ಟೀಂ ಇಂಡಿಯಾ ತೆರಳಿರುವ ಆಸ್ಟ್ರೇಲಿಯಾಗೆ ಬಂದಿಳಿದ ಊರ್ವಶಿ: ಪಂತ್ ಅಭಿಮಾನಿಗಳಿಂದ ಫುಲ್ ಟ್ರೋಲ್!

ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಕಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿ ಅಭ್ಯಾಸ ಆರಂಭಿಸಿದ್ದು, ಊರ್ವಶಿ ರೌಟೇಲಾ ಕೂಡ ಆಸ್ಟ್ರೇಲಿಯಕ್ಕೆ ತೆರಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಆಕೆ ಆಸ್ಟ್ರೇಲಿಯಕ್ಕೆ ಹೋಗುತ್ತಿರುವ ವಿಷಯ ತಿಳಿದಿಲ್ಲ, ಆದರೆ ರೌಟೇಲಾ ಅವರು ಹಂಚಿಕೊಂಡ ಪೋಸ್ಟ್ ಪಂತ್‌ಗಾಗಿಯೇ ಇರಬಹುದು ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. 'ನಾನು ನನ್ನ ಪ್ರೀತಿಯನ್ನು ಹಿಂಬಾಲಿಸುತ್ತಿದ್ದೇನೆ.. ನಾನು ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದೇನೆ' ಎಂಬ ಶೀರ್ಷಿಕೆ ನೀಡಿ ವಿಮಾನದಿಂದ ತೆಗೆದ ಫೋಟೋವನ್ನು ಹಂಚಿಕೊಂಡಿದ್ದಾರೆ. ಪಂತ್‌ಗಾಗಿ ಊರ್ವಶಿ ರೌಟೇಲಾ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ ಎಂದು ನೆಟಿಜನ್‌ಗಳು ಕಮೆಂಟ್ ಮಾಡುತ್ತಿದ್ದಾರೆ.

ಹೋಟೆಲ್‌ನಲ್ಲಿ ತನಗಾಗಿ ರಿಷಭ್ ಗಂಟೆ ಗಟ್ಟಲೇ ಕಾದಿದ್ದರು ಎಂದಿದ್ದ ಊರ್ವಶಿ
ಬಾಲಿವುಡ್‌ನ ಉದಯೋನ್ಮುಖ ನಟಿ ಊರ್ವಶಿ ರೌಟೇಲಾ ಅವರು ಇತ್ತೀಚೆಗೆ ನೀಡಿರುವ ಟಿವಿ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡಿತು. ಇದರಲ್ಲಿ ಹೆಸರನ್ನು ಪೂರ್ಣವಾಗಿ ಘೋಷಿಸದೇ RP ಹೆಸರಿನ ವ್ಯಕ್ತಿ ನನಗಾಗಿ ಹೋಟೆಲ್‌ನಲ್ಲಿ ಸಾಕಷ್ಟು ಸಮಯ ಕಾದಿದ್ದರು ಎಂದು ಕಾಮೆಂಟ್ ಮಾಡಿದ್ದರು.
ಬಾಲಿವುಡ್ ಹಂಗಾಮಾ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಊರ್ವಶಿ ರೌಟೇಲಾ ಅವರು ಒಮ್ಮೆ ದೆಹಲಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಾಗ 10 ಗಂಟೆಗಳಿಗೂ ಹೆಚ್ಚು ಕಾಲ ಶೂಟಿಂಗ್ ನಡೆದಿತ್ತು. ಆದರೆ 'ಆರ್‌ಪಿ' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಸೆಲೆಬ್ರಿಟಿಗಳು ಗಂಟೆಗಟ್ಟಲೆ ಹೋಟೆಲ್‌ನಲ್ಲಿ ನನಗಾಗಿ ಕಾಯುತ್ತಿದ್ದರು. ನನ್ನೊಂದಿಗೆ ಮಾತನಾಡಲು ಹರಸಾಹಸ ಪಟ್ಟಿದ್ದಾರೆ ಎಂದರು.
ಟಿ20 ವಿಶ್ವಕಪ್ ಗೆಲ್ಲಬಲ್ಲ 2 ತಂಡವನ್ನ ಹೆಸರಿಸಿದ ಹರ್ಷ ಬೋಗ್ಲೆ: ಟೀಂ ಇಂಡಿಯಾ ಹೆಸರಿಲ್ಲ!

