
ಕೆಕೆಆರ್ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯಲ್ಲಿ ತಮ್ಮ ಬಿಗಿಯಾದ ಬೌಲಿಂಗ್ ಮತ್ತು ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಮಿಂಚುತ್ತಿದ್ದಾರೆ. ಇದರ ನಡುವೆ ಅವರ ಟ್ಯಾಟುವೊಂದು ಹೊಸ ವಿಷಯವೊಂದನ್ನ ತೆರೆದಿಟ್ಟಿದೆ.
2019 ರ ಐಪಿಎಲ್ ಹರಾಜಿನಲ್ಲಿ ತಮಿಳುನಾಡು ಲೆಗ್ ಸ್ಪಿನ್ನರ್ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ 8.4 ಕೋಟಿ ರೂ. ಹರಾಜು ಆದರು. ಆದಾಗ್ಯೂ, ಅವರು ಕೇವಲ ಒಂದು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು ಬೆರಳಿನ ಮುರಿತದಿಂದಾಗಿ ಉಳಿದ ಪಂದ್ಯಾವಳಿಗಳಿಂದ ಹೊರಗುಳಿದಿದ್ದರು.
ಗಾಯದ ಪೀಡಿತ ಋತುವಿನ ಹೊರತಾಗಿಯೂ, 2020 ರ ಐಪಿಎಲ್ ಹರಾಜಿನಲ್ಲಿ ಮಿಸ್ಟರಿ ಸ್ಪಿನ್ನರ್ ಎರಡನೇ ಬಾರಿಗೆ ಅದೃಷ್ಟವನ್ನು ಪಡೆದರು, ಅಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತನ್ನ ಏಳು ಮಾರ್ಪಾಡುಗಳಿಗಾಗಿ 4 ಕೋಟಿ ರೂ. ಕೊಟ್ಟು 29 ರ ಹರೆಯದ ವರುಣ್ ಚಕ್ರವರ್ತಿಯ್ನನು ತಮ್ಮ ತಂಡಕ್ಕೆ ಸೆಳೆದುಕೊಂಡಿತು.
ಯುಎಇಯ ಧೂಳಿನ ಮತ್ತು ಹಳೆಯ ಟ್ರ್ಯಾಕ್‌ಗಳಲ್ಲಿ ಬೌಲಿಂಗ್ ಮಾಡುವ ಮೂಲಕ ಈ ಬೌಲರ ಹೆಚ್ಚಿನ ಅವಕಾಶವನ್ನು ಬಳಸಿಕೊಂಡಿದ್ದಾರೆ.
ಗುರುವಾರ (ಅಕ್ಟೋಬರ್ 15), ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನ ಅಧಿಕೃತ ಟ್ವಿಟರ್ ಹ್ಯಾಂಡಲ್ ತಮ್ಮ ತರಬೇತಿ ಅವಧಿಗಳಿಂದ ಕ್ಯಾಂಡಿಡ್ ಚಿತ್ರಗಳನ್ನು ಹಂಚಿಕೊಂಡಿದೆ. ಅಂತಹ ಒಂದು ಚಿತ್ರದಲ್ಲಿ, ವರುಣ್ ಚಕ್ರವರ್ತಿ ಕೂಡ ಆನಿಮೇಟೆಡ್ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಏತನ್ಮಧ್ಯೆ, ನೆಟಿಜನ್‌ಗಳಳ ಗಮನ ಸೆಳೆದ ಒಂದು ವಿಷಯವೆಂದರೆ ವರುಣ್ ಅವರ ಎಡಗೈ ಅಲ್ಲಿ ಅವರು ತಮಿಳು ಸೂಪರ್ ಸ್ಟಾರ್ ತಲಪತಿ ವಿಜಯ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ವಿಜಯ್ ಕೂಡ ಒಬ್ಬ. ಒಳ್ಳೆಯ ಡ್ಯಾನ್ಸರ್ ಹಿನ್ನೆಲೆ ಗಾಯಕ ಆಗಿದ್ದಾರೆ.
ವರುಣ್ ಚಕ್ರವರ್ತಿಯವರ ದೇಶೀಯ ವೃತ್ತಿಜೀವನ:
29 ರ ಹರೆಯದವರು ಸೆಪ್ಟೆಂಬರ್ 20, 2018 ರಂದು 2018-19 ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಲಿಸ್ಟ್ ಎ ಚೊಚ್ಚಲ ಪ್ರವೇಶ ಮಾಡಿದರು. ಪಂದ್ಯಾವಳಿಯಲ್ಲಿ 22 ವಿಕೆಟ್ ಪಡೆದ ಅವರು ತಮ್ಮ ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ನೀಡಿದರು ಅದು ಕೂಡ ಒಂಬತ್ತು ಪಂದ್ಯಗಳಲ್ಲಿ. ನಂತರ, 12 ನವೆಂಬರ್ 2018 ರಂದು 2018-19 ರಂಜಿ ಟ್ರೋಫಿಯಲ್ಲಿ ತಮಿಳುನಾಡಿಗೆ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದರು.
ಆದರೆ, ಅವರು 2018 ರ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಮಧುರೈ ಪ್ಯಾಂಥರ್ಸ್ ಪರ ಆಡಿ ತಮ್ಮ ಸಾಧನೆಯೊಂದಿಗೆ ಬೆಳಕಿಗೆ ಬಂದರು. ಅವರ ಅದ್ಭುತ ಪ್ರದರ್ಶನದಿಂದಾಗಿ ಮಧುರೈ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.