Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೌರಾಷ್ಟ್ರ ತಂಡದಲ್ಲಿ ಪೂಜಾರಾ, ಜಡೇಜ ಇದ್ರೂ ಉತ್ತಪ್ಪನೇ ಆಧಾರ!

Robin Uthappa

ಬೆಂಗಳೂರು, ಸೆಪ್ಟೆಂಬರ್ 17: 2018-19ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಮೆಂಟ್ ಗೆ 18 ಸದಸ್ಯರ ಸೌರಾಷ್ಟ್ರ ತಂಡವನ್ನು ಪ್ರಕಟಿಸಲಾಗಿದೆ. ಇಂಗ್ಲೆಂಡ್ ಪ್ರವಾಸದಿಂದ ಮರಳಿರುವ ಚೇತೇಶ್ವರ್ ಪೂಜಾರಾ ಹಾಗೂ ರವೀಂದ್ರ ಜಡೇಜ ಅವರು ತಂಡಕ್ಕೆ ಮರಳಿದ್ದಾರೆ.

ಆದರೆ, ಕರ್ನಾಟಕದಿಂದ ವಲಸೆ ಬಂದಿರುವ ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ ಅವರೇ ಆಧಾರವಾಗಲಿದ್ದಾರೆ. ಪೂಜಾರಾ ಹಾಗೂ ಜಡೇಜ ಅವರು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿರುವುದರಿಂದ ವಿಜಯ್ ಹಜಾರೆ ಟ್ರೋಫಿ ಪೂರ್ತಿ ಪಂದ್ಯಾವಳಿಗೆ ಅಲಭ್ಯರಾಗಲಿದ್ದಾರೆ.

ಅಕ್ಟೋಬರ್ 04ರಿಂದ ಅತಿಥೇಯ ಭಾರತದ ವಿರುದ್ಧ ರಾಜ್ ಕೋಟ್ ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ವಿಂಡೀಸ್ ತಂಡ ಆಡಲಿದೆ. 2 ಟೆಸ್ಟ್, 5 ಏಕದಿನ ಕ್ರಿಕೆಟ್ ಹಾಗೂ 3 ಟಿ20ಐ ಪಂದ್ಯಗಳು ನಿಗದಿಯಾಗಿವೆ.

ಕಳೆದ ಬಾರಿ ರನ್ನರ್ ಅಪ್ ತಂಡವಾಗಿದ್ದ ಸೌರಾಷ್ಟ್ರವು ಈ ಬಾರಿ ಸೆಪ್ಟೆಂಬರ್ 19ರಂದು ಉತ್ತರಪ್ರದೇಶ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಸೌರಾಷ್ಟ್ರ ತಂಡ ಪ್ರಕಟವಾಗಿದ್ದರೂ ನಾಯಕ ಯಾರು ಎಂಬ ಕುತೂಹಲ ಇನ್ನೂ ಕಾಯ್ದುಕೊಳ್ಳಲಾಗಿದೆ.

ಈ ಬಾರಿ ಬಿ ಗುಂಪಿನಲ್ಲಿರುವ ಸೌರಾಷ್ಟ್ರ ಜತೆಗೆ ದೆಹಲಿ, ಮಧ್ಯಪ್ರದೇಶ, ಒಡಿಶಾ, ಹೈದರಾಬಾದ್, ಉತ್ತರಪ್ರದೇಶ, ಕೇರಳ, ಸೌರಾಷ್ಟ್ರ, ಆಂಧ್ರಪ್ರದೇಶ ಹಾಗೂ ಛತ್ತೀಸ್ ಗಢ ಕೂಡಾ ಸ್ಪರ್ಧೆಯಲ್ಲಿವೆ.

ತಂಡ : ಜಯದೇವ್ ಶಾ, ಚೇತೇಶ್ವರ್ ಪೂಜಾರಾ, ರವೀಂದ್ರ ಜಡೇಜ, ರಾಬಿನ್ ಉತ್ತಪ್ಪ, ಶೆಲ್ಡನ್ ಜಾಕ್ಸನ್, ಜಯದೇವ್ ಉನದ್ಕತ್, ಸಮರ್ಥ್ ವ್ಯಾಸ್, ಅರ್ಪಿತ್ ವಾಸವಾದ, ಅವಿ ಬರೋತ್, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಧರ್ಮೇಂದ್ರ ಜಡೇಜ, ಕಮಲೇಶ್ ಮಕ್ವಾನಾ, ಯುವರಾಜ್ ಚೂಡಾಸಮ, ಶೌರ್ಯ ಸನಂದಿಯ, ಅಗ್ನಿವೇಶ್ ಆಯಚ್, ಹಾರ್ದಿಕ್ ರಾಥೋಡ್.

Story first published: Monday, September 17, 2018, 19:42 [IST]
Other articles published on Sep 17, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+