ಭಾರತ ತಂಡದ ತವರಿನ ಪಂದ್ಯಗಳ ಟಿವಿ, ಡಿಜಿಟಲ್ ಮಾಧ್ಯಮ ಹಕ್ಕು ಗೆದ್ದ Viacom18
Viacom18 ಪ್ರಸಾರ ಮಾಧ್ಯಮ ಸಂಸ್ಥೆಯು ಮುಂದಿನ ಐದು ವರ್ಷಗಳವರೆಗೆ (2023-28) ಭಾರತ ತಂಡದ ತವರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಬಿಡ್ ಅನ್ನು ಗೆದ್ದುಕೊಂಡಿದೆ.
Sports18 ಇದೀಗ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳನ್ನು ಟಿವಿಯಲ್ಲಿ ಪ್ರಸಾರ ಮಾಡಲಿದ್ದರೆ, JioCinema ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ಪ್ರಸಾರ ಮಾಡಲಾಗುತ್ತದೆ.

ಭಾರತದ ಪಂದ್ಯಗಳ ನೇರಪ್ರಸಾರ ಒಪ್ಪಂದವು ಸೆಪ್ಟೆಂಬರ್ 2023ರಿಂದ ಪ್ರಾರಂಭವಾಗುತ್ತದೆ. ಭಾರತ ತಂಡವನ್ನು ಒಳಗೊಂಡ ಒಟ್ಟು 88 ದ್ವಿಪಕ್ಷೀಯ ಪಂದ್ಯಗಳಿಗೆ (102 ಪಂದ್ಯಗಳವರೆಗೆ ವಿಸ್ತರಣೆಯಾಗಬಹುದು) ಮಾರ್ಚ್ 2028ರವರೆಗೆ ಒಪ್ಪಂದವಿರಲಿದೆ. ಇದರಲ್ಲಿ 25 ಟೆಸ್ಟ್‌ಗಳು, 27 ಏಕದಿನ ಪಂದ್ಯಗಳು ಮತ್ತು 36 ಟಿ20 ಪಂದ್ಯಗಳಾಗಿ ವಿಂಗಡಿಸಬಹುದು.
ಗುರುವಾರ, ಆಗಸ್ಟ್ 31ರಂದು ನಡೆದ ಇ-ಹರಾಜಿನಲ್ಲಿ ಡಿಸ್ನಿ ಸ್ಟಾರ್, ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಡಿಯಾ ಮತ್ತು ವಯಾಕಾಮ್18 ಈ ಮೂರು ಪ್ರಸಾರ ಸಂಸ್ಥೆಗಳು ಸ್ಪರ್ಧಿಗಳಲ್ಲಿದ್ದವು.
ಡಿಸ್ನಿ-ಸ್ಟಾರ್ 2018ರಲ್ಲಿ 6,138 ಕೋಟಿ ರೂ. (ಪ್ರತಿ ಪಂದ್ಯಕ್ಕೆ ರೂ 60 ಕೋಟಿ) ಹಕ್ಕುಗಳನ್ನು ಪಡೆದುಕೊಂಡಿತ್ತು. ಆ ಮೌಲ್ಯವು ಈಗ ಐದು ವರ್ಷಗಳ ಚಕ್ರಕ್ಕೆ 5,966.4 ಕೋಟಿ ರೂ.ಗೆ ತಲುಪಿದೆ. ಅಂದರೆ, ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 67.8 ಕೋಟಿ ರೂ. ಪಾವತಿಸಬೇಕಿದೆ.
ಐಪಿಎಲ್ ಮಾಧ್ಯಮ ಹಕ್ಕುಗಳು (ಡಿಜಿಟಲ್ ಮತ್ತು ಟಿವಿ ಸಂಯೋಜಿತ) 2023-27ರ ಚಕ್ರಕ್ಕೆ ಕಳೆದ ವರ್ಷ 48,940 ಕೋಟಿ ರೂ. (ಸುಮಾರು 5.2 ಬಿಲಿಯನ್ ಡಾಲರ್) ಗೆ ತಲುಪಿದೆ. Viacom18 ಡಿಜಿಟಲ್ ಹಕ್ಕುಗಳನ್ನು ಮತ್ತು ಸ್ಟಾರ್ ಸ್ಪೋರ್ಟ್ಸ್ ಟಿವಿ ಹಕ್ಕುಗಳನ್ನು ಸೀಲಿಂಗ್ ಮಾಡಿದೆ. ಇದು ಪ್ರತಿ ಐಪಿಎಲ್ ಪಂದ್ಯದ ಮೌಲ್ಯವು 118 ಕೋಟಿ ರೂ. ತಲುಪಿದೆ.
ಟೆಂಡರ್‌ಗೆ ಆಹ್ವಾನ ಪ್ರಕಾರ, ಟಿವಿ ಹಕ್ಕುಗಳ ಮೂಲ ಬೆಲೆಯನ್ನು ಪ್ರತಿ ಪಂದ್ಯಕ್ಕೆ 20 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಮತ್ತು ಡಿಜಿಟಲ್ ಹಕ್ಕುಗಳಿಗೆ 25 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಒಟ್ಟಾರೆಯಾಗಿ, ಉಪಖಂಡದಲ್ಲಿ ಪ್ರಸಾರವಾಗಲಿರುವ ಪ್ರತಿ ಭಾರತ ತಂಡದ ಪಂದ್ಯದ ಮೂಲ ಬೆಲೆಯನ್ನು 45 ಕೋಟಿ ರೂ.ಗೆ ಕೊಂಡೊಯ್ದಿದೆ.
ಆದಾಗ್ಯೂ, ಪ್ರತಿ ಪಂದ್ಯದ ಒಟ್ಟು ಮೌಲ್ಯವು 60 ಕೋಟಿ ರೂ.ಗಿಂತ ಕಡಿಮೆಯಾದರೆ, ಇ-ಹರಾಜನ್ನು ರದ್ದುಗೊಳಿಸುವ ಹಕ್ಕನ್ನು ಅವರು ಹೊಂದಿರುತ್ತಾರೆ ಎಂದು ಬಿಸಿಸಿಐ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications