For Quick Alerts
ALLOW NOTIFICATIONS  
For Daily Alerts
 

14 ವರ್ಷದ ಪೋರನ ಬ್ಯಾಟಿಂಗ್ ಕಂಡು, ವೀಲ್‌ ಚೇರ್‌ ಬಿಟ್ಟು ಸಂಭ್ರಮಿಸಿದ ರಾಹುಲ್ ದ್ರಾವಿಡ್‌

ಕೆಲಸದ ಮೇಲೆ ಪ್ರೀತಿ ಇದ್ದರೆ ಎಂತಹ ನೋವನ್ನು ಮರೆಸುತ್ತದೆ ಎನ್ನಲು ಸೋಮವಾರ ಬೆಸ್ಟ್‌ ಎಕ್ಸಾಮ್‌ಪಲ್‌ ಸಿಕ್ಕಿದೆ. ರಾಹುಲ್‌ ದ್ರಾವಿಡ್‌ ಟೀಮ್ ಇಂಡಿಯಾ ಕಂಡ ಶ್ರೇಷ್ಠ ಬ್ಯಾಟರ್‌. ಈಗ ಇವರು ರಾಜಸ್ಥಾನ ರಾಯಲ್ಸ್ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಹುಲ್‌ ದ್ರಾವಿಡ್‌ ಅವರ ಕಾಲಿಗೆ ಪೆಟ್ಟಾಗಿದ್ದರಿಂದ ಅವರು ವೀಲ್‌ ಚೇರ್‌ನಲ್ಲಿ ತಿರುಗಾಡುತ್ತಿದ್ದಾರೆ. ಆದರೆ ತಮ್ಮ ತಂಡದ ಯುವ ಬ್ಯಾಟರ್‌ ಬ್ಯಾಟಿಂಗ್ ಕಂಡು ರಾಹುಲ್‌ ಜೋಶ್‌ನಲ್ಲಿ ವೀಲ್‌ ಚೇರ್‌ ಬಿಟ್ಟು ಎದ್ದು ಕುಣಿದಾಡುವಂತೆ ಮಾಡಿದೆ.

ನಿಜಕ್ಕೂ ಸೋಮವಾರ ನಡೆದ ಪಂದ್ಯ ಲೈವ್‌ ಪಂದ್ಯವೋ, ಹೈಲೇಟ್ಸ್‌ ಪಂದ್ಯವೋ ಎನ್ನುವುದೇ ತಿಳಿಯಲಿಲ್ಲ. ಗುಜರಾತ್‌ ನೀಡಿದ್ದ ಸವಾಲಿನ ಗುರಿಯನ್ನು ರಾಜಸ್ಥಾನ ರಾಯಲ್ಸ್‌ ಇನ್ನು 25 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿ ಬೀಗಿದೆ. ಈ ಜಯದಲ್ಲಿ ಎದ್ದು ಕಾಣುವ ಆಟಗಾರ 14 ವರ್ಷದ ವೈಭವ್‌ ಸೂರ್ಯವಂಶಿ. ಟೈಟಾನ್ಸ್‌ ತಂಡದ ಬಿಗುವಿನ ದಾಳಿಯನ್ನು ಲೆಕ್ಕಿಸಿದೆ ವೈಭವ್ ಆಡಿದ ಆಟ ಎಲ್ಲರಿಗೂ ಮುದ ನೀಡಿದೆ. ಅದ್ರಲ್ಲೂ ಇವರು ತಮಗೆ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದ ರಾಹುಲ್ ದ್ರಾವಿಡ್‌ ಅವರಿಗಿಂತೂ ಅಪಾರ ಖುಷಿ ನೀಡಿದೆ.

Vaibhav Suryavanshi s Blazing Century Makes Rahul Dravid Forget His Injury and Celebrate

ವೈಭವ್‌ ಸೂರ್ಯವಂಶಿ ಬ್ಯಾಟಿಂಗ್‌ ಕಂಡು ಇಡೀ ಕ್ರಿಕೆಟ್‌ ಜಗತ್ತು ಎದ್ದು ನಿಂತು ಸಲಾಂ ಹೇಳಿದೆ. ಅಗ್ರೇಸಿವ್‌ ಬ್ಯಾಟಿಂಗ್‌ಗೆ ಮಾಜಿ ಆಟಗಾರರು ಸಹ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಸ್ಕಿಲ್‌ ಫುಲ್‌ ಬ್ಯಾಟಿಂಗ್‌ ಮಾಡಿದ ವೈಭವ್‌ ಟೀಮ್ ಇಂಡಿಯಾದ ಬ್ಯಾಟಿಂಗ್‌ ಸ್ಟಾರ್ ಬ್ಯಾಟರ್‌ ಒಬ್ಬನ ಜನನ ವಾಗಿದೆ. ಮೈಚಳಿ ಬಿಟ್ಟು ಬ್ಯಾಟಿಂಗ್ ಮಾಡುವುದಕ್ಕೆ ಬೆಸ್ಟ್‌ ಎಕ್ಸಾಮ್‌ಪಲ್‌ ವೈಭವ್ ಸೂರ್ಯವಂಶಿ. ಅಬ್ಬಾ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಇವರ ಈ ಅಮೋಘ ಬ್ಯಾಟಿಂಗ್‌ ವೇಳೆ ಏಳು ಬೌಂಡರಿ ಮತ್ತು 11 ಸಿಕ್ಸರ್‌ ಹರಿದು ಬಂದಿವೆ.

ವೀಲ್‌ ಚೇರ್‌ ಬಿಟ್ಟು ಸಂಭ್ರಮಿ

ವೈಭವ್‌ ಸೂರ್ಯವಂಶಿ ಅವರ ಆಟ ಅದೆಷ್ಟೋ ಅಭಿಮಾನಿಗಳಿಗೆ ಖುಷಿ ನೀಡಿದೆ. ಅದ್ರಲ್ಲೂ ರಾಜಸ್ಥಾನ ರಾಯಲ್ಸ್ ತಂಡದ ಕೋಚ್‌ ರಾಹುಲ್ ದ್ರಾವಿಡ್‌ ಅವರಿಗೆ ಅಪಾರ ಸಂತಸವನ್ನು ನೀಡಿದೆ. ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ರಾಹುಲ್ ದ್ರಾವಿಡ್‌ ಸೆಲೆಬ್ರೇಷನ್‌ ನೋಡಬಹುದಾಗಿದೆ.

ವೈಭವ್ ತಮ್ಮ ಶತಕವನ್ನು ಪೂರ್ಣಗೊಳಿಸಿದಾಗ, ರಾಹುಲ್ ದ್ರಾವಿಡ್ ತಮ್ಮ ವೀಲ್‌ಚೇರ್‌ನಿಂದ ಎದ್ದು, ವೈಭವ್‌ ಅವರ ಶತಕವನ್ನು ಸಂಭ್ರಮಿಸಿದರು. ಕಾಲಿನ ಗಾಯದ ಹೊರತಾಗಿಯೂ, ವೈಭವ್‌ ಬ್ಯಾಟಿಂಗ್‌ ಮೋಡಿ ರಾಹುಲ್‌ ನೋವನ್ನು ಮರೆಸಿತು. ಅವರು ಕುಳಿತಿದ್ದ ಸ್ಥಾನದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಕಾಣಿಸಿಕೊಂಡರು. ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೂರ್ಯವಂಶಿ ಶತಕದ ಸಂಭ್ರಮದಲ್ಲಿ ಮುಳುಗಿ, ತಮ್ಮ ಕಾಲಿಗೆ ಗಾಯವಾಗಿರುವುದನ್ನೇ ಮರೆತುಬಿಟ್ಟರು.

ಐಪಿಎಲ್‌ಗೆ ಪದಾರ್ಪಣೆ

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ಅವರು 20 ಎಸೆತಗಳಲ್ಲಿ 34 ರನ್ ಬಾರಿಸಿದರು. ಆರ್‌ಸಿಬಿ ವಿರುದ್ಧವೂ ವೈಭವ್ 12 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಗುಜರಾತ್ ವಿರುದ್ಧದ ಈ ಪಂದ್ಯವು ವೈಭವ್ ಅವರ ಐಪಿಎಲ್ ವೃತ್ತಿಜೀವನದ ಮೂರನೇ ಪಂದ್ಯ.

Story first published: Tuesday, April 29, 2025, 8:52 [IST]
Other articles published on Apr 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+