For Quick Alerts
ALLOW NOTIFICATIONS  
For Daily Alerts
 

Vaibhav Suryavanshi: ಪಾಕ್‌ನಲ್ಲಿ ಯಂಗ್ ಸಚಿನ್ ಆಡಿದ ಆಟ ನೆನಪಿಸಿದ ವೈಭವ್

ಬಿಹಾರದ 14 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಐಪಿಎಲ್ 2025 ರಲ್ಲಿ ಶತಕ ಗಳಿಸುವ ಮೂಲಕ ರಾತ್ರೋರಾತ್ರಿ ಸೂಪರ್ ಸ್ಟಾರ್ ಆದರು. ಅವರ ಹೆಸರು ಕೆಲವು ಸಮಯದಿಂದ ಭಾರತೀಯ ಕ್ರಿಕೆಟ್‌ನಲ್ಲಿ ಕೇಳಿಬರುತ್ತಿದೆ. ಅವರು ಜೂನಿಯರ್ ಕ್ರಿಕೆಟ್‌ನಿಂದ ಐಪಿಎಲ್ ಹರಾಜಿನವರೆಗೆ ಭಾರಿ ಸದ್ದು ಮಾಡಿದ್ದರು. ಈಗ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್ ರಾಜಸ್ಥಾನ ರಾಯಲ್ಸ್ ಪರ ಶತಕ ಗಳಿಸುವ ಮೂಲಕ ಹೀರೋ ಆದರು. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೈಭವ್ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಸಂಚಲನ ಸೃಷ್ಟಿಸಿದರು. ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿಶ್ವದ ಅಗ್ರ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಅಫ್ಘಾನಿಸ್ತಾನದ ರಶೀದ್ ಖಾನ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ವೈಭವ್ ತಮ್ಮ ಶತಕ ಪೂರೈಸಿದರು. ಅವರು ಶತಕ ಗಳಿಸಿದ ತಕ್ಷಣ, ರಾಜಸ್ಥಾನ ಡಗೌಟ್‌ನಲ್ಲಿ ಕುಳಿತಿದ್ದ ಅಭಿಮಾನಿಗಳು, ಕೋಚಿಂಗ್ ಸಿಬ್ಬಂದಿ ಮತ್ತು ಆಟಗಾರರು ಎದ್ದುನಿಂತು ಚಪ್ಪಾಳೆ ತಟ್ಟಿದರು. ಅಷ್ಟೇ ಅಲ್ಲ, ಎದುರಾಳಿ ತಂಡದ ಆಟಗಾರರು ಕೂಡ ವೈಭವ್ ಆಟಕ್ಕೆ ಮೆಚ್ಚು ವ್ಯಕ್ತಪಡಿಸಿದರು.

Vaibhav Suryavanshi remembers the game played by young Sachin Tendulkar in Pakistan

ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರು ಗುಜರಾತ್ ಟೈಟಾನ್ಸ್ ತಂಡ ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ಆರ್ ಸಾಯಿ ಕಿಶೋರ್ ಅವರಂತಹ ಬೌಲರ್‌ಗಳ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ವೈಭವ್ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ರನ್ನು ಸಹ ಬಿಡಲಿಲ್ಲ. ರಶೀದ್ ಪ್ರಸ್ತುತ ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಸ್ಪಿನ್ನರ್ ಆಗಿದ್ದಾರೆ. ಅವರ ಎಸೆತಗಳನ್ನು ಎದುರಿಸುವುದು ಸುಲಭವಲ್ಲ. ಆದರೂ, ವೈಭವ್ 9 ಎಸೆತಗಳನ್ನು ಎದುರಿಸಿ 14 ರನ್ ಗಳಿಸಿದರು. ಇದರಲ್ಲಿ ಅವರು ತಮ್ಮ ಶತಕವನ್ನು ಪೂರೈಸಿದ ಸ್ಮರಣೀಯ ಸಿಕ್ಸರ್ ಸೇರಿದೆ. ವಿಶ್ವದ ಟಾಪ್ ಬ್ಯಾಟರ್ಸ್ ಕೂಡ ರಶೀದ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಒಂದು ಸಲ ಯೋಚನೆ ಮಾಡುತ್ತಾರೆ. ಅಂತಹದಲ್ಲಿ ವೈಭವ್ 14 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು.

ಸಚಿನ್ ಆಟ ನೆನಪಿಸಿದ ವೈಭವ್

ವೈಭವ್ ಮತ್ತು ರಶೀದ್ ನಡುವಿನ ಘರ್ಷಣೆ ಅಭಿಮಾನಿಗಳಿಗೆ ಟೀಮ್ ಇಂಡಿಯಾ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಅಬ್ದುಲ್ ಖಾದಿರ್ ನಡುವಿನ ಕಾದಾಟವನ್ನು ನೆನಪಿಸಿತು. ಸಚಿನ್ ತೆಂಡೂಲ್ಕರ್ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು ಪಾಕಿಸ್ತಾನ ಪ್ರವಾಸದಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದರು. ಅದೇ ಪ್ರವಾಸದ ಸಮಯದಲ್ಲಿ, ಅವರು ಅನಧಿಕೃತ ಪಂದ್ಯದಲ್ಲಿ ಅಬ್ದುಲ್ ಖಾದಿರ್ ಅವರನ್ನು ಎದುರಿಸಿದರು. ಆ ಸಮಯದಲ್ಲಿ, ಅತ್ಯುತ್ತಮ ಬ್ಯಾಟರ್ಸ್ ಸಹ ಖಾದಿರ್‌ ಬೌಲಿಂಗ್‌ನಲ್ಲಿ ಆಡಲು ಹೆದರುತ್ತಿದ್ದರು. ಖಾದಿರ್ ಅವರನ್ನು ಸಚಿನ್ ಎದುರಿಸಲು ಸಾಧ್ಯವಾಗುವುದಿಲ್ಲ ಎಂದು ಜನರು ಭಾವಿಸಿದ್ದರು. ಆದರೆ, ಈ ಲೆಕ್ಕಚಾರವನ್ನು ಸಚಿನ್ ಉಲ್ಟಾ ಮಾಡಿದರು. ಖಾದಿರ್ ವಿರುದ್ಧ ಅಬ್ಬರಿಸುವ ಮೂಲಕ ಸಚಿನ್ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಪಾಕಿಸ್ತಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಚಿನ್ ಕೇವಲ 18 ಎಸೆತಗಳಲ್ಲಿ 53 ರನ್ ಗಳಿಸಿದ್ದರು. ಅದು 20 ಓವರ್‌ಗಳ ಪಂದ್ಯವಾಗಿತ್ತು. ಪೇಶಾವರದಲ್ಲಿ ಮಂದ ಬೆಳಕಿನಿಂದಾಗಿ ಏಕದಿನ ಪಂದ್ಯ ರದ್ದಾದ ನಂತರ ಈ ಪಂದ್ಯವನ್ನು ಆಯೋಜಿಸಲಾಗಿತ್ತು. ಆಗ ಸಚಿನ್ 16 ವರ್ಷ ವಯಸ್ಸಿನವರಾಗಿದ್ದರು. ಖಾದಿರ್ ಅವರ ಒಂದೇ ಓವರ್‌ನಲ್ಲಿ 27 ರನ್ ಗಳಿಸಿದರು. ಆ ಸ್ಮರಣೀಯ ಓವರ್‌ನಲ್ಲಿ ಸಚಿನ್ ಗಳಿಸಿದ ಸ್ಕೋರ್ 6, 0, 4, 6, 6, 6 .

ಯೂಸುಫ್ ಪಠಾಣ್ ದಾಖಲೆ ಬ್ರೇಕ್

ವೈಭವ್ ಸೂರ್ಯವಂಶಿ ಶತಕ ಸಿಡಿಸುತ್ತಿದ್ದಂತೆ ಯೂಸುಫ್ ಪಠಾಣ್ ಅವರ 15 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಐಪಿಎಲ್ 2010 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ಪರ ಯೂಸುಫ್ 37 ಎಸೆತಗಳಲ್ಲಿ ಶತಕ ಗಳಿಸಿದ್ದರು. ಈಗ ರಾಜಸ್ಥಾನ ಪರ ವೈಭವ್ ಟಿ20 ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರು 2013 ರಲ್ಲಿ ಮುಂಬೈ ವಿರುದ್ಧ ಮಹಾರಾಷ್ಟ್ರ ಪರ ವಿಜಯ್ ಜೋಲ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಜೋಯಲ್ 18 ವರ್ಷ 118 ದಿನಗಳಲ್ಲಿ ಶತಕ ಗಳಿಸಿದರು.

Story first published: Tuesday, April 29, 2025, 12:08 [IST]
Other articles published on Apr 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+