For Quick Alerts
ALLOW NOTIFICATIONS  
For Daily Alerts
 

ಅನಧಿಕೃತ ಟೆಸ್ಟ್‌: ನದೀಮ್‌ಗೆ 10 ವಿಕೆಟ್‌, ಭಾರತ 'ಎ' ತಂಡಕ್ಕೆ ಜಯ

shahbaz nadeem 2019

ನಾರ್ತ್‌ ಸೌಂಡ್‌ (ಆಂಟಿಗುವಾ): ನಿರೀಕ್ಷೆಯಂತೆ ಭರ್ಜರಿ ಆಟವಾಡಿದ ಭಾರತ 'ಎ' ತಂಡ ಇಲ್ಲಿ ನಡೆದ ಆತಿಥೇಯ ವೆಸ್ಟ್‌ ಇಂಡೀಸ್‌ 'ಎ' ವಿರುದ್ಧದ ಅನಧಿಕೃತ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

97 ರನ್‌ಗಳ ಗುರಿ ಪಡೆದಿದ್ದ ಭಾರತ 'ಎ' ತಂಡಕ್ಕೆ ಪಂದ್ಯದ ಅಂತಿಮ ದಿನವಾದ ಶನಿವಾರ ಜಯ ದಾಖಲಿಸಲು 68 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ 3 ವಿಕೆಟ್‌ ಕೈಚೆಲ್ಲಿದರೂ ಅಂತಿಮವಾಗಿ 30 ಓವರ್‌ಗಲ್ಲಿ 4 ವಿಕೆಟ್‌ ನಷ್ಟಕ್ಕೆ ಗುರಿ ಮುಟ್ಟಿ ಸಂಭ್ರಮಿಸಿತು. ಶುಕ್ರವಾರದ ಆಟದ ಅಂತ್ಯಕ್ಕೆ ಭಾರತ 1 ವಿಕೆಟ್‌ಗೆ 29 ರನ್‌ ಗಳಿಸಿತ್ತು.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 62ಕ್ಕೆ 5 ವಿಕೆಟ್‌ ಪಡೆದಿದ್ದ ಅನುಭವಿ ಆಫ್‌ಸ್ಪಿನ್ನರ್‌ ಶಹಬಾಝ್‌ ನದೀಮ್‌, ಎರಡನೇ ಇನಿಂಗ್ಸ್‌ನಲ್ಲೂ 47ಕ್ಕೆ 5 ವಿಕೆಟ್‌ ಪಡೆಯುವ ಮೂಲಕ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡವನ್ನು 180 ರನ್‌ಗಳಿಗೆ ಆಲ್‌ಔಟ್‌ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನದೀಮ್‌ ಪ್ರಥಮ ದರ್ಜೆ ಪಂದ್ಯವೊಂದರಲ್ಲಿ 10 ವಿಕೆಟ್‌ ಪಡೆದ ಸಾಧನೆ ಮಾಡಿರುವುದು ಇದು 5ನೇ ಬಾರಿ ಆಗಿದೆ. ಈ ಮೂಲಕ ಪ್ರಥಮದರ್ಜೆಯಲ್ಲಿ ಆಡಿದ 107 ಪಂದ್ಯಗಳಿಂದ 411 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ 228 ರನ್‌ಗಳಿಗೆ ಉತ್ತರವಾಗಿ 312 ರನ್‌ಗಳನ್ನು ಗಳಿಸಿದ್ದ ಭಾರತ 'ಎ' ತಂಡಕ್ಕೆ ನಾಲ್ಕನೇ ಇನಿಂಗ್ಸ್‌ನಲ್ಲಿ 97 ರನ್‌ಗಳ ಸುಲಭ ಗುರಿ ಲಭ್ಯವಾಯಿತು.

ಭಾರತ ತಂಡ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, ಆಗಸ್ಟ್‌ 3ರಂದು ಟಿ20 ಸರಣಿ ಆರಂಭವಾಗಲಿದೆ. ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿವೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ನಡೆಯಲಿದೆ. ನಂತರ 2 ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ನೂತನ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನ ಭಾಗವಾಗಿ ಈ ಸರಣಿ ಆಡಲಾಗುತ್ತಿದೆ. ಮೂರೂ ಮಾದರಿಯ ಸರಣಿಗಳಲ್ಲಿ ವಿರಾಟ್‌ ಕೊಹ್ಲಿ ಟೀಮ್‌ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಸಂಕ್ಷಿಪ್ತ ಸ್ಕೋರ್
ವೆಸ್ಟ್‌ ಇಂಡೀಸ್‌ 'ಎ': ಮೊದಲ ಇನಿಂಗ್ಸ್‌ 228/10 ಮತ್ತು ಎರಡನೇ ಇನಿಂಗ್ಸ್‌ 180/10 (ಶಮ್ರಾ ಬ್ರೂಕ್ಸ್‌ 53: 47ಕ್ಕೆ 5)
ಭಾರತ 'ಎ': ಮೊದಲ ಇನಿಂಗ್ಸ್‌ 312/10 ಮತ್ತು ಎರಡನೇ ಇನಿಂಗ್ಸ್‌ 30 ಓವರ್‌ಗಳಲ್ಲಿ 97/4 (ಶ್ರೀಕರ್‌ ಭರತ್‌ 28, ಅಭಿಮನ್ಯು ಈಶ್ವರನ್‌ 27; ರಹ್ಕೀಮ್‌ ಕಾರ್ನ್‌ವಾಲ್‌ 18ಕ್ಕೆ 2).

Story first published: Sunday, July 28, 2019, 17:25 [IST]
Other articles published on Jul 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+