ಐಪಿಎಲ್ ವೀಕ್ಷಿಸಬೇಕಾದ್ರೆ ನೀವು ಡಿಸ್ನಿ+ಹಾಟ್‌ಸ್ಟಾರ್ ಸಬ್ಸ್ಕ್ರೈಬ್ ಮಾಡಿರಬೇಕು!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇನ್ನು ಎರಡು ವಾರಗಳಲ್ಲಿ ಚಾಲನೆಗೊಳ್ಳಲಿದೆ. ನೆಟ್ಟಿಗರಾಗಿದ್ದು ನೀವು ಈ ಬಾರಿಯ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬೇಕಾದರೆ ಡಿಸ್ನಿ+ಹಾಟ್‌ಸ್ಟಾರ್‌ನ ವಾರ್ಷಿಕ ಸಬ್‌ಸ್ಕ್ರಿಪ್ಶನ್ (ಚಂದಾದಾರಿಕೆ) ಪಡೆದಿರಬೇಕು. ಪಂದ್ಯಗಳ ಲೈವ್ ಸ್ಟ್ರೀಮ್ ನೀಡುವ ಡಿಸ್ನಿ+ಹಾಟ್‌ಸ್ಟಾರ್ ಹೀಗಂದಿದೆ.
13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ, ಶಾರ್ಜಾ ಮತ್ತು ಅಬುಧಾಬಿ ತಾಣಗಳಲ್ಲಿ ನಡೆಯಲಿದೆ. ಪಂದ್ಯಗಳ ನೇರಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲಭಿಸಲಿದೆ.
ಡಿಸ್ನಿ+ಹಾಟ್‌ಸ್ಟಾರ್ ವಾರ್ಷಿಕ ಚಂದಾದಾರಿಕೆಯ ದರ, ಆಫರ್‌ಗಳ ಮಾಹಿತಿ ಕೆಳಗಿದೆ ನೋಡಿ.

ವಾರ್ಷಿಕ ಚಂದಾದಾರಿಕೆ ದರ
ಈ ಬಾರಿಯ ಐಪಿಎಲ್ ಪಂದ್ಯಗಳ ನೇರ ಪ್ರಸಾರವನ್ನು ನೆಟ್ಟಿಗರು ವೀಕ್ಷಿಸಬೇಕಾದರೆ ಡಿಸ್ನಿ+ಹಾಟ್‌ಸ್ಟಾರ್ ವಾರ್ಷಿಕ ಚಂದಾದಾರಿಕೆ ಪಡೆದಿರಬೇಕು. ಡಿಸ್ನಿ+ಹಾಟ್‌ಸ್ಟಾರ್‌ನ ನೂತನ ವಾರ್ಷಕ ಚಂದಾದಾರಿಕೆಯ ದರ ವಿಐಪಿಗೆ 399 ರೂ. (12 ತಿಂಗಳಿಗೆ), ಪ್ರೀಮಿಯಮ್‌ಗೆ 1,499 ರೂ. (12 ತಿಂಗಳಿಗೆ) ಇದೆ.

ಏರ್‌ಟೆಲ್ ರೀಚಾರ್ಜ್
ಏರ್‌ಟೆಲ್ ರೀಚಾರ್ಜ್ ಮಾಡುವ ಮೂಲಕವೂ ನೀವು ಡಿಸ್ನಿ+ಹಾಟ್‌ಸ್ಟಾರ್ ವಾರ್ಷಿಕ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು. ನೀವು 448 ರೂ.ಗಳ ಏರ್‌ಟೆಲ್ ರೀಚಾರ್ಜ್ ಮಾಡಿಕೊಂಡರೆ, ನಿಮಗೆ 28 ದಿನಗಳವರೆಗೆ ದಿನಕ್ಕೆ 3GB ಡೇಟಾ, ಅನ್‌ಲಿಮಿಟೆಡ್ ಕಾಲ್ ಆಫರ್ ಜೊತೆಗೆ ಒಂದು ವರ್ಷದ ಡಿಸ್ನಿ+ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಸಿಗಲಿದೆ.

ಒಂದು ವರ್ಷದ ಆಫರ್
ನೀವು 2698 ರೂ.ಗಳ ಏರ್‌ಟೆಲ್ ರೀಚಾರ್ಜ್ ಮಾಡಿಕೊಂಡರೆ, ನಿಮಗೆ 365 ದಿನಗಳ ಕಾಲ ಅನ್‌ಲಿಮಿಟೆಡ್ ಕಾಲ್, ದಿನಕ್ಕೆ 2 GB ಡೇಟಾ ಆಫರ್ ಜೊತೆಗೆ ಒಂದು ವರ್ಷದ ಡಿಸ್ನಿ+ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಸಿಗುತ್ತದೆ.

ಜಿಯೋ ಜೊತೆಗೂ ಟೈಅಪ್
ಏರ್‌ಟೆಲ್ ಅಲ್ಲದೆ ಜಿಯೋ ಜೊತೆಗೂ ಡಿಸ್ನಿ+ಹಾಟ್‌ಸ್ಟಾರ್ ಟೈಅಪ್ ಮಾಡಿಕೊಂಡಿದೆ. ಜಿಯೋ ರೀಚಾರ್ಜ್ ಮೂಲಕವೂ ನೀವು ಈ ಬಾರಿಯ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದು. ಜೊತೆಗೆ ನಿಮಗೆ ಮೈಖೇಲ್ ಕನ್ನಡದಲ್ಲೂ ಪಂದ್ಯಗಳ ಲೈವ್ ಸ್ಕೋರ್‌ಕಾರ್ಡ್, ಲೈವ್ ಅಪ್‌ಡೇಟ್ಸ್ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications