Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಮೆನ್ಸ್ ಟಿ20 ಚಾಲೆಂಜ್: ಸೂಪರ್‌ನೊವಾಸ್ ವಿರುದ್ಧ ಗೆದ್ದು ಬೀಗಿದ ವೆಲಾಸಿಟಿ

Velocity Won Against Supernovas By 5 Wickets

ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್‌ನೊವಾಸ್ ವಿರುದ್ಧ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ಟಿ20 ಪಂದ್ಯವನ್ನು ಗೆದ್ದು ಬೀಗಿದೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಮೆನ್ಸ್ ಟಿ20 ಚಾಲೆಂಜ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸೂಪರ್ ನೊವಾಸ್ ಎಡವಿದ್ದು , ವೆಲಾಸಿಟಿ ಐದು ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಮಿಥಾಲಿ ನೇತೃತ್ವದ ವೆಲಾಸಿಟಿ ತಂಡವು ಹಾಲಿ ಚಾಂಪಿಯನ್ನರನ್ನು 129ರನ್‌ಗಳಿಗೆ ಕಟ್ಟಿಹಾಕಿತು. ಎಂಟು ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿದ ಸೂಪರ್‌ನೋವಾಸ್ ಪರ ಪ್ರಿಯಾ ಪುನಿಯ 11, ಚಮರಿ ಅಥಾಪತ್ತು 44, ಜೆಮಿಮಾ ರೋಡ್ರಿಗಸ್ 7, ಹರ್ಮನ್‌ಪ್ರೀತ್ ಕೌರ್ 31, ಎಸ್‌ ಸಿರಿವರ್ಧನೆ 18, ರನ್‌ಗಳಿಸಿದರು.

127ರನ್‌ ಟಾರ್ಗೆಟ್ ಬೆನ್ನತ್ತಿದ ವೆಲಾಸಿಟಿ ಮೊದಲ ಓವರ್‌ನಲ್ಲೇ ಓಪನರ್ ಡೇನಿಯಲ್ ವ್ಯಾಟ್ (0) ವಿಕೆಟ್ ಕಳೆದುಕೊಂಡಿತು. ನಾಯಕಿ ಮಿಥಾಲಿ ರಾಜ್ ಕೂಡ 7ರನ್‌ಗಳಿಸಿ ಔಟಾದ್ರು, ಶಫಾಲಿ ವರ್ಮಾ ಆಟ 17ಕ್ಕೆ ಮುಕ್ತಾಯವಾಯ್ತು.

ಈ ವೇಳೆ ಕನ್ನಡತಿ ವೇದಾ ಕೃಷ್ಣಮೂರ್ತಿ 29, ಸುಶ್ಮಾ ವರ್ಮಾ 34, ಸುನೆ ಲೂಸ್ ಅಜೇಯ 37ರನ್‌ಗಳ ನೆರವಿನಿಂದ ಇನ್ನೊಂದು ಎಸೆತ ಬಾಕಿ ಇರುವಂತೆ ವೆಲಾಸಿಟಿ ಐದು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

ಈ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಮೂರು ತಂಡಗಳು ಲೀಗ್ ಹಂತದಲ್ಲಿ ಮೂರು ಪಂದ್ಯಗಳು ಆಡಲಿದ್ದು, ಟಾಪ್ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಹೋರಾಟವನ್ನು ನಡೆಸಲಿದೆ. ನವೆಂಬರ್ 9 ರಂದು ಫೈನಲ್ ಪಂದ್ಯ ನಡೆಯಲಿದೆ.

Story first published: Thursday, November 5, 2020, 9:39 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+