"ಆ ಸ್ಪಿನ್ ಬೌಲರ್, ಬ್ಯಾಟಿಂಗ್‌ನಲ್ಲೂ ಕಾಣಿಕೆ ನೀಡಲು ಬಯಸುತ್ತಾನೆ"
ಇಂಗ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯವನ್ನು 2 ವಿಕೆಟ್‌ಗಳಿಂದ ಗೆದ್ದ ಟೀಮ್ ಇಂಡಿಯಾ ಅಬ್ಬರಿಸಿದೆ. ಚೆನ್ನೈನಲ್ಲಿ ಚಿನ್ನದಂತಹ ಆಟವನ್ನು ಆಡಿದ ಭಾರತ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಪುಟಿದೇಳುವ ಇಂಗ್ಲೆಂಡ್ ಪ್ಲ್ಯಾನ್ ಎಲ್ಲ ಉಲ್ಟಾ ಆಗಿದೆ. ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವ ಸೂಚನೆಯನ್ನು ನೀಡಿದ್ದ, ಪ್ರವಾಸಿ ತಂಡ ಕೊನೆಯಲ್ಲಿ ಮುಗ್ಗರಿಸಿದೆ. ಟೀಮ್ ಇಂಡಿಯಾದ ಸಂಘಟಿತ ಆಟವನ್ನು ನಾಯಕ ಸೂರ್ಯಕುಮಾರ್ ಯಾದವ್ ಗುಣಗಾನ ಮಾಡಿದ್ದಾರೆ.
ಚೆನ್ನೈನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 165 ರನ್ ಸೇರಿಸಿತು. ಇದಕ್ಕುತ್ತವಾಗಿ ಬ್ಯಾಟ್ ಮಾಡಿದ ಭಾರತ ಇನ್ನು ನಾಲ್ಕು ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ಜಯ ದಾಖಲಿಸಿತು. ಪಂದ್ಯದ ಬಳಿಕ ಮಾತನಾಡಿದ ಸೂರ್ಯ ಪ್ರತಿಯೊಬ್ಬ ಆಟಗಾರನ ಆಟವನ್ನು ಶ್ಲಾಘಿಸಿದರು.

ಪಂದ್ಯ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಪಂದ್ಯ ಗೆದ್ದಿರುವುದು ಸಮಾಧಾನ ತಂದಿದೆ. ಪಂದ್ಯ ಸಾಗುತ್ತಿದ್ದ ರೀತಿಯನ್ನು ಕಂಡಾಗ 160 ಉತ್ತಮ ಮೊತ್ತ ಎಂದು ಕಾಣಿಸಿತು. ನಮ್ಮ ತಂಡದ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದರಿಂದ ಗೆಲುವಿ ಸಾಧ್ಯವಾಯಿತು. ಈ ಪಂದ್ಯದಲ್ಲಿ ನಾವು ಒಬ್ಬ ಎಕ್ಸ್ ಟ್ರಾ ಬ್ಯಾಟರ್‌ನೊಂದಿಗೆ ಕಣಕ್ಕೆ ಇಳಿದಿದ್ದವು. ಆಗ ಬೌಲಿಂಗ್ ಸಮಸ್ಯೆ ಎದುರಾಗಿತ್ತು. ಈ ವೇಳೆ ಬ್ಯಾಟರ್‌ಗಳು ಮೂರನಾಲ್ಕು ಓವರ್ ಬೌಲ್ ಮಾಡಿ ತಂಡಕ್ಕೆ ಅಧಾರವಾದರು ಎಂದಿದ್ದಾರೆ.
ಮೈದಾನದಲ್ಲಿ ಆಕ್ರಮಣಕಾರಿ ಆಟವನ್ನು ನೋಡಿ ಖುಷಿ ಆಯಿತು. ಬ್ಯಾಟರ್‌ಗಳು ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡಿ ಸಣ್ಣ ಸಣ್ಣ ಜೊತೆಯಾಟದ ಕಾಣಿಕೆ ನೀಡಿದರು. ತಿಲಕ್ ವರ್ಮಾ ಬ್ಯಾಟ್ ಮಾಡಿದ ರೀತಿ ನಿಜಕ್ಕೂ ಖುಷಿ ನೀಡಿತು. ತಂಡದ ಭರವಸೆಯ ಆಟಗಾರ ಈ ರೀತಿ ಜವಾಬ್ದಾರಿ ತೆಗೆದುಕೊಳ್ಳುವುದು ತಂಡದ ಮನೋಬಲ ಹೆಚ್ಚಿಸುತ್ತದೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಸ್ಪಿನ್ ಬೌಲರ್ ರವಿ ಬಿಷ್ಣೋಯಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಬಗ್ಗೆಯೂ ತಲೆ ಕೆಡಿಸಿಕೊಂಡಿದ್ದರು. ಅಲ್ಲದೆ ಅವರು ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬೇಕು ಎಂಬ ಆಸೆ ಹೊಂದಿದ್ದರು. ಪರಿಣಾಮ ಇಂಗ್ಲೆಂಡ್ ವಿರುದ್ಧ ಸಿಕ್ಕ ಅವಕಾಶವನ್ನು ರವಿ ಚೆನ್ನಾಗಿ ಬಳಸಿಕೊಂಡು ಎಂದು ಟೀಮ್ ಇಂಡಿಯಾದ ಕ್ಯಾಪ್ಟನ್ ಸೂರ್ಯ ತಿಳಿಸಿದ್ದಾರೆ.
ಬಟ್ಲರ್ ಗುಣಗಾನ
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ತಿಲಕ್ ವರ್ಮಾ ಬ್ಯಾಟ್ ಮಾಡಿದ ರೀತಿಯನ್ನು ಕಂಡು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಸಹ ಗುಣಗಾನ ಮಾಡಿದರು. ನಾವು ಚೆನ್ನಾಗಿ ಬೌಲಿಂಗ್ ನಡೆಸಿದವು. ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಾಗ ನಾವು ಇನ್ನಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಬೇಕಿತ್ತು. ನಮ್ಮ ತಂಡದ ಭರವಸೆಯ ಆಟಗಾರರು ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ನಾವು ಈ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿಯುತ್ತೇವೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications