ನಾಗ್ಪುರ, ಮೇ 9: ಕೊರೊನಾವೈರಸ್, ಲಕ್ಡೌನ್ನಿಂದಾಗಿ ದುಡಿಯುವ ಜನರ ಬದುಕೇ ಸಂಕಷ್ಟದಲ್ಲಿದೆ. ಈ ನಡುವೆ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ (ವಿಸಿಎ) ಅಂಪೈರ್ಗಳ ಬದುಕು ಇನ್ನೂ ತೊಂದರೆಗೆ ಸಿಲುಕಿದೆ. ಅಂಪೈರಿಂಗ್ ಮಾಡಿದ್ದಕ್ಕಾಗಿ ಈ ಆರ್ಥಿಕ ವರ್ಷ ಕೊನೆಗೊಳ್ಳುವುದಕ್ಕೂ ಮುನ್ನ ವೇತನದ ನಿರೀಕ್ಷೆಯಲ್ಲಿದ್ದ ಅಂಪೈರ್ಗಳಿಗೆ ಅಲ್ಲಿನ ಕ್ರೀಡಾ ಮಂಡಳಿ ಇನ್ನೂ ವೇತನ ನೀಡಿಲ್ಲ.
ತನ್ನ 'ಫೇವರಿಟ್ ಸಿಕ್ಸ್'ನ ವೀಡಿಯೋ ಶೇರ್ ಮಾಡಿದ ಸಿಕ್ಸರ್ ಕಿಂಗ್ ಯುವಿ
ಕಳೆದ ವರ್ಷ 2019ರಿಂದ ಈ ವರ್ಷ ಮಾರ್ಚ್ ವರೆಗೂ ನಡೆದಿದ್ದ ಪಂದ್ಯಗಳಲ್ಲಿ ಅಂಪೈರಿಂಗ್ ಕರ್ತವ್ಯ ನಿರ್ವಹಿಸಿದ್ದ ಅಂಪೈರ್ಗಳಿಗೆ ವಿಸಿಎ ವೇತನ ನೀಡದೆ ಬಾಕಿ ಉಳಿಸಿಕೊಂಡಿದೆ. ಕೊರೊನಾ ವೈರಸ್ನಿಂದ ಲಾಕ್ ಡೌನ್ ವಿಧಿಸಲಾಗಿರುವುದರಿಂದ ವೇತನ ದೊರೆಯದ ಅಂಪೈರ್ಗಳ ಪರಿಸ್ಥಿತಿ ತೊಂದರೆಯಲ್ಲಿದೆ.
ಭಾರತದಲ್ಲಿ ಆಡೋದು ನಮ್ಮ ಪಾಲಿಗೆ ಬಲು ಕಷ್ಟಕರ: ಡೇವಿಡ್ ವಾರ್ನರ್
ಮಾರ್ಚ್-ಏಪ್ರಿಲ್ಗೆ ಮುನ್ನವೇ ಅಂಪೈರ್ಗಳಿಗೆ ವಿಸಿಎ ವೇತನ ನೀಡಿದ್ದರೆ ಒಳ್ಳೆಯದಿತ್ತು. ಆದರೆ ಮಾರ್ಚ್ ಬಳಿಕ ಕೊರೊನಾದಿಂದ ಇತ್ತ ಕ್ರೀಡಾಸ್ಪರ್ಧೆಗೂ ನಡೆಯದಿರುವುದು ಒಂದು ಕಡೆಯಾದರೆ, ಮಾಡಿದ ಕೆಲಸಕ್ಕೆ ವೇತನವೂ ದೊರೆಯದೆ ಅಂಪೈರ್ಗಳು ಪರಿತಪಿಸುವಂತಾಗಿದೆ.
ಟಿ20 ವಿಶ್ವಕಪ್ ತಂಡ ಆಯ್ಕೆ ಮಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ : ಬಲಿಷ್ಠ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ!
ವಿಸಿಎ ಪ್ಯಾನೆಲ್ ಅಂಪೈರ್ಗಳಿಗೆ ಕಳೆದ ಡಿಸೆಂಬರ್ 12ರಂದು ಬಾಕಿ ವೇತನ ಪಾವತಿಸಲಾಗಿತ್ತು. ಇನ್ನು ನಾನ್-ಪ್ಯಾನೆಲ್ನ ಸ್ಪಲ್ಪ ಮಂದಿಗೆ ಜನವರಿಯಲ್ಲಿ ಬಾಕಿ ಹಣ ನೀಡಲಾಗಿತ್ತು. ಉಳಿದವರಿಗೆ ಶೀಘ್ರವೇ ವೇತನ ನೀಡುವುದಾಗಿ ತಿಳಿಸಲಾಗಿತ್ತು. ಅದಾಗಿ ಮತ್ತೆ ಯಾರಿಗೂ ಅನಂತರದ ವೇತನವೇ ದೊರೆತಿಲ್ಲ. ಎಲ್ಲರೂ ವೇತನಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ತಿಳಿದು ಬಂದಿದೆ.