ರಿಷಭ್ ಪಂತ್ ತಿರುಗೇಟು ನೀಡಿದ್ದರು
ಭಾರತದ ಖ್ಯಾತ ಕ್ರಿಕೆಟಿಗ ಬಹಳ ಸಮಯ ಹೋಟೆಲ್‌ನಲ್ಲಿ ಕಾದು ನಟಿಯೊಂದಿಗೆ ಮಾತನಾಡಿದ್ದಾರಾ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಲೇವಡಿ ಮಾಡುವುದನ್ನ ಸಹಿಸಲಾಗದೆ ರಿಷಭ್ ಪಂತ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಊರ್ವಶಿ ಕುರಿತು ಕಿಡಿಕಾರಿದ್ದರು.
ಜನಪ್ರಿಯತೆ ಪಡೆಯಲು ಕೆಲವರು ಸಂದರ್ಶನದಲ್ಲಿ ಹೇಗೆ ಸುಳ್ಳು ಹೇಳುತ್ತಾರೆ ಎಂಬುದು ತಮಾಷೆಯಾಗಿದೆ. ಮತ್ತೊಂದೆಡೆ, ಯಾರಾದರೂ ಖ್ಯಾತಿಗಾಗಿ ಈ ರೀತಿ ಅಲೆದಾಡುವುದು ಬೇಸರದ ಸಂಗತಿ. ದೇವರು ಅವರಿಗೆ ಸರಿಯಾದ ದಾರಿ ತೋರಿಸಲಿ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ "ಮೇರಾ ಪಿಚಾ ಛೋರೋ ಬೆಹೆನ್" ಹ್ಯಾಶ್‌ಟ್ಯಾಗ್ ಮೂಲಕ ಪೋಸ್ಟ್ ಹಾಕಿದ್ರು.
ಇದಕ್ಕೆ ಉತ್ತರಿಸಿದ್ದ ಊರ್ವಶಿ ರೌಟೇಲಾ ಅವರನ್ನು 'ಚೋಟು ಭಯ್ಯಾ' ಎಂದು ಹೈಲೈಟ್ ಮಾಡಿದ್ದರು. ಜೊತೆಗೆ ಆಕೆ ಪಂತ್‌ನನ್ನು 'ಕೂಗರ್ ಹಂಟರ್' ಎಂದು ಕರೆದಿದ್ದು, ಹುಡುಗಿ ಸೈಲೆಂಟ್ ಆಗಿದ್ದಾಳೆ ಎಂದು ಲಾಭವನ್ನ ಪಡೆಯಬಾರದು' ಎಂದು ಎಚ್ಚರಿಸಿದಳು.
ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ನನ್ನ ಮೊದಲ ಆಯ್ಕೆ ಎಂಬುದರಲ್ಲಿ ಸಂದೇಹವಿಲ್ಲ : ಸಾಬಾ ಕರೀಂ
ಪಂತ್‌ಗಾಗಿ ಆಸ್ಟ್ರೇಲಿಯಾಗೆ ತೆರಳಿದ್ರಾ ಊರ್ವಶಿ
ಪಂತ್‌ಗಾಗಿಯೇ ಊರ್ವಶಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ. ದೀದಿ ಭಯ್ಯಾನನ್ನು ಬಿಡುತ್ತಿಲ್ಲ ಎಂದು ನೆಟಿಜನ್ ಪ್ರತಿಕ್ರಿಯಿಸಿದರೆ... ಪಂತ್ ಏಕಾಗ್ರತೆ ಮುರಿಯಲು ಆಕೆಯೂ ಆಸೀಸ್ ಗೆ ಹೋಗ್ತಾಳಾ..? ಎಂದು ಮತ್ತೊಬ್ಬ ನೆಟಿಜನ್ ಪ್ರಶ್ನಿಸಿದ್ದಾರೆ. ಪ್ರಚಾರಕ್ಕಾಗಿ ಊರ್ವಶಿ ಪಂತ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications