IPLನಲ್ಲಿ ಚೊಚ್ಚಲ 5 ವಿಕೆಟ್ ಪಡೆದ ಕೆಕೆಆರ್‌ನ ವರುಣ್ ಚಕ್ರವರ್ತಿ ದಾಖಲೆ

ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 42ನೇ ಪಂದ್ಯದಲ್ಲಿ ಕರ್ನಾಟಕ ಮೂಲದ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್ ) ಸ್ಪಿನ್ನರ್ ವರುಣ್ ಚಕ್ರವರ್ತಿ ದಾಖಲೆ ನಿರ್ಮಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ತಮಿಳುನಾಡು ಲೆಗ್‌ಸ್ಪಿನ್ನರ್ ಕೇವಲ ಮೂರು ಓವರ್‌ಗಳಲ್ಲಿ ಐದು ವಿಕೆಟ್ ಕಬಳಿಸುವ ಮೂಲಕ ದಾಖಲೆ ನಿರ್ಮಿಸಿದ್ದು, ಈ ಸೀಸನ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೆಕೆಆರ್ ನೀಡಿದ 195ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ಪ್ಯಾಟ್ ಕಮಿನ್ಸ್ ದಾಳಿಗೆ ನಲುಗಿದರೆ, ನಂತರದಲ್ಲಿ ಲೆಗ್ಗಿ ವರುಣ್ ಚಕ್ರವರ್ತಿ ಸ್ಪಿನ್ ಮ್ಯಾಜಿಕ್‌ಗೆ ನಡುಗಿದೆ. ವರುಣ್ ಸ್ಪಿನ್‌ಗೆ ಡೆಲ್ಲಿ ಬ್ಯಾಟ್ಸ್‌ಮನ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು.
ವರುಣ್ ಸ್ಪಿನ್‌ಗೆ ಮೊದಲು ರಿಷಭ್ ಪಂತ್ ವಿಕೆಟ್ ಒಪ್ಪಿಸಿದ್ರೆ, ನಂತರದಲ್ಲಿ ಶಿಮ್ರೊನ್ ಹೆಟ್ಮಾಯರ್, ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯ್ನಿಸ್ ಮತ್ತು ಅಕ್ಷರ್ ಪಟೇಲ್ ಔಟಾದ್ರು. ಈ ಮೂಲಕ ಚಕ್ರವರ್ತಿ ಅಂತಿಮವಾಗಿ 4 ಓವರ್‌ಗಳಿಗೆ 20ರನ್ ನೀಡಿ ಐದು ವಿಕೆಟ್ ಕಬಳಿಸಿದರು.
ಇದು ಟೀಮ್ ಇಂಡಿಯಾ ಪರ ಆಡದ ಅನ್‌ಕ್ಯಾಪ್ ಪ್ಲೇಯರ್ ಸ್ಪಿನ್ನರ್ ದಾಖಲಿಸಿದ ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್ ಆಗಿದೆ. ಜೊತೆಗೆ ಸುನಿಲ್ ನರೈನ್ ಬಳಿಕ ಕೆಕೆಆರ್ ಪರ ಬೆಸ್ಟ್ ಫರ್ಫಾಮೆನ್ಸ್ ಕೂಡ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications