Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತೆಂಡೂಲ್ಕರ್ ಮೃದು, ಕೊಹ್ಲಿ ಆಕ್ರಮಣಕಾರಿ: ವೆಂಕಟೇಶ್ ಪ್ರಸಾದ್

Venkatesh Prasad Says Sachin is very soft, Virat is aggressive

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಮತ್ತು ಈಗಿನ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಹೋಲಿಕೆ ಇವತ್ತಿನ ನೆನ್ನೆಯ ಸಂಗತಿಯಲ್ಲ. ಭಾರತದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಈಗ ಸಚಿನ್ ಮತ್ತು ಕೊಹ್ಲಿ ಹೋಲಿಸಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಇತ್ತ ವಿರಾಟ್ ಕೊಹ್ಲಿ ಅವರು ಸಚಿನ್ ನಿರ್ಮಿಸಿರುವ ದಾಖಲೆಗಳನ್ನು ಒಂದೊಂದಾಗಿ ಮುರಿಯುತ್ತಾ ಬರುತ್ತಿದ್ದಾರೆ. ಹೀಗಾಗಿಯೇ ಕ್ರಿಕೆಟ್ ವಲಯದಲ್ಲಿ ಆಗಾಗ ಸಚಿನ್ ಮತ್ತು ಕೊಹ್ಲಿ ಬಗ್ಗೆ ಚರ್ಚೆಗಳಾಗುತ್ತಿರುತ್ತವೆ. ಕೆಲವರು ಇಬ್ಬರಿಗೂ ಹೋಲಿಸಿ ಮಾತನಾಡುತ್ತಿರುತ್ತಾರೆ.

ಸಚಿನ್ ಮತ್ತು ಕೊಹ್ಲಿಯ ಬಗ್ಗೆ ಮಾತನಾಡಿರುವ ವೆಂಕಟೇಶ್ ಪ್ರಸಾದ್ ಭಾರತ ಕ್ರಿಕೆಟ್‌ಗೆ ಇಬ್ಬರೂ ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇಬ್ಬರೂ ಉತ್ತಮ ವ್ಯಕ್ತಿಗಳೆಂದು ಪ್ರಸಾದ್ ಹೊಗಳಿದ್ದಾರೆ.

'ಪ್ರಾಮಾಣಿಕವಾಗಿ ಮಾತನಾಡಬೇಕಾದರೆ ಇಬ್ಬರೂ ಉತ್ತಮ ವ್ಯಕ್ತಿಗಳು. ಸಚಿನ್ ತುಂಬಾ ಮೃದು. ವಿರಾಟ್ ಕೊಹ್ಲಿ ಸ್ವಲ್ಪ ಆಕ್ರಮಣಕಾರಿ ವ್ಯಕ್ತಿತ್ವದವರು. ಅದು ಅವರ ಸ್ವಭಾವವಲ್ಲ. ಮೈದಾನದಲ್ಲಿ ಕೊಹ್ಲಿ ಪ್ರತೀ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲು ಬಯಸುವುದರಿಂದ, ಗೆಲ್ಲಲು ಬಯಸುವುದರಿಂದ ಹೀಗೆ ನಮಗೆ ಕಾಣಿಸುತ್ತಾರೆ,' ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

Story first published: Saturday, May 8, 2021, 16:12 [IST]
Other articles published on May 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+