ವಿಜಯ್ ಹಜಾರೆ ಟ್ರೋಫಿ 2022: ರಣಜಿ ಚಾಂಪಿಯನ್ ತಂಡಕ್ಕೆ ಮಣ್ಣುಮುಕ್ಕಿಸಿದ ಜಮ್ಮು ಮತ್ತು ಕಾಶ್ಮೀರ

ನವೆಂಬರ್ 12ರಿಂದ ಆರಂಭವಾಗಿರುವ 2022ರ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಮೊದಲನೇ ದಿನವೇ ಅಚ್ಚರಿ ಫಲಿತಾಂಶ ಬಂದಿದ್ದು, ಹಾಲಿ ರಣಜಿ ಚಾಂಪಿಯನ್ ಆಗಿರುವ ಮಧ್ಯಪ್ರದೇಶ ತಂಡವನ್ನು ಜಮ್ಮು ಮತ್ತು ಕಾಶ್ಮೀರ ತಂಡ ರೋಚಕವಾಗಿ ಸೋಲಿಸಿತು.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ವಿಜಯ್ ಹಜಾರೆ ಟ್ರೋಫಿಯ ಡಿ ಗುಂಪಿನ ಪಂದ್ಯದಲ್ಲಿ ಎರಡು ವಿಕೆಟ್‌ಗಳಿಂದ ಮಧ್ಯಪ್ರದೇಶಕ್ಕೆ ಆಘಾತ ನೀಡುವ ಮೂಲಕ ಜಮ್ಮು ಮತ್ತು ಕಾಶ್ಮೀರವು ತಂಡವು ಐತಿಹಾಸಿಕ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ ತಂಡ, ಆರಂಭಿಕ ಆಟಗಾರ ಯಶ್ ದುಬೆ 13 ಬೌಂಡರಿಗಳ ನೆರವಿನಿಂದ 121 ರನ್ ಗಳಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ ಅಭಿಷೇಕ್ ಭಂಡಾರಿ 81 ಎಸೆತಗಳಲ್ಲಿ 74 ರನ್ ಗಳಿಸಿದರು. ಅವರ ಬ್ಯಾಟ್‌ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸಿಡಿದವು. ಕೊನೆಯಲ್ಲಿ ಮಧ್ಯಪ್ರದೇಶ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 342 ರನ್ ಗಳಿಸಿತು.
ಬೃಹತ್ ರನ್ ಗುರಿ ಬೆನ್ನತ್ತಿದ ಜಮ್ಮು ಮತ್ತು ಕಾಶ್ಮೀರ ತಂಡ, ಆರಂಭಿಕ ಬ್ಯಾಟ್ಸ್‌ಮನ್ ವಿವ್ರಾಂತ್ ಶರ್ಮಾ (69 ರನ್), ಹೆನಾನ್ ನಜೀರ್ (68 ರನ್) ಮತ್ತು ಅಬ್ದುಲ್ ಸಮದ್ (66 ರನ್) ಅವರ ಅಮೋಘ ಅರ್ಧಶತಕ ಮತ್ತು ಅಬಿದ್ ಮುಷ್ತಾಕ್ 19 ಎಸೆತಗಳಲ್ಲಿ ಮೂರು ಸಿಕ್ಸರ್, ಮೂರು ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ಗಡಿ ತಲುಪಿಸಿದರು.

ಅವೇಶ್ ಖಾನ್ ಮತ್ತು ಕುಲ್‌ದೀಪ್ ಸೇನ್ ಅವರ ಬೌಲಿಂಗ್ ದಾಳಿಯನ್ನು ಜಮ್ಮು ಮತ್ತು ಕಾಶ್ಮೀರ ತಂಡ ಸಮರ್ಥವಾಗಿ ಎದುರಿಸಿತು. ಆದರೆ ಜಮ್ಮು ಮತ್ತು ಕಾಶ್ಮೀರಕ್ಕೆ 21 ಎಸೆತಗಳಲ್ಲಿ 31 ರನ್‌ಗಳ ಅಗತ್ಯವಿರುವಾಗ 47ನೇ ಓವರ್‌ನಲ್ಲಿ ಅವೇಶ್ ಖಾನ್ ಔಟಾಗಿದ್ದು, ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.
ಕೊನೆಯಲ್ಲಿ ಸಾಹಿಲ್ ಲೊತ್ರಾ 11 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ ಔಟಾಗದೆ 23 ರನ್ ಮತ್ತು ಔಕಿಬ್ ನಬಿ ಔಟಾಗದೆ 9 ಎಸೆತಗಳಲ್ಲಿ 11 ರನ್ ಗಳಿಸಿ, ಒಂಬತ್ತನೇ ವಿಕೆಟ್‌ಗೆ 34 ರನ್‌ಗಳ ಮುರಿಯದ ಜೊತೆಯಾಟ ನೀಡಿ, ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಗೆಲುವು ದೊರಕಿಸಿಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications