಿತಿಯೂ ಸೇರಿದೆ,' ಎಂದು ಇಸಿಬಿ ಮುಖ್ಯ ಕಾರ್ಯದರ್ಶಿ ಮುಬಾಶ್‌ಶಿರ್ ಉಸ್ಮಾನಿ ಇ-ಮೇಲ್ ಮೂಲಕ ಹೇಳಿದ್ದಾರೆ.

Story first published: Friday, August 21, 2020, 9:55 [IST]
Other articles published on Aug 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+