Vaibhav Suryavanshi: 14 ವರ್ಷದ ವೈಭವ್ ಸೂರ್ಯವಂಶಿ ಒಟ್ಟು ಆಸ್ತಿ ಎಷ್ಟು?
ಸದ್ಯ ಕ್ರಿಕೆಟ್ ವಲಯದಲ್ಲಿ ಬಹುವಾಗಿ ಕೇಳಿ ಬರುತ್ತಿರುವ ಹೆಸರು ವೈಭವ್ ಸೂರ್ಯವಂಶಿ. ರಾಜಸ್ಥಾನ ತಂಡ ಇವರನ್ನು ಐಪಿಎಲ್ ಹರಾಜಿನಲ್ಲಿ ಖರೀದಿಸಿದಾಗಿನಿಂದಲೂ ಈ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಆದರೆ ಇತ್ತೀಚಿಗೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುತ್ತಿದ್ದಂತೆ ವೈಭವ್ ಮುನ್ನೆಲೆಗೆ ಬಂದರು. 14 ವರ್ಷದ ಪೋರನ ಬ್ಯಾಟಿಂಗ್ ಕಂಡು ಮಾಜಿ ಆಟಗಾರರು ಸಹ ಬೆನ್ನು ತಟ್ಟಿದರು. ರಾತ್ರೋ ರಾತ್ರಿ ಸ್ಟಾರ್ ಗಿರಿಯನ್ನು ಪಡೆದಿರುವ ವೈಭವ್ ಸೂರ್ಯವಂಶಿ ಬಗ್ಗೆ ಹುಡುಕಾಟಗಳು ಹೆಚ್ಚಾಗಿವೆ.
ಸೋಮವಾರ ಜೈಪುರ್‌ದ ಸವಾಯಿ ಮಾನಸಿಂಗ್ ಸ್ಟೇಡಿಯಂನಲ್ಲಿ ಗುಜರಾತ್ ನೀಡಿದ್ದ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ರಾಜಸ್ಥಾನ ಸುಲಭವಾಗಿ ಈ ಗುರಿಯನ್ನು ಮೆಟ್ಟಿನಿಂತಿತು. ಈ ವೇಳೆ ಎಲ್ಲರ ಕಣ್ಣುಗಳು ಫ್ಯೂಚರ್ ಸ್ಟಾರ್ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಗುಜರಾತ್ ಥಂಡಾ ಹೊಡಿಯಿತು. ಈ ವೇಳೆ ಇವರು ಕೇವಲ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿ ದಾಖಲೆ ನಿರ್ಮಿಸಿದರು. ಈ ಮೂಲಕ ವೇಗವಾಗಿ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಗ ಅಭಿಮಾನಿಗಳು ಇವರ ನಿವ್ವಳ ಮೌಲ್ಯ ಮತ್ತು ಅವರ ಕುಟುಂಬದ ಬಗ್ಗೆ ಮಾಹಿತಿಯನ್ನು ಹೆಚ್ಚಾಗಿ ಸರ್ಚ್ ಮಾಡುತ್ತಿದ್ದಾರೆ.

ಭಾರತದ ಬೀಹಾರದ ಸಮಷ್ಟಿಪುರ ಜಿಲ್ಲೆಯ ಮೋತಿಪುರ ಗ್ರಾಮದಲ್ಲಿ ಮಾರ್ಚ್ 27, 2011 ರಂದು ವೈಭವ್ ಜನಿಸಿದರು. ಇವರು ಕ್ರಿಕೆಟ್ ಮೇಲೆ ಪ್ರೀತಿ ಅಪಾರವಾಗಿತ್ತು. ಇವರು ತಮ್ಮ 9ನೇ ವಯಸ್ಸಿಗೆ ಕ್ರಿಕೆಟ್ ಆಡಲು ಆರಂಭಿಸಿದರು. ಆಗಲೇ ಅವರು ಆಕಾಡಮಿಯನ್ನು ಸೇರಿದರು. ಇದೇ ವೇಳೆ ಮಗನ ಕ್ರಿಕೆಟ್ ಪ್ರೀತಿ ಕಂಡು ಸಂಜೀವ್ ಸೂರ್ಯವಂಶಿ ಅವರಿಗೆ ಕ್ರಿಕೆಟ್ ತರಬೇತಿ ನೀಡಿದರು. ರೈತಾಪಿ ಕುಟುಂಬದ ಹಿನ್ನೆಲೆಯನ್ನು ಹೊಂದಿರುವ ವೈಭವ್ ಫ್ಯಾಮಿಲಿ ಇವರ ಕ್ರಿಕೆಟ್ ಬದುಕಿಗೆ ಟೊಂಕ ಕಟ್ಟಿ ನಿಂತಿದೆ.
