ವಿಜಯ್ ಹಜಾರೆ ಟ್ರೋಫಿ 2022: ರುತುರಾಜ್ ಶತಕ; ರೈಲ್ವೇಸ್ ವಿರುದ್ಧ ಮಹಾರಾಷ್ಟ್ರಕ್ಕೆ ಭರ್ಜರಿ ಜಯ

ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಮೊದಲ ದಿನ ರೈಲ್ವೇಸ್ ವಿರುದ್ಧ ಮಹಾರಾಷ್ಟ್ರ ತಂಡ ಭರ್ಜರಿ ಗೆಲುವು ಸಾಧಿಸಿದೆ. ಶನಿವಾರ, ನವೆಂಬರ್ 12ರಂದು ರಾಂಚಿಯ ಮೆಟಲರ್ಜಿಕಲ್ ಮತ್ತು ಇಂಜಿನಿಯರಿಂಗ್ ಕನ್ಸಲ್ಟೆಂಟ್ ಲಿಮಿಟೆಡ್ ಸೈಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಭರ್ಜರಿ ಶತಕದಿಂದ ಮಹಾರಾಷ್ಟ್ರ ಪಂದ್ಯ ಜಯಿಸಿದೆ.
ಮಹಾರಾಷ್ಟ್ರ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ತಮ್ಮ 12ನೇ ಲಿಸ್ಟ್ ಎ ಶತಕ ಸಿಡಿಸಿದರ ಫಲವಾಗಿ ಏಳು ವಿಕೆಟ್‌ಗಳಿಂದ ರೈಲ್ವೇಸ್ ವಿರುದ್ಧ ಮಹಾರಾಷ್ಟ್ರ ಗೆದ್ದು ಬೀಗಿತು ಮತ್ತು ಅಮೂಲ್ಯ ನಾಲ್ಕು ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು.
ರುತುರಾಜ್ ಗಾಯಕ್ವಾಡ್ 123 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಮೇತ 124 ರನ್ ಗಳಿಸಿ ಔಟಾಗದೇ ಉಳಿದರು. ರುತುರಾಜ್ ಗಾಯಕ್ವಾಡ್, 80 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 75 ರನ್ ಗಳಿಸಿದ ರಾಹುಲ್ ತ್ರಿಪಾಠಿ ಅವರೊಂದಿಗೆ ಮೊದಲ ವಿಕೆಟ್‌ಗೆ 165 ರನ್‌ಗಳ ಜೊತೆಯಾಟ ನೀಡಿ ತಮ್ಮ ತಂಡಕ್ಕೆ ಭದ್ರ ಬುನಾದಿ ಹಾಕಿದರು.

10 ಓವರ್‌ಗಳಲ್ಲಿ 36 ರನ್‌ಗಳನ್ನು ಬಿಟ್ಟುಕೊಟ್ಟ ಆಕಾಶ್ ಪಾಂಡೆ
ರಾಹುಲ್ ತ್ರಿಪಾಠಿ ಲೆಗ್ ಸ್ಪಿನ್ನರ್ ಕರಣ್ ಶರ್ಮಾಗೆ ವಿಕೆಟ್ ಒಪ್ಪಿಸಿದ ನಂತರ, ಮಹಾರಾಷ್ಟ್ರ ತಂಡವು ಕೇದಾರ್ ಜಾಧವ್ ಮತ್ತು ಅಜೀಮ್ ಕಾಜಿ ಅವರ ವಿಕೆಟ್‌ಗಳನ್ನು ಬೇಗ ಕಳೆದುಕೊಂಡಿತು. ಆದರೆ ಅಷ್ಟೊತ್ತಿಗಾಗಲೇ ರೈಲ್ವೇಸ್ ತಂಡದ ಸೋಲು ಖಚಿತವಾಗಿತ್ತು.
ರೈಲ್ವೇಸ್ ಪರ ಶಿವಂ ಚೌಧರಿ, ಯುವರಾಜ್ ಸಿಂಗ್ ಮತ್ತು ನಾಯಕ ಕರಣ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು. ಆಕಾಶ್ ಪಾಂಡೆ ವಿಕೆಟ್ ಪಡೆಯದೇ ಹೋದರೂ, 3.6ರ ಎಕಾನಮಿ ದರದಲ್ಲಿ 10 ಓವರ್‌ಗಳಲ್ಲಿ 36 ರನ್‌ಗಳನ್ನು ಬಿಟ್ಟುಕೊಟ್ಟರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಹಾರಾಷ್ಟ್ರ
ಇದಕ್ಕೂ ಮೊದಲು ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಹಾರಾಷ್ಟ್ರ ತಂಡವು ರೈಲ್ವೇಸ್ ತಂಡವನ್ನು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್‌ಗಳಿಗೆ ನಿಯಂತ್ರಿಸಿತು. ಬಲಗೈ ಆಫ್ ಸ್ಪಿನ್ನರ್ ಶಂಶುಜಾಮ ಕಾಜಿ 26 ರನ್ ನೀಡಿ ಎರಡು ವಿಕೆಟ್‌ಗಳನ್ನು ಪಡೆದರು ಮತ್ತು ತಮ್ಮ ತಂಡದ ಪರ ಅತ್ಯುತ್ತಮ ಬೌಲರ್ ಎನಿಸಿದರು. ಮುಖೇಶ್ ಚೌಧರಿ, ಮನೋಜ್ ಇಂಗಳೆ, ಸತ್ಯಜೀತ್ ಬಚಾವ್ ಮತ್ತು ಅಜೀಂ ಕಾಜಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ರೈಲ್ವೇಸ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ
ಶಿವಂ ಚೌಧರಿ ಮತ್ತು ವಿವೇಕ್ ಸಿಂಗ್ 19.5 ಓವರ್‌ಗಳಲ್ಲಿ ಆರಂಭಿಕ ವಿಕೆಟ್‌ಗೆ 81 ರನ್‌ಗಳ ಜೊತೆಯಾಟದಿಂದ ರೈಲ್ವೇಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ, ನಂತರದ ಆಟದಲ್ಲಿ ವಿಕೆಟ್‌ಗಳು ಉರುಳಿದ್ದರಿಂದ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ರೈಲ್ವೇಸ್ ಪರ ಶಿವಂ ಚೌಧರಿ ಗರಿಷ್ಠ 46 ರನ್ ಗಳಿಸಿದರೆ, ವಿವೇಕ್ 32 ರನ್ ಗಳಿಸಿ ಔಟಾದರು. ಮೂರು ಓವರ್‌ಗಳ ಅಂತರದಲ್ಲಿ ಇಬ್ಬರೂ ಆರಂಭಿಕರು ಔಟಾದ ನಂತರ, ರೈಲ್ವೇಸ್ ತಂಡದ ಬ್ಯಾಟಿಂಗ್ ಹಾದಿ ಕಠಿಣವಾಗಿತ್ತು. ನಾಯಕ ಕರಣ್ ಶರ್ಮಾ 33 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications