For Quick Alerts
ALLOW NOTIFICATIONS  
For Daily Alerts
 

Vijay Hazare Trophy: ರೋಹಿತ್ ಶರ್ಮಾರ 264 ರನ್ ದಾಖಲೆ ಧೂಳಿಪಟ ಮಾಡಿದ ಜಗದೀಸನ್

Vijay Hazare Trophy 2022: N Jagadeesan Breaks Rohit Sharmas Record Of 264 Runs

ಸೋಮವಾರ (ನವೆಂಬರ್ 21) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ 2022ರ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ತಮಿಳುನಾಡಿನ ನಾರಾಯಣ್ ಜಗದೀಸನ್ ದಾಖಲೆ ಮೇಲೆ ದಾಖಲೆ ಬರೆದರು.

ಭಾರತೀಯ ಬ್ಯಾಟರ್‌ನಿಂದ ಗರಿಷ್ಠ ಸ್ಕೋರ್ ಗಳಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಎನ್ ಜಗದೀಸನ್ ಮುರಿದರು.

ವಿಜಯ್ ಹಜಾರೆ ಟ್ರೋಫಿ 2022 ರಲ್ಲಿ ದಾಖಲೆ ಮುರಿಯುವ ದಿನವಾಗಿದ್ದು, ಸೋಮವಾರ (ನವೆಂಬರ್ 21) ಬೆಂಗಳೂರಿನಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ತಮಿಳುನಾಡು ಮತ್ತು ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ ನಾರಾಯಣ್ ಜಗದೀಸನ್ ಕೇವಲ 141 ಎಸೆತಗಳಲ್ಲಿ 277 ರನ್ ಸಿಡಿಸಿದರು.

ಅರುಣಾಚಲ ಪ್ರದೇಶ ವಿರುದ್ಧ ತಮಿಳುನಾಡು ಬೃಹತ್ ಮೊತ್ತ

ಅರುಣಾಚಲ ಪ್ರದೇಶ ವಿರುದ್ಧ ತಮಿಳುನಾಡು ಬೃಹತ್ ಮೊತ್ತ

2022ರ ವಿಜಯ್ ಹಜಾರೆ ಟ್ರೋಫಿಯ ಎಲೈಟ್ ಗ್ರೂಪ್ ಸಿ ಸ್ಪರ್ಧೆಯ 6ನೇ ಸುತ್ತಿನಲ್ಲಿ ಅರುಣಾಚಲ ಪ್ರದೇಶ ವಿರುದ್ಧ ತಮಿಳುನಾಡು ಬೃಹತ್ ಮೊತ್ತ ದಾಖಲಿಸುವುದರ ಜೊತೆಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳು ರನ್‌ಗಳನ ಸುರಿಮಳೆಗೈದರು.

ಎನ್ ಜಗದೀಸನ್ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಸತತ ಐದು ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. 2014-15ರ ಋತುವಿನಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದ ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ಅವರ ಈ ಹಿಂದಿನ ದಾಖಲೆಯನ್ನು ಮುರಿದರು.

ಜಗದೀಸನ್ 141 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 25 ಬೌಂಡರಿ

ಜಗದೀಸನ್ 141 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 25 ಬೌಂಡರಿ

ಎನ್ ಜಗದೀಸನ್ ಅಂತಿಮವಾಗಿ 141 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 25 ಬೌಂಡರಿಗಳೊಂದಿಗೆ 277 ರನ್ ಗಳಿಸಿ ಔಟಾದರು. ಇದೇ ವೇಳೆ ಗ್ಲಾಮೊರ್ಗಾನ್ ವಿರುದ್ಧ ಸರ್ರೆ ಪರ ಅಲಿಸ್ಟರ್ ಬ್ರೌನ್ ಅವರ 268 ರನ್‌ಗಳನ್ನು ಮೀರಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ನ ದಾಖಲೆ ಬರೆದರು.

ಅಲ್ಲದೇ ಈ ಹಿಂದೆ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದ್ದ ಭಾರತದ ನಾಯಕ ರೋಹಿತ್ ಶರ್ಮಾ ಅವರು 2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 264 ರನ್‌ಗಳ ದಾಖಲೆಯನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಎನ್ ಜಗದೀಸನ್ ಹಿಂದಿಕ್ಕಿದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಗಳಿಸಿದ 6ನೇ ಬ್ಯಾಟ್ಸ್‌ಮನ್

ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಗಳಿಸಿದ 6ನೇ ಬ್ಯಾಟ್ಸ್‌ಮನ್

ತಮಿಳುನಾಡಿನ ಆರಂಭಿಕರಾದ ಎನ್ ಜಗದೀಸನ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್‌ ಜೊತೆಯಾಟಕ್ಕೆ 416 ರನ್‌ಗಳನ್ನು ಸೇರಿಸಿದರು. ಸಾಯಿ ಸುದರ್ಶನ್ 102 ಎಸೆತಗಳಲ್ಲಿ 154 ರನ್ ಗಳಿಸಿದರು. ಅಂತಿಮವಾಗಿ ಅರುಣಾಚಲ ಪ್ರದೇಶ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ತಮಿಳುನಾಡು 50 ಓವರ್‌ಗಳಲ್ಲಿ 2 ವಿಕೆಟ್‌ಗೆ 506 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಜಗದೀಸನ್ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಇತಿಹಾಸದಲ್ಲಿ ದ್ವಿಶತಕ ಗಳಿಸಿದ ಆರನೇ ಬ್ಯಾಟ್ಸ್‌ಮನ್ ಎನಿಸಿದರು ಮತ್ತು ಈ ಋತುವಿನಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಆಗಿದ್ದಾರೆ.

ಮೊದಲ ವಿಕೆಟ್‌ಗೆ 416 ರನ್‌ಗಳ ಆರಂಭಿಕ ಜೊತೆಯಾಟವು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಆಗಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಅವರ ಹಿಂದಿನ ದಾಖಲೆಗಳನ್ನು ಕೂಡ ಎನ್ ಜಗದೀಸನ್ ಬ್ರೇಕ್ ಮಾಡಿದ್ದಾರೆ.

Story first published: Monday, November 21, 2022, 16:18 [IST]
Other articles published on Nov 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+