ವೈಭವ್ ಆಸ್ತಿ ಎಷ್ಟು?
ಮಧ್ಯಮ ಬಡ ಕುಟುಂಬದ ಹಿನ್ನೆಲೆಯನ್ನು ಹೊಂದಿರುವ ವೈಭವ್ ಸೂರ್ಯವಂಶಿ, ಐಪಿಎಲ್ ಮೆಗಾ ಹರಾಜು ಅಂಗಳಕ್ಕೆ ಪ್ರವೇಶಿಸುತ್ತಿದ್ದಂತೆ ಲಕ್ಷ ಗಟ್ಟಲೇ ಹಣವನ್ನು ನೋಡಿದರು. ಇವರನ್ನು ರಾಜಸ್ಥಾನ ತಂಡ ಮೆಗಾ ಹರಾಜಿನಲ್ಲಿ ಖರೀದಿಸಿದಾಗ ಇವರಿಗೆ 13 ವರ್ಷ. ಇವರಿಗೆ ಆರ್‌ಆರ್ 1.1 ಕೋಟಿ ನೀಡಿ ತಂಡಕ್ಕೆ ಖರೀದಿಸಿದ್ರು. ಇವರು ಇತ್ತೀಚಿಗಷ್ಟೇ ತಮ್ಮ ಹುಟು ಹಬ್ಬವನ್ನು ರಾಜಸ್ಥಾ ತಂಡದೊಂದಿಗೆ ಆಚರಿಸಿಕೊಂಡರು. ಗುಜರಾತ್ ವಿರುದ್ಧದ ಇವರ ಸಿಡಿಲಬ್ಬರದ ಬ್ಯಾಟಿಂಗ್ ಬಳಿಕ ಇವರನ್ನು ಅತಿ ಹೆಚ್ಚಿನ ಬ್ರ್ಯಾಂಡ್‌ಗಳು ಸಂಪರ್ಕಿಸಿವೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಆದರೆ ಇವರ ಹೆಸರು ಈಗ ಹಲವು ಬ್ರ್ಯಾಂಡ್‌ಗಳ ಜೊತೆ ಕೇಳಿ ಬರುತ್ತಿದೆ. ಈ ಮೂಲಕವೇ ಇವರು ಕೋಟಿ ಗಟ್ಟಲೆ ಹಣವನ್ನು ಗಳಿಸಲಿದ್ದಾರೆ.
ಈಗಾಗಲೇ ವೈಭವ್ ಸುರ್ಯವಂಶಿ ಅವರು ಐಪಿಎಲ್‌ನಲ್ಲಿ ಸಂಭವಾನೆ ಪಡೆಯುತ್ತಿದ್ದಾರೆ. ಇನ್ನು ಇವರು ಈಗಾಗಲೇ ಬಿಹಾರ ಪರ ಅಂಡರ್ 19, ರಣಜಿ ಟ್ರೋಫಿ ಹಾಗೂ ವಿವಿಧ ವಯೋಮಿತಿಯ ಕ್ರಿಕೆಟ್ ಟೂರ್ನಿಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಇವರ ಒಟ್ಟು ಆಸ್ತಿ ಸುಮಾರು 2 ಕೋಟಿ ರೂ.ಗಳೆಂದು ಹೇಳಲಾಗುತ್ತದೆ. ಬಿಹಾರದ ಮುಖ್ಯಮಂತ್ರಿ ರಾಜ್ಯ ಸರ್ಕಾರದ ಪರವಾಗಿ 10 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications