Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆಂಡು ವಿರೂಪಕ್ಕೆ ಸನ್‌ ಸ್ಕ್ರೀನ್‌, ಮಿಂಟ್ ಬಳಸಿದ್ದೆ: ಮಾಂಟಿ ಶಾಕಿಂಗ್ ಹೇಳಿಕೆ!

Used Sunscreen, Zip, Mints: Ex-England Bowler Admits To Ball-Tampering

ಲಂಡನ್, ಮೇ 25: ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್, ತಾನು ಚೆಂಡು ವಿಪೂಪಗೊಳಿಸಲು ಸನ್‌ ಸ್ಕ್ರೀನ್‌, ಝಿಪ್, ಮಿಂಟ್‌ಗಳನ್ನು ಬಳಸುತ್ತಿದ್ದೆ ಎಂದು ಆಘಾತಕಾರಿ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ. ತನ್ನ ಕೃತಿ 'ದ ಫುಲ್ ಮಾಂಟಿ'ಯಲ್ಲಿ ಪನೇಸರ್ ಇದನ್ನು ಹೇಳಿಕೊಂಡಿದ್ದಾರೆ.

ಪನೇಸರ್ 2006ರಿಂದ 2013ರ ವರೆಗೆ ಒಟ್ಟು 50 (85 ಇನ್ನಿಂಗ್ಸ್‌) ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. ಕೃತಿಯಲ್ಲಿ ಅವರೇ ಹೇಳಿಕೊಂಡಿರುವಂತೆ ಜೇಮ್ಸ್ ಆ್ಯಂಡರ್ಸನ್ ಅವರಂತೆ ಇವರೂ ಚೆಂಡು ವಿರೂಪದ ಕಳ್ಳಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರಂತೆ. ಇದನ್ನು ತನ್ನ ಕೃತಿಯ ಭಾಗವೊಂದರಲ್ಲಿ ಉಲ್ಲೇಖಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

'ನಾವು ಮುರಿಯುವ ನಿಯಮಗಳು, ಅವುಗಳನ್ನು ನೀವು ಹೇಗೆ ಅರ್ಥೈಸುವಿರಿ ಎಂಬುದನ್ನು ಅವಲಂಭಿಸಿದೆ. ಎಂಜಲಿಗೆ ಮಿಂಟ್ ಮತ್ತು ಸನ್ ಸ್ಕ್ರೀನ್ ಬಳಸಿದಾಗ ಅದು ಬಾಲ್ ರಿವರ್ಸ್‌ನಲ್ಲಿ ಪರಿಣಾಮ ಬೀರುವುದನ್ನು ನಾವು ಗಮನಿಸಿದ್ದೆವು' ಎಂದು 37ರ ಹರೆಯದ ಪನೇಸಾರ್ ಕೃತಿಯಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

'ಕೆಲವೊಮ್ಮೆ ನಾನು ಪ್ಯಾಂಟ್‌(ಲೋವರ್‌)ನ ಕಿಸೆಯಲ್ಲಿ ಝಿಪ್‌ ಅನ್ನು ಕೂಡ ಇಟ್ಟುಕೊಂಡಿರುತ್ತಿದ್ದೆ. ಅದನ್ನು ಚೆಂಡಿನ ಹೊರಮೈ ದೊರಗಾಗಿಸಲು ಬಳಸಿಕೊಳ್ಳುತ್ತಿದ್ದೆ. ಯಾಕೆಂದರೆ ಅದರಿಂದ ರಿವರ್ಸ್ ಸ್ವಿಂಗ್‌ಗೆ ಬಹಳ ಸಹಾಯವಾಗುತ್ತಿತ್ತು' ಎಂದು ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ಹೇಳಿದ್ದಾರೆ. ಪನೇಸರ್ ಒಟ್ಟು 85 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 2.78ರ ಎಕಾನಮಿಯಲ್ಲಿ 167 ವಿಕೆಟ್ ಉರುಳಿಸಿದ್ದರು.

Story first published: Saturday, May 25, 2019, 17:20 [IST]
Other articles published on May 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+