ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ ವೇಣುಗೋಪಾಲ್ ರಾವ್

ನವದೆಹಲಿ, ಜುಲೈ 31: ಈಚಿನ ದಿನಗಳಲ್ಲಿ ಕ್ರಿಕೆಟ್ ರಂಗದಲ್ಲಿ ವೇಣುಗೋಪಾಲ್ ರಾವ್ ಹೆಸರು ಕೇಳಿಬಂದಿದ್ದೇ ಕಡಿಮೆ. ಆದರೆ ಸುಮಾರು ಐದು ವರ್ಷಗಳಿಗೂ ಹಿಂದೆ ಐಪಿಎಲ್‌ನಲ್ಲೂ ಬ್ಯಾಟ್‌ಬೀಸಿದ್ದ ವೇಣುಗೋಪಾಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಬುಧವಾರ (ಜುಲೈ 31) ನಿವೃತ್ತಿ ಘೋಷಿಸಿದ್ದಾರೆ.
37ರ ಹರೆಯದ ವೇಣುಗೋಪಾಲ್ 16 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2006ರ ಮೇನಲ್ಲಿ ಸೇಂಟ್ ಕಿಟ್‌ನಲ್ಲಿ ರಾವ್, ವೆಸ್ಟ್ ಇಂಡೀಸ್ ವಿರುದ್ಧ ಕಡೆಯ ಏಕದಿನ ಪಂದ್ಯವನ್ನಾಡಿದ್ದರು. ಐದು ವರ್ಷಗಳಿಂದೀಚೆಗೆ ವೇಣುಗೋಪಾಲ್ ಯಾವುದೇ ಗಮನಾರ್ಹ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ.
ಆಂಧ್ರಪ್ರದೇಶ ಮೂಲದ ವೇಣುಗೋಪಾಲ್ ರಾವ್, ಮೆನ್‌ಇನ್ ಬ್ಲೂ ಪರ 11 ಇನ್ನಿಂಗ್ಸ್‌ಗಳಲ್ಲಿ ಕೇವಲ 218 ರನ್ ಮಾತ್ರ ಗಳಿಸಿದ್ದಾರೆ. 2005ರ ಜುಲೈನಲ್ಲಿ ಶ್ರೀಲಂಕಾದ ಡಂಬುಲ್ಲಾದಲ್ಲಿ ಆತಿಥೇಯ ಲಂಕಾ ವಿರುದ್ಧ ರಾವ್ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ್ದರು. ರಣಜಿಯಲ್ಲಿ ಆಂಧ್ರ ತಂಡದಲ್ಲಿ ಆಡಿದ್ದರು.
ಏಕದಿನದಲ್ಲಿ ಅಂಥ ಸಾಧನೆ ಇಲ್ಲದಿದ್ದರೂ ರಾವ್, ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಹೊಂದಿದ್ದಾರೆ. 121 ಪ್ರಥಮದರ್ಜೆ ಪಂದ್ಯಗಳಲ್ಲಿ ರಾವ್ 7,081 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 30 ಅರ್ಧ ಶತಕಗಳು ಸೇರಿವೆ. ಅಲ್ಲದೆ 2008ರಿಂದ 2014ರ ವರೆಗೆ ವೇಣುಗೋಪಾಲ್ ಐಪಿಎಲ್‌ನಲ್ಲಿ ಡೆಕನ್ ಚಾರ್ಜರ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications