For Quick Alerts
ALLOW NOTIFICATIONS  
For Daily Alerts
 

Vijay Hazare Trophy: ಅರುಣಾಚಲ ವಿರುದ್ಧ 435 ರನ್‌ಗಳ ದಾಖಲೆ ಅಂತರದಲ್ಲಿ ಗೆದ್ದ ತಮಿಳುನಾಡು

Vijay Hazare Trophy 2022: Tamil Nadu Beat Arunachal Pradesh By 435 Runs Margin

ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶ ತಂಡವನ್ನು ಸೋಲಿಸುವ ಮೂಲಕ ತಮಿಳುನಾಡು ಸೋಮವಾರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಅಂತರದ ಗೆಲುವಿನ ವಿಶ್ವದಾಖಲೆಯನ್ನು ಮುರಿದಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 435 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ1990ರಲ್ಲಿ ಡೆವೊನ್ ವಿರುದ್ಧ ಸೋಮರ್‌ಸೆಟ್ 346 ರನ್‌ಗಳ ಜಯ ಸಾಧಿಸಿದ್ದ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿತು.

ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 506 ರನ್ ಗಳಿಸಿತ್ತು. ಇದರಲ್ಲಿ ಆರಂಭಿಕ ಬ್ಯಾಟರ್‌ಗಳಾದ ಎನ್ ಜಗದೀಸನ್ ಅವರ 277 ರನ್ ಮತ್ತು ಸಾಯಿ ಸುದರ್ಶನ್ ಅವರ 154 ರನ್‌ಗಳ ಅಮೋಘ ಕೊಡುಗೆ ಇತ್ತು.

507 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಅರುಣಾಚಲ ಪ್ರದೇಶ ತಂಡ 28.4 ಓವರ್‌ಗಳಲ್ಲಿ ಕೇವಲ 71 ರನ್ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ತಮಿಳುನಾಡು ತಂಡ 435 ರನ್‌ಗಳ ದಾಖಲೆ ಅಂತರದಿಂದ ಗೆದ್ದು ಬೀಗಿತು.

2002ರಲ್ಲಿ ಗ್ಲಾಮೊರ್ಗಾನ್ ವಿರುದ್ಧ ಸರ್ರೆ ಪರ ಅಲಿಸ್ಟೈರ್ ಬ್ರೌನ್ ಅವರ ಹಿಂದಿನ ಗರಿಷ್ಠ 268 ರನ್‌ಗಳ ದಾಖಲೆಯನ್ನು 26 ವರ್ಷದ ನಾರಾಯಣ್ ಜಗದೀಸನ್ 277 ರನ್ ಗಳಿಸುವ ಮೂಲಕ ದಾಖಲೆ ಮುರಿದರೆ, ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 264 ರನ್ ಗಳಿಸಿದ ಭಾರತದ ಪರ ಹೆಚ್ಚು ರನ್ ದಾಖಲೆಯನ್ನು ಸಹ ಧೂಳಿಪಟ ಮಾಡಿದರು.

Vijay Hazare Trophy 2022: Tamil Nadu Beat Arunachal Pradesh By 435 Runs Margin

ಇನ್ನು ಈ ಪಂದ್ಯದಲ್ಲಿ ತಮಿಳುನಾಡು ಎರಡು ವಿಕೆಟ್‌ಗೆ 506 ರನ್ ಗಳಿಸಿದ್ದು, ವಿಶ್ವದ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಂಡದ ಗರಿಷ್ಠ ಮೊತ್ತವಾಗಿದೆ. ಈ ವರ್ಷದ ಆರಂಭದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಇಂಗ್ಲೆಂಡ್ ನಾಲ್ಕು ವಿಕೆಟ್‌ಗೆ 498 ರನ್ ಗಳಿಸಿದ್ದು, ಈ ಹಿಂದಿನ ಅತ್ಯುತ್ತಮ ಮೊತ್ತವಾಗಿದೆ. 2021ರಲ್ಲಿ ಜೈಪುರದಲ್ಲಿ ಪುದುಚೇರಿ ವಿರುದ್ಧ ಮುಂಬೈ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 457 ರನ್ ಗಳಿಸಿದ್ದು, ಭಾರತದ ಹಿಂದಿನ ಗರಿಷ್ಠ ಸ್ಕೋರ್ ಆಗಿತ್ತು.

ಅರುಣಾಚಲ ಪ್ರದೇಶ ಬೌಲಿಂಗ್ ದಾಳಿಯ ವಿರುದ್ಧ ಎನ್ ಜಗದೀಸನ್ ಸ್ಫೋಟಕ ಬ್ಯಾಟಿಂಗ್ ಮೂಲಕ ರನ್‌ಗಳ ಜೊತೆಗೆ ದಾಖಲೆಗಳ ಮಳೆ ಸುರಿಸಿದರು. 114 ಎಸೆತಗಳಲ್ಲಿ 200 ತಲುಪುವ ಮೂಲಕ, ಅವರು ಲಿಸ್ಟ್ ಎ ಇತಿಹಾಸದಲ್ಲಿ ಜಂಟಿ ವೇಗದ ದ್ವಿಶತಕ ಗಳಿಸಿದರು. ಟ್ರಾವಿಸ್ ಹೆಡ್ ಕಳೆದ ವರ್ಷ ಆಸ್ಟ್ರೇಲಿಯಾದ ಮಾರ್ಷ್ ಕಪ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ ದಕ್ಷಿಣ ಆಸ್ಟ್ರೇಲಿಯಾ ಪರ ದ್ವಿಶತಕ ಗಳಿಸಲು 114 ಎಸೆತಗಳನ್ನು ತೆಗೆದುಕೊಂಡಿದ್ದರು.

Story first published: Monday, November 21, 2022, 17:22 [IST]
Other articles published on Nov 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+