IND vs PAK: ಬೆಂಗಳೂರಿನಲ್ಲಿ ನಡೆದಿತ್ತು ಹೈವೋಲ್ಟೇಜ್ ಮ್ಯಾಚ್; ವೆಂಕಿ- ಸೊಹೈಲ್ ಜಿದ್ದು ಆರ್ಕಷಣೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ವಿಕ್ಷೀಸಲು ವಿಶ್ವ ಕ್ರಿಕೆಟ್ ಕಾದು ಕುಳಿತ್ತಿರುತ್ತದೆ. ಸಾಂಪ್ರದಾಯಿಕ ಎದುರಾಳಿ ತಂಡಗಳ ನಡುವಿನ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ಬೆಂಗಳೂರಿನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯವು ಇಂದಿಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತದೆ. 1996ರ ವಿಶ್ವಕಪ್‌ನ ರ್ಟರ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಪಾಕ್ ಬ್ಯಾಟರ್ ಸೋಹೈಲ್ ತನ್ವೀರ್ ಮತ್ತು ಟೀಮ್ ಇಂಡಿಯಾ ವೇಗಿ ವೆಂಕಟೇಶ್ ಪ್ರಸಾದ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು.
1996ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ವೆಂಕಟೇಶ್ ಪ್ರಸಾದ್ ಅವರನ್ನು ಕೆಣಕಿದ ಆಮಿರ್ ಸೊಹೈಲ್ ಮುಂದಿನ ಎಸೆತದಲ್ಲಿ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ವೆಂಕಟೇಶ್ ಪ್ರಸಾದ್ ಎಲ್ಲರ ಗಮನ ಸೆಳೆದಿದ್ದರು. ಅಂದು ವೆಂಕಟೇಶ್ ಪ್ರಸಾದ್ ಆಮಿರ್ ಸೊಹೈಲ್‌ಗೆ ಪೆವಿಲಿಯನ್‌ಗೆ ದಾರಿ ತೋರಿಸಿದ್ದು ಅಭಿಮಾನಿಗಳು ಈಗಲೂ ಸಾಮಾಜಿಕ ಜಾಲತಾಣದಲ್ಲಿ ನೋಡಿ ಸಂಭ್ರಮಿಸುತ್ತಾರೆ.

ನಡೆದಿದ್ದೇನು?
1996ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನ ಇನ್ನಿಂಗ್ಸ್ ವೇಳೆ ಕ್ರೀಸ್‌ನಲ್ಲಿ ಆಮಿರ್ ಸೊಹೈಲ್ ಇದ್ದರು. ಟೀಮ್ ಇಂಡಿಯಾ ಪರ 15ನೇ ಓವರ್‌ನಲ್ಲಿ ಬೌಲಿಂಗ್ ದಾಳಿಗಿಳಿದ ವೆಂಕಟೇಶ್ ಪ್ರಸಾದ್ ಅವರ ಎಸೆತದಲ್ಲಿ ತನ್ವೀರ್ ಎಕ್ಸ್‌ಟ್ರಾ-ಕವರ್ ಕಡೆಗೆ ಬೌಂಡರಿ ಬಾರಿಸಿದರು. ನಂತರ ಅವರು ತಮ್ಮ ಬ್ಯಾಟ್ ಅನ್ನು ಪ್ರಸಾದ್ ಕಡೆಗೆ ತೋರಿಸಿ ಮತ್ತೊಂದು ಕವರ್ ಬೌಂಡರಿಯತ್ತ ಹೊಡೆಯುವುದಾಗಿ ಸನ್ನೆ ಮಾಡಿದ್ದರು. ಆದರೆ, ತಾಳ್ಮೆ ಕಳೆದುಕೊಳ್ಳದ ವೆಂಕಿ ಮುಂದಿನ ಎಸೆತದಲ್ಲೇ ಸೇಡು ತೀರಿಸಿಕೊಂಡರು. ಬೌಂಡರಿ ಹೊಡೆಯುವ ಆತುರದಲ್ಲಿ ಆಮಿರ್ ಸೊಹೈಲ್ ವಿಕೆಟ್ ಕಳೆದುಕೊಂಡರು. ಸೊಹೈಲ್ ಔಟಾದ ನಂತರ ಪಾಕಿಸ್ತಾನ ಕುಸಿದು ಬಿದಿತ್ತು. ಈ ವೇಳೆ 1 ವಿಕೆಟ್ ನಷ್ಟಕ್ಕೆ 113 ರನ್ ಗಳಸಿದ್ದ ಪಾಕಿಸ್ತಾನ ತಂಡದ ಗುರಿ 239ಕ್ಕೆ ತಲುಪಿತು. ಅಂತಿಮವಾಗಿ ಭಾರತ ತಂಡ ಗೆದ್ದು ಪಾಕಿಸ್ತಾನ ತಂಡವನ್ನು ಟೂರ್ನಿಯಿಂದ ಹೊರ ಹಾಕಿತ್ತು. ಇಂದಿಗೂ ವೆಂಕಿ ಮತ್ತು ಆಮಿರ್ ಸೊಹೈಲ್ ನಡುವಿನ ಜಿದ್ದು ಆರ್ಕಷಣೆಯಾಗಿದೆ.
ಈಗ ಚಾಂಪಿಯನ್ಸ್ ಟ್ರೋಫಿ 2025ರ ಹೈವೋಲ್ಟೇಜ್ ಪಂದ್ಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಿದರೆ, ಪಾಕಿಸ್ತಾನ ತಂಡಕ್ಕೆ ಮೊಹಮ್ಮದ್ ರಿಜ್ವಾನ್ ನಾಯಕತ್ವ ವಹಿಸಲಿದ್ದಾರೆ. ಭಾರತ ವಿರುದ್ಧ ಪಾಕಿಸ್ತಾನ ಸೋತರೆ ಟೂರ್ನಿಯಿಂದ ಹೊರಗುಳಿಯಲಿದೆ. ಮತ್ತೊಂದೆಡೆ ಭಾರತ ಗೆದ್ದರೆ ಕ್ವಾಟರ್ ಫೈನಲ್‌ಗೆ ಎಂಟ್ರಿಕೊಂಡಲಿದೆ. ಈ ಪಂದ್ಯದಲ್ಲಿಯೂ ಆಟಗಾರರ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ.
ವೆಂಕಟೇಶ್ ಪ್ರಸಾದ್ ಸಾಧನೆ
ಭಾರತದ ತಂಡವನ್ನು ವೆಂಕಟೇಶ್ ಪ್ರಸಾದ್ 1996 ರಿಂದ 2001 ರವರೆಗೆ ಪ್ರತಿನಿಧಿಸಿದ್ದಾರೆ. ಅವರು ಭಾರತದ ಪರ 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಸಂದರ್ಭಗಳಲ್ಲಿ ಅವರು 96 ಟೆಸ್ಟ್ ವಿಕೆಟ್ ಹಾಗೂ 196 ಏಕದಿನ ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications