For Quick Alerts
ALLOW NOTIFICATIONS  
For Daily Alerts
 

ಮಹಿಳಾ ಕ್ರಿಕೆಟ್ ನ್ಯೂಜಿಲೆಂಡ್ ಪ್ರವಾಸ: ಕನ್ನಡತಿ ವೇದಾಗೆ ಸ್ಥಾನವಿಲ್ಲ

Veda Krishnamurthy dropped from Indian team for New Zealand tour

ನವದೆಹಲಿ, ಡಿಸೆಂಬರ್ 22: ಭಾರತ ಮಹಿಳಾ ಕ್ರಿಕೆಟ್ ತಂಡದ ನ್ಯೂಜಿಲೆಂಡ್ ಪ್ರವಾಸದ ಏಕದಿನ ಸರಣಿಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ಅವರನ್ನು ಕೈಬಿಡಲಾಗಿದೆ.

ಅವರ ಸ್ಥಾನಕ್ಕೆ ಮೋನಾ ಮೆಶ್ರಾಮ್ ಅವರನ್ನು ಆಯ್ಕೆ ಮಾಡಲಾಗಿದ್ದು, ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲಿನ ಭಾರತ ತಂಡದಲ್ಲಿ ಮಾಡಲಾದ ಏಕ ಮಾತ್ರ ಬದಲಾವಣೆ ಇದಾಗಿದೆ.

ಟಿ20 ಸರಣಿಗೆ ದೆಹಲಿಯ ಆರಂಭಿಕ ಆಟಗಾರ್ತಿ 22 ವರ್ಷದ ಪ್ರಿಯಾ ಪೂನಿಯಾ ಅವರಿಗೆ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಹಿರಿಯ ಮಹಿಳಾ ಏಕದಿನ ಲೀಗ್‌ನಲ್ಲಿ ಪ್ರಿಯಾ ಅವರು ಎರಡು ಶತಕಗಳನ್ನು ಬಾರಿಸಿದ್ದರು.

ಮಹಿಳಾ ವಿಶ್ವ ಟಿ20ಯಲ್ಲಿ ಸ್ಥಾನ ಪಡೆಯದಿದ್ದ ವೇಗದ ಬೌಲರ್ ಶಿಖಾ ಪಾಂಡೆ ಟಿ20 ತಂಡಕ್ಕೆ ಮರಳಿದ್ದಾರೆ.

ಗಾಯಾಳು ಪೂಜಾ ವಸ್ತ್ರಾರ್ಕರ್ ಅವರ ಸ್ಥಾನಕ್ಕೆ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ದೇವಿಕಾ ವೈದ್ಯ ಅವರನ್ನು ಕೈಬಿಡಲಾಗಿದೆ.

ವಿಶ್ವಕಪ್ ಸೆಮಿಫೈನಲ್ಸ್‌ನಲ್ಲಿ ಉಂಟಾದ ಮನಸ್ತಾಪಗಳ ನಡುವೆಯೂ ತಂಡದ ನಾಯಕತ್ವಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಏಕದಿನ ಕ್ರಿಕೆಟ್ ಸರಣಿಯಲ್ಲಿ ತಂಡವನ್ನು ಮಿಥಾಲಿ ರಾಜ್ ಮುನ್ನಡೆಸಲಿದ್ದಾರೆ. ಟಿ20ಯಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿರಲಿದ್ದಾರೆ.

ನೂತನ ಕೋಚ್ ಡಬ್ಲ್ಯೂವಿ ರಾಮನ್ ನೇತೃತ್ವದಲ್ಲಿ ಭಾರತದ ಮಹಿಳಾ ತಂಡವು ಜನವರಿ 24ರಿಂದ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ.

Story first published: Saturday, December 22, 2018, 17:17 [IST]
Other articles published on Dec 22, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+