ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಬುಧವಾರ ಬೆಳಗ್ಗೆ ಪಾಕ್‌ನ ಸ್ಟಾರ್ ಆಟಗಾರ ಬಾಬರ್ ಅಜಮ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರು. ಈ ಬೆನ್ನಲ್ಲೆ ಪಾಕ್ ತಂಡದ ಭರವಸೆಯ ಆಟಗಾರನೊಬ್ಬ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ಇಂಗ್ಲೆಂಡ್ ತಂಡ ಪಾಕ್ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಟೆಸ್ಟ್ ಸರಣಿ ನಡೆಯಲಿದೆ. ಆದರೆ ಇದಕ್ಕೂ ಮೊದಲೇ ಪಾಕ್ ಕ್ರಿಕೆಟ್ ತಂಡದ ಟೆನ್ಷನ್ ಹೆಚ್ಚಾಗಿದೆ. ಪಾಕ್ ಪರ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಉಸ್ಮಾನ್ ಖಾದಿರ್ ಇದ್ದಕ್ಕಿದ್ದಂತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಉಸ್ಮಾನ್ ಖಾದಿರ್ ಅವರ ಈ ದಿಢೀರ್ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಉಸ್ಮಾನ್ ಖಾದಿರ್ ಅವರು ಪಾಕಿಸ್ತಾನದ ಪರ ಸೀಮಿತ ಓವರ್‌ಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರು ಪಾಕಿಸ್ತಾನದ ಮಾಜಿ ಸ್ಪಿನ್ ಬೌಲರ್ ಅಬ್ದುಲ್ ಖಾದಿರ್ ಅವರ ಪುತ್ರ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ನಿವೃತ್ತಿಯನ್ನು ಟ್ವೀಟ್ ಮಾಡಿರುವ ಉಸ್ಮಾನ್ ಖಾದೀರ್, ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದಾಗಿ ಬರೆದುಕೊಂಡಿದ್ದಾರೆ. ತಮ್ಮ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕ ಖುಷಿ ತಮ್ಮಲ್ಲಿದೆ ಎಂದು ಇದೇ ವೇಳೆ ಹೇಳಿಕೊಂಡಿದ್ದಾರೆ. ನನ್ನ ಏಳಿಗೆಗೆ ಕೈ ಜೋಡಿಸಿರುವ ಕೋಚ್‌ಗಳು ಹಾಗೂ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಕೃತಜ್ಷತೆ ತಿಳಿಸಿದ್ದಾರೆ. ತಮ್ಮ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೂ ಉಸ್ಮಾನ್ ಸಂದೇಶ ನೀಡಿದ್ದಾರೆ. ನನ್ನೊಂದಿಗೆ ಪಾಕ್ ಪರ ಆಡಿದ ಸವಿ ನೆನಪು ಶಾಶ್ವತವಾಗಿ ಇರಲಿದೆ ಎಂದು ತಿಳಿಸಿದ್ದಾರೆ.
ಉಸ್ಮಾನ್ ಖಾದಿರ್ ಕಳೆದ ಒಂದು ವರ್ಷದಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರಲಿಲ್ಲ. 2021ರಲ್ಲಿ ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕ್ ಪರ ಪದಾರ್ಪಣೆ ಮಾಡಿದರು. ಇದಾದ ಬಳಿಕ ಅವರಿಗೆ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚಿನ ಅವಕಾಶಗಳು ಲಭಿಸಲಿಲ್ಲ. ಇವರು ಪಾಕ್ ಪರ 25 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 31 ವಿಕೆಟ್ ಪಡೆದಿದ್ದಾರೆ. ಇವರು ತಮ್ಮ ಕೊನೆಯ ಟಿ20 ಪಂದ್ಯವನ್ನು ಬಾಂಗ್ಲಾ ವಿರುದ್ಧ ಆಡಿದ್ದರು. ಇವರು ಅವಕಾಶಕ್ಕಾಗಿ ಕಾದು ಬೇಸತ್ತು ನಿವೃತ್ತಿ ಪಡೆದಿದ್ದಾರೆ.