ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟರ್. ಇವರ ಆಟಕ್ಕೆ ಬ್ರೇಕ್ ಹಾಕುವುದೇ ಬೌಲರ್‌ಗಳಿಗೆ ತಲೆ ನೋವಾಗಿದೆ. ಸದ್ಯ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಆಡುತ್ತಿದ್ದಾರೆ. ಇವರು ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಭರವಸೆಯ ಬ್ಯಾಟರ್ ವೈಭವ್ ಸೂರ್ಯವಂಶಿ ಪಾಕ್ ಆಟಗಾರನ ಮೇಲೆ ಆಕ್ರೋಶಗೊಂಡರು. ಇವರನ್ನು ತಡೆಯಲು ಟೀಮ್ ಇಂಡಿಯಾದ ಇತರೆ ಆಟಗಾರರು ಮಧ್ಯಪ್ರವೇಶಿಸಬೇಕಾಯಿತು.
ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಹದಗೆಡುತ್ತಿದೆ. ಹೀಗಾಗಿಯೇ ಸುಮಾರು ವರ್ಷಗಳಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ. ಈಗ ಎರಡೂ ತಂಡಗಳು ಐಸಿಸಿ ಹಾಗೂ ಏಷ್ಯನ್ ಕೌನ್ಸಿಲ್ ನಡೆಸುವ ಟೂರ್ನಿಗಳಲ್ಲಿ ಮಾತ್ರ ಆಡುತ್ತಿವೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ, ಭಾರತ ವಿರುದ್ಧ ಪಂದ್ಯವನ್ನು ಆಡುವುದಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಹೊರಬರಬೇಕಿದೆ. ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಂಡರ್ 19 ವಿಶ್ವಕಪ್‌ನಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಗಮನ ಸೆಳೆಯಿತು.

ಬುಲವಾಯೊದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೂಪರ್ 6 ಹಂತದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಪಾಕ್ ಸೆಮಿಫೈನಲ್ ಹಂತ ತಲುಪಲು ದೊಡ್ಡ ಅಂತರದ ಗೆಲುವು ಅವಶ್ಯಕತೆ ಇತ್ತು. ಮತ್ತೊಂದೆಡೆ ಭಾರತಕ್ಕೆ ಕಡಿಮೆ ಅಂತರದ ಸೋಲು ಅಥವಾ ಗೆಲುವು ಒಂದೇ ಗುರಿಯಾಗಿತ್ತು. ಈ ಪಂದ್ಯದಲ್ಲಿ ಭಾರತ 58 ರನ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಬ್ಯಾಟರ್ ವೈಭವ್ ಸೂರ್ಯವಂಶಿ ಪಾಕ್ ಆಟಗಾರನನ್ನು ಕೆಣಕಲು ಮುಂದಾದರು.
ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ 37ನೇ ಓವರ್‌ನ್ನು ಉಪನಾಯಕ ವಿಹಾನ್ ಮಲ್ಹೋತ್ರಾ ಮಾಡಿದರು. ಈ ಓವರ್‌ನ ಕೊನೆಯ ಎಸೆತದಲ್ಲಿ ಮಲ್ಹೋತ್ರಾ ಪಾಕ್ ಆಟಗಾರ ಅಲಿ ಹಸನ್ ಬಲೋಚ್ ಅವರಿಗೆ ಖೆಡ್ಡಾ ತೋಡಿದರು. ಇದೇ ವೇಳೆ ವೈಭವ್ ಸೂರ್ಯವಂಶಿ ಆಕ್ರೋಶದಿಂದ ಪಾಕ್ ಆಟಗಾರನತ್ತ ನಡೆದರು. ಇದನ್ನು ಗಮನಿಸಿದ ಮಲ್ಹೋತ್ರಾ ಹಾಗೂ ಭಾರತದ ತಂಡದ ಉಳಿದ ಆಟಗಾರರು ಅವರನ್ನು ತಡೆಯಲು ಮುಂದಾದದರು. ಆದರೆ ಇದೇ ವೇಳೆ ವೈಭವ್ ಸುರ್ಯವಂಶಿ ಕೋಪಗೊಂಡಿದ್ದಕ್ಕೆ ಅಸಲಿ ಕಾರಣ ಏನು ಎಂಬುದು ಇನ್ನು ಬಹಿರಂಗವಾಗಿಲ್ಲ.