ಸಚಿನ್ -ವಾರ್ನ್ ಸರಣಿಯಲ್ಲಿ ಬರಾಕ್ ಒಬಾಮಾ ಬ್ಯಾಟಿಂಗ್!
ಬೆಂಗಳೂರು, ಅ.೦9: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅವರ ಕನಸಿನ ಕ್ರಿಕೆಟ್ ಟೂರ್ನಿ 'ಆಲ್ ಸ್ಟಾರ್ ಕ್ರಿಕೆಟ್ ಲೀಗ್' ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಬ್ಯಾಟ್ ಬೀಸಲು ಉತ್ಸುಕರಾಗಿದ್ದಾರೆ.
ಅಮೆರಿಕದಲ್ಲಿ ಕ್ರಿಕೆಟ್ ಕಿಚ್ಚು ಹಚ್ಚಲು ಆರಂಭವಾಗುವ ಈ ಟೂರ್ನಿಯಲ್ಲಿ 13ನೇ ಆಟಗಾರರಾಗಿ ಬರಾಕ್ ಒಬಾಮಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮೂರು ಪ್ರದರ್ಶನ ಪಂದ್ಯಗಳು ಸೇರಿದಂತೆ ಟ್ವೆಂಟಿ20 ಪಂದ್ಯಾವಳಿ ನವೆಂಬರ್ ತಿಂಗಳಿನಿಂದ ಆರಂಭಗೊಳ್ಳಲಿದೆ.

ಸಚಿನ್ ತೆಂಡೂಲ್ಕರ್ ಅವರ ಬ್ಲಾಸ್ಟರ್ಸ್ ಹಾಗೂ ವಾರ್ನ್ ಅವರ ವಾರಿಯರ್ಸ್ ತಂಡಗಳು ನವೆಂಬರ್ 7ರಿಂದ ಕಾದಾಡಲಿದ್ದು, ನ್ಯೂಯಾರ್ಕ್, ಹೋಸ್ಟನ್ ಹಾಗೂ ಲಾಸ್ ಏಂಜಲೀಸ್ ನಲ್ಲಿ ಪಂದ್ಯಗಳು ನಡೆಯಲಿವೆ.
ಅಧಿಕೃತ ಆಹ್ವಾನ: ಆಲ್ ಸ್ಟಾರ್ ಲೀಗ್ ಟ್ವಿಟ್ಟರ್ ಐಡಿಯಿಂದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.
ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಅವರ ಜೊತೆ ನೀವು ಬ್ಯಾಟ್ ಬೀಸಿದ್ದು ನೆನಪಿದೆ ಅಲ್ಲವೇ ಎಂದು ಹಳೆ ಚಿತ್ರವೊಂದನ್ನು ಟ್ವೀಟ್ ಮಾಡಲಾಗಿದೆ. ನಂತರ ಈ ಸಂದೇಶವನ್ನು ವಾರ್ನ್ ತಮ್ಮ 2.36 ಮಿಲಿಯನ್ ಹಿಂಬಾಲಕರಿಗೆ ತಲುಪಿಸಿದ್ದಾರೆ.

ಲಾರಾರಿಂದ ಕ್ರಿಕೆಟ್ ಪಾಠ
ರಲ್ಲಿ ವೆಸ್ಟ್ ಇಂಡೀಸ್ ನ ಎಡಗೈ ಬ್ಯಾಟ್ಸ್ ಮನ್ ಬ್ರಿಯಾನ್ ಲಾರಾದಿಂದ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರು ಕ್ರಿಕೆಟ್ ಪಾಠ ಹೇಳಿಸಿಕೊಂಡಿದ್ದರು. ಟ್ರಿನಿಡಾಡ್ ಹಾಗೂ ಟೊಬಾಗೋ ಗೆ ಭೇಟಿ ನೀಡಿದ ಸ್ಮರಣಾರ್ಥ ಸ್ವಹಸ್ತಾಕ್ಷರವಿರುವ ಕ್ರಿಕೆಟ್ ಬ್ಯಾಟ್ ಗಿಫ್ಟ್ ನೀಡಿದ್ದರು.
ಲಾರಾರನ್ನು 'ಬ್ಯಾಸ್ಕೆಟ್ ಬಾಲ್ ದಿಗ್ಗಜ ಮೈಕಲ್ ಜೋಡಾರ್ನ್ ಗೆ ಹೋಲಿಸಿದ ಒಬಾಮಾ ಅವರನ್ನು ಇದೊಂದು ಅವಿಸ್ಮರಣೀಯ ಭೇಟಿ ಎಂದಿದ್ದರು. ಇಬ್ಬರು ಬ್ಯಾಟ್ ಹಿಡಿದು ಪೋಸ್ ನೀಡಿದ್ದರು.ಶೇನ್ ವಾರ್ನ್ ಅವರಿಂದ ಟ್ವೀಟ್
ನಾನು ಹಾಗೂ ಸಚಿನ್ ಈ ಟೂರ್ನಿ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದೇವೆ ಎಂದು ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ. ನಿಮಗೆ ಪ್ರಾಯೋಜಕರು ಬೇಕಾದರೆ ಕೇಳಿ ಎಂದು ಸಾರ್ವಜನಿಕರು ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿ ಕ್ರಿಕೆಟ್ ಕ್ರೀಡೆ
ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅಲ್ಲದೆ ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್, ವಾಸಿಂಅಕ್ರಂ ಸೇರಿದಂತೆ ಅನೇಕ ಮಾಜಿ ಕ್ರಿಕೆಟರ್ಸ್ ಟ್ವೆಂಟಿ20 ಕದನದಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯೂಯಾರ್ಕ್ ನಲ್ಲಿ ನವೆಂಬರ್ 7ರಿಂದ ಟೂರ್ನಿ ಆರಂಭಗೊಳ್ಳಲಿದೆ.
ನ್ಯೂಯಾರ್ಕ್ ನಲ್ಲಿ ನವೆಂಬರ್ 7ರಿಂದ
ನ್ಯೂಯಾರ್ಕ್ ನಲ್ಲಿ ನವೆಂಬರ್ 7ರಿಂದ ಟೂರ್ನಿ ಆರಂಭಗೊಳ್ಳಲಿದೆ. ಈಗಾಗಲೇ ಟಿಕೆಟ್ ಗೆ ಭಾರಿ ಬೇಡಿಕೆ ಬಂದಿದೆ ಎಂದು ಶೇನ್ ವಾರ್ನ್ ಟ್ವೀಟ್
ಮೈಕಲ್ ಜೋಡಾರ್ನ್ ಆಫ್ ಕ್ರಿಕೆಟ್
ಲಾರಾರನ್ನು 'ಬ್ಯಾಸ್ಕೆಟ್ ಬಾಲ್ ದಿಗ್ಗಜ ಮೈಕಲ್ ಜೋಡಾರ್ನ್ ಗೆ ಹೋಲಿಸಿದ ಒಬಾಮಾ ಅವರನ್ನು ಇದೊಂದು ಅವಿಸ್ಮರಣೀಯ ಭೇಟಿ ಎಂದಿದ್ದರು. ಇಬ್ಬರು ಬ್ಯಾಟ್ ಹಿಡಿದು ಪೋಸ್ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications