ತಾಯಂದಿರ ದಿನದಂದು ಅರ್ಧಶತಕ ಸಿಡಿಸಿ ತಂದೆಗೆ ಅರ್ಪಿಸಿದ ಉರ್ವಿಲ್ ಪಟೇಲ್; ಇಲ್ಲಿವೆ ಅವರು ನಿರ್ಮಿಸಿದ ದಾಖಲೆ
ಚೆನ್ನೈ: ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 19ನೇ ಆವೃತ್ತಿ ಐಪಿಎಲ್‌ನ 53ನೇ ಪಂದ್ಯದಲ್ಲಿ ಜಯ ಸಾಧಿಸುವಲ್ಲಿ ವೇಗಿ ಜೇಮಿ ಓವರ್‌ಟನ್ ಹಾಗೂ ಉರ್ವಿಲ್ ಪಟೇಲ್ ಮಹತ್ವದ ಕಾಣಿಕೆ ನೀಡಿದರು. 27 ವರ್ಷದ ಉರ್ವಿಲ್ ಪಟೇಲ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಮೋಘ ಬ್ಯಾಟಿಂಗ್ ನಡೆಸಿದರು. ಇವರ ಬಿರುಸಿನ ಆಟದ ನೆರವಿನಿಂದ ಸಿಎಸ್‌ಕೆ ಈ ಪಂದ್ಯದಲ್ಲಿ 5 ವಿಕೆಟ್ ಜಯ ಸಾಧಿಸಿತು.
ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡದ ಆರಂಭಿಕ ಸಂಜು ಸ್ಯಾಮ್ಸನ್ 28 ರನ್ ಬಾರಿಸಿ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದಿದ್ದು ಉರ್ವಿಲ್ ಪಟೇಲ್. ಇವರು ನಾಯಕ ರುತುರಾಜ್ ಗಾಯಕ್ವಾಡ್‌ಗೆ ಉತ್ತಮ ಸಾಥ್ ನೀಡುವ ಪ್ಲ್ಯಾನ್ ಹಾಕಿಕೊಂಡಿದ್ದರು. ಈ ಜೋಡಿ ಎರಡನೇ ವಿಕೆಟ್‌ಗೆ 81 ರನ್ ಕಾಣಿಕೆ ನೀಡಿತು. ಈ ವೇಳೆ ಹೆಚ್ಚು ರನ್‌ಗಳು ಉರ್ವಿಲ್ ಪಟೇಲ್ ಅವರ ಬ್ಯಾಟ್‌ನಿಂದ ಹರಿದು ಬಂದವು. ಇವರು 23 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್ ಸಹಾಯದಿಂದ 65 ರನ್ ಸಿಡಿಸಿ ಔಟ್ ಆದರು.

ಉರ್ವಿಲ್ ಪಟೇಲ್ ಕ್ರೀಸ್‌ಗೆ ಬಂದ ಮೇಲೆ ತಮ್ಮ ಆಕ್ರಮಣಕಾರಿ ಬ್ಯಾಟ್ ಮಾಡಿ ಗಮನ ಸೆಳೆದರು. ಇವರು ಕೇವಲ 13 ಎಸೆತಗಳಲ್ಲಿ 1 ಬೌಂಡರಿ, 7 ಸಿಕ್ಸರ್ ಸಹಿತ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ಉರ್ವಿಲ್ ಪಟೇಲ್ ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಅವರ ಸಾಧನೆಯ ಸಮಕ್ಕೆ ನಿಂತರು.
ಐಪಿಎಲ್‌ನಲ್ಲಿ ವೇಗವಾಗಿ ಅರ್ಧಶತಕದ ಬಾರಿಸಿದ ಬ್ಯಾಟರ್ಸ್
ಯಶಸ್ವಿ ಜೈಸ್ವಾಲ್ (ಆರ್‌ಆರ್), 13 ಎಸೆತ, ಕೆಕೆಆರ್ ವಿರುದ್ಧ
ಉರ್ವಿಲ್ ಪಟೇಲ್ (ಸಿಎಸ್‌ಕೆ), 13 ಎಸೆತ, ಎಲ್‌ಎಸ್‌ಜಿ ವಿರುದ್ಧ
ಕೆ ಎಲ್ ರಾಹುಲ್ (ಪಿಬಿಕೆಎಸ್), 14 ಎಸೆತ, ಡಿಸಿ ವಿರುದ್ಧ
ಪ್ಯಾಟ್ ಕಮ್ಮಿನ್ಸ್ (ಕೆಕೆಆರ್), 14 ಎಸೆತ, ಎಂಐ ವಿರುದ್ಧ
ರೊಮಾರಿಯೋ ಶೆಫರ್ಡ್ (ಆರ್‌ಸಿಬಿ), 14 ಎಸೆತ, ಸಿಎಸ್‌ಕೆ ವಿರುದ್ಧ
ಉರ್ವಿಲ್ ಪಟೇಲ್ ಅರ್ಧಶತಕ ಬಾರಿಸಿದ ಬಳಿಕ ಕೈ ಮುಗಿದು ದೇವರಿಗೆ ನಮಸ್ಕಾರ ಮಾಡಿದರು. ಬಳಿಕ ಜೇಬಿನಿಂದ ಕಾಗದ ತೆಗೆದು ಇದು ನಿಮಗಾಗಿ ಪಾಪಾ ಎಂದು ಬರೆದಿದ್ದನ್ನು ತೋರಿಸಿದರು. ಗುಜರಾತಿ ಭಾಷೆಯಲ್ಲಿ ವಿಶೇಷ ಸಂದೇಶವನ್ನು ಬರೆದಿದ್ದರು.
ಎಬಿಡಿ ದಾಖಲೆ ಅಳಿಸಿದ ಉರ್ವಿಲ್
ಉರ್ವಿಲ್ ಪಟೇಲ್ ಈಗ ಐಪಿಎಲ್‌ನಲ್ಲಿ ತಮ್ಮ ಇನ್ನಿಂಗ್ಸ್‌ನ ಮೊದಲ 8 ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಉರ್ವಿಲ್ ಮೊದಲ 10 ಎಸೆತಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಆಗಿದ್ದಾರೆ. ಈ ಮೂಲಕ ಇವರು ಎಬಿ ಡಿವಿಲಿಯರ್ಸ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಇವರ ಮೊದಲ 10 ಎಸೆತಗಳಲ್ಲಿ 41 ರನ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications